ನಾಲತವಾಡ: ‘ಬಿಜೆಪಿಯು ಎಂದಿಗೂ ನಿಂತ ನೀರಲ್ಲ. ಪಕ್ಷದ ತತ್ವ–ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಹಮ್ಮಿಕೊಂಡ ಮಹತ್ವದ ಪ್ರಶಿಕ್ಷಣ ಅಭಿಯಾನವಾಗಿದೆ’ ಎಂದು ಬಿಜೆಪಿ ಮಂಡಲ ತಾಲ್ಲೂಕು ಘಟಕದ ಅಧ್ಯಕ್ಷರಾದ ಜಗದೀಶ ಪಂಪಣ್ಣನವರು ಹೇಳಿದರು.

ಇಲ್ಲಿಯ ಹಳ್ಳೂರ ಪ್ಯಾಲೇಸ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಮಂಡಲ ಸಹಯೋಗದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಆರ್. ಬಿರಾದಾರ ಮಾತನಾಡಿ, ‘ದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಬಿಜೆಪಿಯನ್ನು ತಳ ಮಟ್ಟದಲ್ಲೇ ಗಟ್ಟಿಗೊಳಿಸುವ ಉದ್ದೇಶ ಎಲ್ಲರೂ ಹೊಂದಬೇಕು’ ಎಂದರು.

ಗಿರೀಶಗೌಡ ಪಾಟೀಲ(ಮುರಾಳ), ಮುತ್ತು ಅಂಗಡಿ, ಸಂಗಮೇಶ ಮೇಟಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್. ಬಿರಾದಾರ, ಪಕ್ಷದ ಮುಖಂಡರಾದ ಎಂ.ಎಸ್. ಪಾಟೀಲ, ಪ್ರಭು ಕಡಿ, ಜಗದೀಶ ಪಂಪಣ್ಣನವರ, ಮಂಜುನಾಥ ಮೀಸೆ ಗುರುನಾಥ ದೇಶಮುಖ, ಮುನ್ನಾಧಣಿ ನಾಡಗೌಡ, ಸಂಗಮ್ಮ ದೇವರಳ್ಳಿ ಸುವರ್ಣಾ ಬಿರಾದಾರ, ಬಸವರಾಜ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-26-248484326

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.