ಮೈಸೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ವರ್ಗಾವಣೆ ಪ್ರಕ್ರಿಯೆಯನ್ನು ‘ಕೌನ್ಸೆಲಿಂಗ್’ಗೂ ಮುನ್ನವೇ ನಡೆಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈಗಾಗಲೇ, ವಿವಿಧ ಜಿಲ್ಲೆಗಳ 75 ಪಿಡಿಒಗಳನ್ನು ಮೇ 7ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ, ಪರಸ್ಪರ ವರ್ಗಾವಣೆಯೂ ನಡೆದಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ. ‘ಪಿಡಿಒಗಳ ವರ್ಗಾವಣೆಗೆ ಸಂಬಂಧಿಸಿದಂತೆ 2024–25ನೇ ಸಾಲಿನಿಂದ ಜಾರಿಗೆ ತಂದಿರುವ ಕೌನ್ಸೆಲಿಂಗ್ ಪದ್ಧತಿಯನ್ನು ಕೈಗೊಳ್ಳದೇ ಈ ಬಾರಿ ಶಿಫಾರಸು ಪತ್ರಗಳು, ಪ್ರಭಾವ ಹಾಗೂ ಆಧಾರರಹಿತ ದೂರುಗಳನ್ನು ಆಧರಿಸಿ ವರ್ಗಾವಣೆ ಪಟ್ಟಿ ಸಿದ್ಧಪಡಿಸಲಾಗಿದೆಯೇ’ ಎಂಬ ಆರೋಪ ಕೇಳಿಬಂದಿದೆ.

‘ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ ಮೇಲೆ ಕೌನ್ಸೆಲಿಂಗ್ ನಡೆಸುವ ಅಗತ್ಯವೇನಿದೆ? ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂಬ ಚರ್ಚೆ ಪಿಡಿಒಗಳ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ನಡೆಯುತ್ತಿದೆ. ‘ದುಡ್ಡು ಕೊಟ್ಟವರಿಗೆ ಇಲಾಖೆಯಿಂದ ವರ್ಗಾವಣೆ... ದುಡ್ಡು ಕೊಡದವರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಎಂದು ಆದೇಶ ಮಾಡಿಬಿಡಲಿ’ ಎಂಬ ಆಕ್ರೋಶದ ಚರ್ಚೆಗಳು ಗ್ರೂಪ್ಗಳಲ್ಲಿ ನಡೆದಿವೆ.

‘ವರ್ಗಾವಣೆಯನ್ನು ಕಡ್ಡಾಯವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕವೇ ನಡೆಸಬೇಕು ಎಂಬ ಆದೇಶ ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಲಾಗುತ್ತಿದೆ. ‘ಕೌನ್ಸೆಲಿಂಗ್ ರದ್ದುಪಡಿಸಲಾಗಿದೆಯೇ ಎಂಬ ಅನುಮಾನವೂ ಕಾಡುತ್ತಿದೆ’ ಎಂದು ಪಿಡಿಒಗಳ ವಲಯದಲ್ಲಿ ಚರ್ಚೆಯಾಗುತ್ತಿದೆ.

ಸಂಘದಿಂದ ಧ್ವನಿ: ಈ ಕಾರಣದಿಂದ, ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು ಗಮನಸೆಳೆಯಲಾಗಿದೆ. ‘ಪಿಡಿಒಗಳ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕವೇ ನಡೆಸಬೇಕು. ಶಿಫಾರಸು ಅಥವಾ ದೂರು ಆಧಾರಿತ, ಪಾರದರ್ಶಕವಲ್ಲದ ವರ್ಗಾವಣೆ ತಡೆಗಟ್ಟಬೇಕು’ ಎಂದು ಕೋರಲಾಗಿದೆ.

‘ಕೌನ್ಸೆಲಿಂಗ್ ಪದ್ಧತಿಯು ಇಲಾಖೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತೆ ಹಾಗೂ ನಂಬಿಕೆ ಮೂಡಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಈ ವ್ಯವಸ್ಥೆಯಿಂದ ಸಮಾನ ಅವಕಾಶ ಮತ್ತು ವಿಶ್ವಾಸದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈ ಸಾಲಿನ ವರ್ಗಾವಣೆಯನ್ನು ಕೌನ್ಸೆಲಿಂಗ್ಗೂ ಮುನ್ನವೇ ನಡೆಸುತ್ತಿರುವುದು ಆತಂಕ ಉಂಟು ಮಾಡಿದೆ. ಇದರಿಂದ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗುವ ಜೊತೆಗೆ ಇಲಾಖೆಯ ಮೇಲಿನ ವಿಶ್ವಾಸಕ್ಕೂ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಂಘ ದೂರಿದೆ.

‘ಎಲ್ಲರಿಗೂ ಸಮಾನ ನ್ಯಾಯ ದೊರಕುವ ನಿಟ್ಟಿನಲ್ಲಿ, ಕೌನ್ಸೆಲಿಂಗ್ನಂತಹ ಪಾರದರ್ಶಕವಾದ ವ್ಯವಸ್ಥೆ ಮುಂದುವರಿಸಬೇಕು. ರಾಜಕೀಯ, ವೈಯಕ್ತಿಕ ಒತ್ತಡಗಳಿಗೆ ಮಣೆ ಹಾಕಬಾರದು. ಕೌನ್ಸೆಲಿಂಗ್ ವ್ಯವಸ್ಥೆಯಿಂದ ಇಲಾಖೆಗೆ ಬಂದಿರುವ ಹೆಸರು ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.

‘ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿದ್ದು, ಪಿಡಿಒಗಳು ಗ್ರಾಮೀಣ ಆಡಳಿತದ ಪ್ರಮುಖ ಕಂಬಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥವರನ್ನು ಕೌನ್ಸೆಲಿಂಗ್ ಮೂಲಕ ಮಾತ್ರವೇ ವರ್ಗಾವಣೆ ಮಾಡಿ ಧೈರ್ಯ ತುಂಬಬೇಕು’ ಎಂದು ಸಂಘದಿಂದ ಧ್ವನಿ ಎತ್ತಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-39-1326015612

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.