ಹುಣಸೂರು: ‘ಹುಲಿ ಸಂರಕ್ಷಣೆ ಹೆಸರಿನಲ್ಲಿ ನಾಗರಹೊಳೆ ಅರಣ್ಯದಿಂದ ಗಿರಿಜನರನ್ನು ಹೊರ ಹಾಕಿ ದಶಕ ಕಳೆದರೂ ಅಧಿಕಾರಿ ವರ್ಗವು ಸಮಸ್ಯೆಗೆ ಪರಿಹಾರ ನೀಡಿಲ್ಲ. ಇದರಿಂದ ಗಿರಿಜನರ ಬದುಕು ಅತಂತ್ರವಾಗಿದೆ’ ಎಂದು ಗಿರಿಜನರ ಮುಖಂಡ ರವಿ ಅಸಮಾಧಾನ ವ್ಯಕ್ತಪಡಿಸಿದರು.

ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಭಾನಗರದಲ್ಲಿ ಗುರುವಾರ ಮೇಟಿಕುಪ್ಪೆ ವಲಯಕ್ಕೆ ಬರುವ ಹಾಡಿಗಳ ಗಿರಿಜನರ ಅರಣ್ಯ ಹಕ್ಕು, ವೈಯುಕ್ತಿಕ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು, ಅರಣ್ಯ ಕಿರು ಸಂಪತ್ತು ಸಂಗ್ರಹ ಸೇರಿದಂತೆ ಅರಣ್ಯದಿಂದ ಹೊರ ಹಾಕಿದ 1,300 ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು.

‘ಕೋಡಿ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಹುಣಸೂರು ಉಪವಿಭಾಗಾಧಿಕಾರಿ 1,300 ಗಿರಿಜನರ ಅರ್ಜಿಯನ್ನು ಪರಿಶೀಲಿಸದೆ ತಿರಸ್ಕರಿಸಿದರು. ರಾಜ್ಯ ಹೈಕೋರ್ಟ್ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ ಸರ್ಕಾರ ಕ್ರಮವಹಿಸದೆ ನ್ಯಾಯಾಂಗ ನಿಂದನೆ ಮಾಡಿದೆ’ ಎಂದರು.

‘ಜಿಲ್ಲಾಡಳಿತವು ಗಿರಿಜನರ ಹಕ್ಕು ಮಾನ್ಯ ಮಾಡಿ ಆದಿವಾಸಿ ಜನರ ಹಕ್ಕು ನೀಡುವಂತೆ ಸಭೆ ತೀರ್ಮಾನಿಸಿ ಅಂಗೀಕರಿಸಿದೆ. ಜೇನುಕುರುಬ ಸಮುದಾಯದ ಸಮಸ್ಯೆ ಆಲಿಸಲು ಪ್ರತ್ಯೇಕ ಕಚೇರಿ ತೆರೆದು ಸಮಸ್ಯೆ ಬಗೆಹರಿಸಿ ಗಿರಿಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಗಿರಿಜನರ ಅಭಿವೃದ್ಧಿಗೆ ಹಲವು ತೀರ್ಮಾನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು’ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಗಿರಿಜನ ಮುಖಂಡರಾದ ರಾಜಣ್ಣ,ಜೆ.ಕೆ ರಾಜಪ್ಪ, ಡೀಡ್ ಶ್ರೀಕಾಂತ್ ಮಾತನಾಡಿದರು. ಮೇಟಿಕುಪ್ಪೆ ವಲಯಕ್ಕೆ ಸೇರಿದ 10 ಹಾಡಿಗಳಿಂದ 35 ಗಿರಿಜನ ಪ್ರತಿನಿಧಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-38-1302594817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.