ನವದೆಹಲಿ: ಬಳ್ಳಾರಿ ಜಿಲ್ಲೆಯ ಸಂಡೂರಿನ ದೋಣಿಮಲೈ ಬ್ಲಾಕ್ನ 702 ಎಕರೆ ಕಾಡಿನಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್ಎಂಡಿಸಿ) ಅದಿರು ಹುಡುಕಾಟ ಕಾರ್ಯಾಚರಣೆ ನಡೆಸಲಿದೆ.

ದೋಣಿಮಲೈ ಕಬ್ಬಿಣದ ಅದಿರು ಗಣಿಯ ಪಕ್ಕದಲ್ಲಿರುವ ಅರಣ್ಯದಲ್ಲಿ ಅನ್ವೇಷಣೆ ನಡೆಸಲು ಅನುಮತಿ ನೀಡುವಂತೆ ಕೋರಿ ನಿಗಮವು ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಅನುಮತಿ ನೀಡುವ ಕುರಿತು ಪರಿಶೀಲಿಸುವಂತೆ ಗಣಿ ಇಲಾಖೆಯ ನಿರ್ದೇಶಕರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಆ ಬಳಿಕವು ನಿಗಮವು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಬಳ್ಳಾರಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಸ್ಥಳ ಪರಿಶೀಲನಾ ವರದಿಯ ಶಿಫಾರಸಿನ ಆಧಾರದಲ್ಲಿ ಎನ್ಎಂಡಿಸಿಗೆ ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ.

ದೋಣಿಮಲೈಯ ನಿಕ್ಷೇಪಗಳಲ್ಲಿ 118 ಮಿಲಿಯನ್ ಟನ್ ಅದಿರು ಇದ್ದು, ಗಣಿಯ ನಿರೀಕ್ಷಿತ ಜೀವಿತಾವಧಿ 2041ರ ವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಪರಿಶೋಧನೆ ನಡೆಸಿದರೆ ಇನ್ನಷ್ಟು ನಿಕ್ಷೇಪ ಸಿಗಬಹುದು ಎಂದು ನಿಗಮವು ಪ್ರಸ್ತಾವದಲ್ಲಿ ತಿಳಿಸಿತ್ತು. ಕಾರ್ಯಾಚರಣೆಗಾಗಿ ಹೊಸ ಸಂಪರ್ಕ ರಸ್ತೆ ನಿರ್ಮಿಸುವುದಿಲ್ಲ ಹಾಗೂ ಮರಗಳನ್ನು ಕತ್ತರಿಸುವುದಿಲ್ಲ ಎಂದೂ ನಿಗಮವು ಸ್ಪಷ್ಟಪಡಿಸಿತ್ತು.

‘ಈ ಅನುಮೋದನೆಯು ಪ್ರಸ್ತಾವಿತ ಪ್ರದೇಶದಲ್ಲಿ ಖನಿಜ ಮತ್ತು ಖನಿಜೇತರ ಪ್ರದೇಶವನ್ನು ತಿಳಿದುಕೊಳ್ಳುವ ಪರಿಶೋಧನಾ ಕಾರ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಇದಲ್ಲದೆ, ಗಣಿ ತ್ಯಾಜ್ಯಗಳನ್ನು ಸುರಿಯಲು ಈ ಪ್ರದೇಶ ಬಳಸಿಕೊಳ್ಳುವಂತಿಲ್ಲ. ಇದಕ್ಕೆ ನಿಗಮವು ಪರ್ಯಾಯ ಅರಣ್ಯೇತರ ಪ್ರದೇಶವನ್ನು ಅನ್ವೇಷಿಸಬೇಕು‘ ಎಂದು ಅರಣ್ಯ ಇಲಾಖೆ ನಿರ್ದೇಶನ ನೀಡಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸದೆಯೇ, ಸಂಬಂಧಪಟ್ಟ ಡಿಸಿಎಫ್ಗಳ ಮಾರ್ಗದರ್ಶನದಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕು. 12 ತಿಂಗಳುಗಳ ಒಳಗೆ ಈ ಪ್ರಕ್ರಿಯೆ ಮುಗಿಸಬೇಕು. ಒಂದು ವೇಳೆ ನಿಗಮವು ಮೂರು ತಿಂಗಳೊಳಗೆ ಸಮೀಕ್ಷೆ ಕಾರ್ಯ ಆರಂಭಿಸದಿದ್ದರೆ ಈಗ ನೀಡಿರುವ ಅನುಮೋದನೆಯನ್ನು ರದ್ದುಗೊಳಿಸಲಾಗುತ್ತದೆ ಎಂದೂ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಸಮೀಕ್ಷೆಗೆ ಪ್ರಸ್ತಾಪಿಸಲಾದ ಪ್ರದೇಶವು ಹುಲಿ ಕಾರಿಡಾರ್, ರಾಷ್ಟ್ರೀಯ ಉದ್ಯಾನ/ವನ್ಯಜೀವಿ ಅಭಯಾರಣ್ಯ ಅಥವಾ ಸಂರಕ್ಷಿತ ಪರಿಸರ ಸೂಕ್ಷ್ಮ ವಲಯಗಳಲ್ಲಿ ಬಂದರೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ರ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆಯಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.