ಗದಗ: ‘ನರಗುಂದ ಶಾಸಕ ಸಿ.ಸಿ. ಪಾಟೀಲ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಕುರುಬ ಮತ್ತು ಮುಸ್ಲಿಂ ಸಮಾಜವನ್ನು ವ್ಯವಸ್ಥೆಯಿಂದ ದೂರ ಇಡಬೇಕೆಂಬ ಹೇಳಿಕೆ ನೀಡಿದ್ದಾರೆ. ಅವರ ಮಾತುಗಳನ್ನು ಕುರುಬ ಸಮಾಜ ಉಗ್ರವಾಗಿ ಖಂಡಿಸುತ್ತದೆ’ ಎಂದು ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

‘ಬಾಗಲಕೋಟೆ ಉಪ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಒಳ ಪಂಗಡಗಳ ಸಭೆಯಲ್ಲಿ ಟುರ್ರ್... ಮತ್ತು ಗಡ್ಡದವರನ್ನು ದೂರ ಇಡಬೇಕು ಎಂಬ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಎರಡೂ ಸಮುದಾಯಗಳಿಗೆ ತೀವ್ರ ನೋವು ತರಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಎಂತಹ ಶಾಸಕನನ್ನು ಆರಿಸಿದ್ದೇವೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ಶಾಸಕ ಸಿ.ಸಿ.ಪಾಟೀಲ ಅವರಿಗೆ ತಾವು ಆಡಿರುವ ಮಾತುಗಳ ಬಗ್ಗೆ ಈವರೆಗೆ ನೋವು ಆಗಿಲ್ಲ. ತಾವಾಡಿದ ತಪ್ಪು ಮಾತುಗಳಿಗೆ ಕ್ಷಮೆ ಕೇಳುವ ಬದಲು ವಿಷಾದ ವ್ಯಕ್ತಪಡಿಸುವುದಾಗಿ ಹೇಳಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. ನಾವು ಎಂತಹ ಶಾಸಕರಿಗೆ ಮತ ಹಾಕಿ, ವಿಧಾನಸೌಧಕ್ಕೆ ಕಳುಹಿಸಿದ್ದೇವೆಂದು ನರಗುಂದ ಮತಕ್ಷೇತ್ರದಲ್ಲಿ ಕುರುಬ ಸಮುದಾಯದವರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಎಲ್ಲರನ್ನೂ ಒಂದಾಗಿ ನೋಡಬೇಕು ಎಂಬುದು ಸರ್ಕಾರಗಳ ಚಿಂತನೆಯಾಗಿದೆ. ಆದರೆ, ಶಾಸಕನಾಗಿ ಅವರು ಒಂದು ಸಮುದಾಯವನ್ನು ವ್ಯವಸ್ಥೆಯಿಂದ ದೂರ ಇಡುವ ಬಗ್ಗೆ ಮಾತನಾಡುತ್ತಾರೆ. ಅವರ ಮಾತುಗಳನ್ನು ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಸಂದರ್ಭದಲ್ಲಿ ಸೂಕ್ತ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರನ್ನೂ ಸಮಾನವಾಗಿ ಕಾಣುವ ಜನನಾಯಕರು ಬೇಕಿದೆ. ಸಿ.ಸಿ. ಪಾಟೀಲ ನಮ್ಮ ವಿರುದ್ಧ ತಾಕತ್ತು ಪ್ರದರ್ಶನ ಮಾಡುವುದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎರಡು ಸಮುದಾಯದ ಮತ ಬೇಡವೆಂದು ಹೇಳಿ ಅಖಾಡಕ್ಕೆ ಇಳಿಯಲಿ’ ಎಂದು ಸವಾಲೆಸೆದರು.

‘ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈಗ ಅದೇ ಪಕ್ಷದ ಶಾಸಕ ಬೇಜವಾಬ್ದಾರಿತನದಿಂದ ನಮ್ಮ ಸಮುದಾಯದವನ್ನು ವ್ಯಂಗ್ಯದ ಮಾತುಗಳಿಂದ ನಿಂದಿಸಿರುವುದು ಅಕ್ಷಮ್ಯ. ನಮಗೆ ಅವರ ವಿಷಾದದ ಹೇಳಿಕೆಯ ಅವಶ್ಯಕತೆಯೇ ಇಲ್ಲ’ ಎಂದು ಹೇಳಿದರು.

‘ಕುರಿ ಕಾಯುವುದು ನಮ್ಮ ಕಸುಬು; ಅದನ್ನು ನಾವು ಗೌರವಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಇಡಬೇಕು ಎಂಬ ಅವರ ಹೇಳಿಕೆ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡುವಂತಹದ್ದು. ಅವರು ಈ ಹಿಂದೆ ಕೂಡ ಇಂತಹದ್ದೇ ಮಾತುಗಳನ್ನಾಡಿ, ನಂತರ ಕ್ಷಮೆ ಕೇಳಿದ್ದರು. ಈಗ ಮತ್ತದೇ ತಪ್ಪು ಮಾಡಿದ್ದಾರೆ’ ಎಂದು ಕಿಡಿಕಾರಿದರು.

ಹಾಲುಮತ ಮಹಾಸಭಾದ ಪದಾಧಿಕಾರಿಗಳಾದ ಬಸವರಾಜ, ರಾಮಣ್ಣ, ಉಮಾ, ಸೋಮಣ್ಣ, ನಾಗರಾಜ, ಶಿವರಾಜ್, ಬಸವರಾಜ ಕುರಿ, ಮುತ್ತಣ್ಣ ಜಡಿ, ಮಂಜು ಜಡಿ, ಸೋಮು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-23-2001608744

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.