ಮೈಸೂರು: ‘ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ರೈಲುಗಳ ಗರಿಷ್ಠ ವೇಗವನ್ನು 110 ರಿಂದ 135 ಕಿ.ಮೀ.ಗೆ ಹೆಚ್ಚಿಸಿದ್ದು, ಇದರಿಂದ ಈ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಒಂದು ಗಂಟೆಗೆ ಇಳಿಯಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರಿನಂತಹ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ರಾಜಧಾನಿಯಿಂದ ಮೈಸೂರಿಗೆ ಸದ್ಯದಲ್ಲೇ ಇನ್ನೂ ಎರಡು ಮೆಮು ರೈಲುಗಳು ಸಂಚರಿಸಲಿವೆ’ ಎಂದರು.
.ಸಿದ್ದರಾಮಯ್ಯ ಅವರಷ್ಟು ಸೋಮಾರಿ ನಾನಲ್ಲ: ಸೋಮಣ್ಣ ತಿರುಗೇಟು.ರೈಲ್ವೆ ಮಾರ್ಗ ಯೋಜನೆಗೆ ಹಣವಿಲ್ಲವೆಂದು ಪತ್ರ ಬರೆದ ಸಿಎಂ: ವಿ.ಸೋಮಣ್ಣ ಆರೋಪ.
ರೈಲ್ವೆ ಯೋಜನೆಗಳಿಗೆ ಅಡ್ಡಿ:

‘ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಸೇರಿದಂತೆ ಅಗತ್ಯ ನೆರವು ನೀಡದೇ ಅಡ್ಡಗಾಲು ಹಾಕುತ್ತಿದೆ’ ಎಂದು ಸೋಮಣ್ಣ ದೂರಿದರು.

‘ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಚಾಮರಾಜನಗರದವರೆಗೆ 142 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ₹1200 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ 2024ರ ಡಿಸೆಂಬರ್ನಲ್ಲಿ ಪತ್ರ ಬರೆದ ರಾಜ್ಯ ಸರ್ಕಾರ, ಯೋಜನೆಗೆ ಸಹಕಾರ ನೀಡಲು ನಿರಾಕರಿಸಿದೆ’ ಎಂದರು. ‘ ಮೈಸೂರು–ಕುಶಾಲನಗರ ಮಾರ್ಗ ನಿರ್ಮಾಣಕ್ಕೂ ಸಹಕಾರ ನೀಡುತ್ತಿಲ್ಲ. ಆದಾಗ್ಯೂ ಇಲಾಖೆಯು ಯೋಜನೆ ಮುಂದುವರಿಸಲಿದೆ’ ಎಂದರು.

‘ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17 ಬಾರಿ ಬಜೆಟ್ ಮಂಡಿಸಿದ್ದರೂ ರಾಜ್ಯಕ್ಕೆ ಏನು ಕೊಡುಗೆ ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಹಳ್ಳ ಹಿಡಿದಿದೆ. ಆದರೆ ಅನಿರೀಕ್ಷಿತವಾಗಿ ಸಂಸದರಾಗಿ, ಕೇಂದ್ರ ಸಚಿವರೂ ಆದ ನಾನು ಹಾಗೂ ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ₹52 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದ್ದು, ಕಳೆದ ಹತ್ತು ವರ್ಷದಲ್ಲಿ 1750 ಕಿ.ಮೀ. ಉದ್ದದ ಹೊಸ ಹಳಿಗಳನ್ನು ನಿರ್ಮಿಸಲಾಗಿದೆ. ₹1900 ಕೋಟಿ ವೆಚ್ಚದಲ್ಲಿ 61 ಅಮೃತ ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ ಮಂಗಳೂರು–ಕುಕ್ಕೆ ಸುಬ್ರಹ್ಮಣ್ಯ ನಡುವಿನ 51 ಕಿ.ಮೀ. ಪ್ರಯಾಸದ ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಿದ್ದು ನಮ್ಮ ಸಾಧನೆ. ₹6 ಸಾವಿರ ಕೋಟಿ ವೆಚ್ಚದಲ್ಲಿ ಮೆಗಾ ಕೋಚಿಂಗ್ ಕೇಂದ್ರ ನಿರ್ಮಾಣಕ್ಕೂ ಯೋಜನೆ ರೂಪಿಸಿದ್ದೇವೆ’ ಎಂದರು.

ಸೇತುವೆ ನಿರ್ಮಾಣಕ್ಕೆ ಒತ್ತು:

‘ ಕಳೆದ ಹತ್ತು ವರ್ಷದಲ್ಲಿ ರಾಜ್ಯದಲ್ಲಿ 707 ಹೊಸ ರೈಲ್ವೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ನಿರ್ಮಾಣಕ್ಕೆ ಸೂಚಿಸಿದ್ದು, ವೆಚ್ಚವನ್ನು ಕೇಂದ್ರವೇ ಭರಿಸಲಿದೆ’ ಎಂದರು.

ಉಪ ಚುನಾವಣೆಗಳಿಂದ ಸಂದೇಶ:

‘ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆ ಮೂಲಕ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಹೋಗಲಿದೆ. ಎರಡೂ ಕಡೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಅಲ್ಪಸಂಖ್ಯಾತರ ತೀರ್ಮಾನ ಹಾಗೆಯೇ ಇದ್ದರೆ ಮುಂದೆ ಕಾಂಗ್ರೆಸ್ ಚುನಾವಣೆಗೆ ಬರುವುದೇ ಅನುಮಾನ’ ಎಂದರು.

ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇದ್ದರು. ಬಳಿಕ ಸಚಿವದ್ವಯರು ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಐದು ತಾಸು ಪ್ರಯಾಣ; 8 ನಿಲ್ದಾಣಕ್ಕೆ ಭೇಟಿ

ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಒಳಗೊಂಡ ತಂಡವು ಗುರುವಾರ ವಿಶೇಷ ರೈಲಿನಲ್ಲಿ ಬೆಂಗಳೂರು–ಮೈಸೂರು ನಡುವೆ ಪ್ರಯಾಣಿಸಿತು.

ಬೆಳಿಗ್ಗೆ 10ಕ್ಕೆ ಬೆಂಗಳೂರು ಕೆಎಸ್ಆರ್ ನಿಲ್ದಾಣದಿಂದ ಆರಂಭಗೊಂಡ ಪ್ರಯಾಣವು ಮಧ್ಯಾಹ್ನ 2.45ರ ವೇಳೆಗೆ ಮೈಸೂರಿನಲ್ಲಿ ಮುಕ್ತಾಯಗೊಂಡಿತು. ನಡುವೆ ಎಂಟು ನಿಲ್ದಾಣಗಳಿಗೆ ಭೇಟಿ ಕೊಟ್ಟು ಜನರ ಅಹವಾಲು ಆಲಿಸಿತು. ನಿಲ್ದಾಣದಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿತು.

‘ನಿಲ್ದಾಣಗಳಿಗೆ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಆಲಿಸಿದ್ದೇವೆ. ಕೆಲವೆಡೆ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಮನವಿ ಮಾಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಂದ ಒಂದೆರಡು ಕಡೆ ತೊಂದರೆ ಆಗಿದ್ದು, ಸದ್ಯದಲ್ಲೇ ಸರಿಹೋಗಲಿದೆ’ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.