ಸಿಂಧನೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿ ತಿರಸ್ಕರಿಸಲು ಆಗ್ರಹಿಸಿ, ಮಾ.25ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ ಗೋನವಾರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲಗೈ ಜಾತಿಗಳ ಒಕ್ಕೂಟದಿಂದ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಿಂಧನೂರು ತಾಲ್ಲೂಕಿನಿಂದ ಸುಮಾರು 500ಕ್ಕೂ ಹೆಚ್ಚು ಜನರು ತೆರಳಲಾಗುವುದು’ ಎಂದು ಹೇಳಿದರು.

‘ಒಳಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ನಾಗಮೋಹನ್ ದಾಸ್ ಅವರು ಸಲ್ಲಿಸಿರುವ ವರದಿಯಲ್ಲಿ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲಾಗಿಲ್ಲ. ಅವರು ಯಾರದೋ ಕೈಗೊಂಬೆಯಾಗಿ ವರದಿ ನೀಡಿರುವಂತೆ ಕಾಣುತ್ತಿದೆ. ಒಟ್ಟು 63 ಬಲಗೈ ಜಾತಿಗಳಿವೆ. ಆದರೆ ವರದಿಯಲ್ಲಿ ಕೇವಲ 19 ಜಾತಿಗಳನ್ನು ಮಾತ್ರ ಬಲಗೈ ಎಂದು ಗುರುತಿಸಲಾಗಿದೆ. ದಾಸರು, ಚನ್ನದಾಸರು ಅಲೆಮಾರಿಗಳಲ್ಲ. ಆದರೆ ಅವರನ್ನು ಅಲೆಮಾರಿಗಳು ಎಂದು ಗುರುತಿಸಿದ್ದಾರೆ’ ಎಂದರು.

‘ಜಿಲ್ಲಾವಾರು ಜನಸಂಖ್ಯೆಯನ್ನು ಸರಿಯಾಗಿ ಗುರುತಿಸಿಲ್ಲ. ರೋಸ್ಟರ್ ಪದ್ಧತಿ ಸಹ ನ್ಯಾಯಯುತವಾಗಿಲ್ಲ. ಈ ವರದಿ ಜಾರಿಯಾದರೆ ಬಲಗೈ ಸಮುದಾಯದ ಜನರಿಗೆ ಅನ್ಯಾಯವಾಗುತ್ತದೆ. ಈಗಾಗಲೇ ಸುಪ್ರೀಂ ಕೋರ್ಟ್ ಸಹ ವರದಿಯಲ್ಲಿ ಮಾರ್ಪಾಡುಗಳನ್ನು ಮಾಡಬೇಕೆಂದು ಸೂಚಿಸಿದೆ. ಈ ವರದಿಯನ್ನು ತಿರಸ್ಕರಿಸಿ, ಮೊದಲಿನಂತೆ ಹಳೆ ಮೀಸಲಾತಿಯನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಹನುಮಂತಪ್ಪ ಬೂದಿಹಾಳ ವಕೀಲ, ಕರ್ನಾಟಕ ಚಲವಾದಿ ಮಹಾಸಭಾ ತಾಲ್ಲುಕು ಘಟಕದ ಅಧ್ಯಕ್ಷ ವೀರೇಶ್ ಹಂಚಿನಾಳ, ಮುಖಂಡರಾದ ನರಸಪ್ಪ ಕಟ್ಟಿಮನಿ, ಹನುಮಂತಪ್ಪ ಗೋಮರ್ಸಿ, ಅಯ್ಯಪ್ಪ ವಕೀಲ, ಮೌಲಪ್ಪ ವಕೀಲ, ನಿರುಪಾದಿ ಸಾಸಲಮರಿ, ಭೀಮಣ್ಣ ಉದ್ಬಾಳ, ಹುಸೇನಪ್ಪ ಉದ್ಬಾಳ ಅಂಬಣ್ಣ ಮಲ್ಲಾಪುರ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-32-179779682

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.