ಆನೇಕಲ್: ಕರ್ನಾಟಕದಲ್ಲಿ ಮೊದಲ ದಲಿತ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಎ.ನಾರಾಯಣಸ್ವಾಮಿ ಆಯ್ಕೆಯಾಗಬೇಕು ಎಂಬುದು ಸಮಾಜದ ಆಶಯವಾಗಿದೆ ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಹೇಳಿದರು.

ಬಿಜೆಪಿ ಆನೇಕಲ್ ವಿಧಾನಸಭಾ ಕ್ಷೇತ್ರ ಘಟಕದಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಾರಾಯಣಸ್ವಾಮಿ ಪುರಸಭೆಯ ಸದಸ್ಯರಾಗಿ, ಆನೇಕಲ್ ಶಾಸಕರಾಗಿ, ಚಿತ್ರುದುರ್ಗ ಸಂಸದರಾಗಿ ಮತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ, ಕೇಂದ್ರದ ಮಾಜಿ ಸಚಿವರಾಗಿ ಸುದೀರ್ಘ ರಾಜಕೀಯ ಮತ್ತ ಆಡಳಿತ ಅನುಭವ ಹೊಂದಿದ್ದಾರೆ. ಇವರ ಅನುಭವ ಕರ್ನಾಟಕ ರಾಜ್ಯಕ್ಕೆ ನೆರವಾಗಲಿದೆ ಎಂದು ತಿಳಿಸಿದರು.

ಬಿಜೆಪಿ ನಾಯಕ ಎ.ನಾರಾಯಣಸ್ವಾಮಿ, ಆನೇಕಲ್ ಗ್ರಾಮೀಣ ಪ್ರದೇಶವಾಗಿದ್ದರೂ ಇಲ್ಲಿ ಉತ್ತಮ ಸಂಘಟಕರಿದ್ದಾರೆ. ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಗುರುತಿಸಿ ಸನ್ಮಾನಿಸಬೇಕು. ಅವರು ಇತರರಿಗೆ ಸ್ಫೂರ್ತಿಯಾಗಬೇಕೆಂದು ಅಭಿನಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಬಿಜೆಪಿ ಪಕ್ಷಕ್ಕೆ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರನ್ನು ಸತ್ಕರಿಸಲಾಯಿತು. ಪೌರಕಾರ್ಮಿಕರಿಗೆ ಅಭಿನಂದಿಸಿ ಆಹಾರದ ಕಿಟ್ ವಿತರಿಸಲಾಯಿತು.

ಸಂಸದ ಪಿ.ಸಿ.ಮೋಹನ್, ಶಾಸಕ ಸತೀಶ್ ರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್, ಮಾಜಿ ಶಾಸಕ ಬಾಲರಾಜು, ಲೇಖಕ ತಾ.ನಂ.ಕುಮಾರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಆರ್.ಟಿ.ಅಶೋಕ್ರೆಡ್ಡಿ, ಹಾಪ್ಕಾಮ್ಸ್ ನಿರ್ದೇಶಕಿ ಮೇಘ ತಿಲಕ್ ಕುಮಾರ್, ವಿ.ಆಂಜಿನಪ್ಪ, ದೊಡ್ಡಹಾಗಡೆ ಶಂಕರ್, ಜಯಪ್ರಕಾಶ್, ಬಿ.ಬಿ.ಐ.ಮುನಿರೆಡ್ಡಿ, ಟಿ.ವಿ.ಬಾಬು, ಶಾಂತಿಪುರ ಗುರು, ಬಂಡಾಪುರ ರಾಮಚಂದ್ರ, ಕೆ.ಪಿ.ರಾಜು, ಜೆ.ನಾರಾಯಣಪ್ಪ, ಬಿ.ಜಿ.ಆಂಜಿನಪ್ಪ, ಜಿಗಣಿ ಪುನೀತ್, ಬಳ್ಳೂರು ವಸಂತ್, ನರಸಿಂಹರೆಡ್ಡಿ, ಅಗ್ರಹಾರ ಸತೀಶ್, ಕೆ.ನಾಗರಾಜು, ಮುನಿರಾಜು ಗೌಡ, ಪುಣ್ಯಕೋಟಿ ಶ್ರೀನಿವಾಸ್, ಭರತ್ ಕುಮಾರ್, ದೇವೇಗೌಡ, ಕಪಾಡ್ ನಾರಾಯಣಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-15-1723330836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.