ಮೈಸೂರು: ‘ಕಲಾವಿದರಿಗೆ ಬೆಲೆಯಿದ್ದರೂ ಅವರಿಗೆ ಸ್ಥಾನಮಾನಗಳಿಲ್ಲ. ಕಾಂಗ್ರೆಸ್ ಪಕ್ಷವು ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗವನ್ನು ಆರಂಭಿಸಿ ಕಲಾವಿದರು ಮತ್ತು ನಾಡಿನ ಕಲೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಹೇಳಿದರು.

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಕೀ ಬೋರ್ಡ್ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಮಾತಿಗಿಂತ ಸಾಹಿತ್ಯ ಮತ್ತು ಸಂಗೀತಕ್ಕೆ ಹೆಚ್ಚು ಶಕ್ತಿಯಿದೆ. ಕಲಾವಿದರು ಮೃದು ಸ್ವಭಾವದವರು. ಆದರೆ, ಅವರಲ್ಲಿ ಅಪಾರ ಶಕ್ತಿಯಿದೆ. ಚಾಮುಂಡೇಶ್ವರಿ, ಮಹದೇಶ್ವರ, ನಂಜುಂಡೇಶ್ವರ, ಮಂಜುನಾಥ ಸೇರಿದಂತೆ ಎಲ್ಲ ದೇವರುಗಳ ಮಹಿಮೆ ಕಲಾವಿದರ ಹಾಡಿನಿಂದಲೇ ಹಿರಿದಾಯಿತು. ಹೀಗಾಗಿಯೇ ಕಲಾವಿದರನ್ನು ಗಂಧರ್ವರು ಎನ್ನುತ್ತಾರೆ’ ಎಂದರು.

‘ಕಲಾವಿದರು ಸೇರಿದಂತೆ ಎಲ್ಲ ವರ್ಗದವರನ್ನು ಗುರುತಿಸುವುದು ಕಾಂಗ್ರೆಸ್ ಮಾತ್ರ. ಕಲಾವಿದರಿಗೆ ವೇದಿಕೆ ಸೃಷ್ಟಿಸುವ, ಸ್ಥಳೀಯರಿಗೆ ದೊಡ್ಡ ವೇದಿಕೆಗಳು ಸಿಗುವಂತೆ ಪಕ್ಷವು ಮಾಡಲಿದೆ’ ಎಂದು ನುಡಿದರು.

ಮುಖಂಡ ಕೋಟೆ ಎಂ.ಶಿವಣ್ಣ ಮಾತನಾಡಿ, ‘ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷವಾದ ಕಾಂಗ್ರೆಸ್ ದೇಶದ ಎಲ್ಲ ಮತಗಟ್ಟೆಗಳಲ್ಲಿಯೂ ಅಸ್ತಿತ್ವವಿದೆ. ಅಧಿಕಾರದಲ್ಲಿರಲಿ ಇಲ್ಲದಿರಲಿ ಜನರ ದನಿಯಾಗಿ ಕೆಲಸ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಜಿ.ವೆಂಕಟೇಶ ಕುಮಾರ್, ಗಿರೀಶ್ ಶಿವಪ್ರಸಾದ್, ಸಂತೋಷ್ ಗೌಡ, ಹೆಳವರಹುಂಡಿ ಸೋಮು, ಸಿದ್ಧಯ್ಯ, ಮಲ್ಲೇಶ್ ಕೋಟೆ, ರಮೇಶ್, ಪ್ರವೀಣ್ ಸಿದ್ಧಲಿಂಗಪುರ, ಬಿ.ಪಿ.ಬೋರೇಗೌಡ, ಹೊಸಹುಂಡಿ ರಘು, ಸುರೇಶ್, ಸಂಜಯ್ ಮಿರ್ಲೆ, ಜೆ.ಮಹದೇವು, ಪ್ರಭುಸ್ವಾಮಿ, ಪದ್ಮಾ, ರಾಮೇಗೌಡ, ಗಣೇಶ್ ಭಟ್, ಶುಭ, ಶೋಭಾ, ಸುಶೀಲ, ಮನೋಜ್, ಸುನೀಲ್ ಸ್ವಾಮಿ, ಜಯರಾಮ್, ಬಸವರಾಜ್, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ನಾಗೇಶ್ ಕಂದೇಗಾಲ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-39-731311112

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.