ಮೈಸೂರು: ‘ಸಮ ನಿರ್ಮಾಣದ ಕನಸು ಹೊತ್ತಿದ್ದ ಎನ್.ರಾಚಯ್ಯ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಆಡಳಿತ ವೈಖರಿ ಮೂಲಕವೇ ವಿಶಿಷ್ಟ ಛಾಪು ಮೂಡಿಸಿದರು. ಬಡವರು, ಶೋಷಿತರು, ಹಿಂದುಳಿದವರ ಏಳಿಗೆಗೆ ನಿರಂತರವಾಗಿ ದುಡಿದರು’ ಎಂದು ಸಾಮಾಜಿಕ ನ್ಯಾಯಪರ ವೇದಿಕೆ ಅಧ್ಯಕ್ಷ ರವಿಕುಮಾರ್ ಮರಡಿಪುರ ಹೇಳಿದರು.

ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಎನ್.ರಾಚಯ್ಯ ಪುಣ್ಯಸ್ಮರಣೆಯಲ್ಲಿ ‘ರಾಚಯ್ಯ ಅವರ ಮಾದರಿ ನಾಯಕತ್ವ’ ಕುರಿತು ಉಪನ್ಯಾಸ ನೀಡಿದ ಅವರು, ‘ಬಿ.ಡಿ.ಜತ್ತಿ ಮತ್ತು ಡಿ.ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಅವರು, ವಹಿಸಿದ ಎಲ್ಲ ಖಾತೆಗಳಲ್ಲಿಯೂ ಅನನ್ಯ ಗುರುತುಗಳನ್ನು ಬಿಟ್ಟುಹೋಗಿದ್ದಾರೆ’ ಎಂದರು.

‘ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅಂಗನವಾಡಿಗಳು, ಶಿಶುವಿಹಾರ, ಅನಾಥಾಶ್ರಮ, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಹೊಲಿಗೆ ತರಬೇತಿ ಕೇಂದ್ರಗಳನ್ನು ಆರಂಭಿಸಿದರು. ಅಬಕಾರಿ ಸಚಿವರಾಗಿದ್ದಾಗ 1958ರಿಂದ 1968ರವರೆಗೆ ಮದ್ಯಪಾನ ನಿಷೇಧ ಮಾಡಿದ್ದರು’ ಎಂದು ಸ್ಮರಿಸಿದರು.

‘ಸಮುದಾಯಗಳ ಅಭಿವೃದ್ಧಿ ಗೆ ನಿಗಮ ಮಂಡಳಿಗಳನ್ನು ಸ್ಥಾಪಿಸಿದ ಅವರು, ಸಮಾಜದಲ್ಲಿ ನಡೆಯುತ್ತಿದ್ದ ದೌರ್ಜನ್ಯ– ದಬ್ಬಾಳಿಕೆ ತಡೆಯಲು ನಾಗರಿಕ ಹಕ್ಕು ಒತ್ತಾಯ ಸಮಿತಿ ಆರಂಭಿಸಿದರು. ಕೃಷಿ ಸಚಿವರಾಗಿದ್ದಾಗ ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಕಾಲೇಜು ಸ್ಥಾಪಿಸಿದರು. ಪಶು ಸಂಗೋಪನಾ ಸಚಿವರಾಗಿದ್ದಾಗ ಪಶು ಆಸ್ಪತ್ರೆಗಳ ನಿರ್ಮಾಣ ಮಾಡಿದರು. ಇವು ಅವರ ದೂರದೃಷ್ಟಿ ಹಾಗೂ ಮೇರು ನಾಯಕತ್ವಕ್ಕೆ ಉದಾಹರಣೆ’ ಎಂದರು.

‘ಗೌತಮ ಬುದ್ಧರ ತತ್ವಾದರ್ಶಗಳನ್ನು ಪಾಲಿಸಿದ ಅವರು ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಜವಹರಲಾಲ್ ನೆಹರೂ, ಬಾಬು ಜಗ ಜೀವನ್ರಾಮ್ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು’ ಎಂದರು.

ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಸಿ.ರಾಮಸ್ವಾಮಿ, ವಿಭಾಗದ ಮುಖ್ಯಸ್ಥೆ ಪ್ರೊ.ಕೃಷ್ಣ ಹೊಂಬಳ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-1187458011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.