ಹುಬ್ಬಳ್ಳಿ: ‘ಪಶ್ಚಿಮ ಏಷ್ಯಾದ ಯುದ್ಧ ಸಂಘರ್ಷದ ಪರಿಸ್ಥಿತಿಯಲ್ಲೂ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಇಲ್ಲ. ಜನರು ಈ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಶನಿವಾರ ಸುದ್ದಿಗಾರರಿಗೆ ಹೇಳಿದರು.

‘ಗೃಹ, ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಿಲ್ಲ. ಜನರಿಗೆ ಪೂರೈಸು
ವಷ್ಟು ದಾಸ್ತಾನಿದೆ. ಆದರೆ, ಕಾಂಗ್ರೆಸ್ ಸರ್ಕಾರವು ಜನರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ’ ಎಂದರು.

‘ದೇಶದಲ್ಲಿ ಎಲ್ಲಿಯೂ ಎಲ್ಪಿಜಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಹಾಗೂ ಸಿಮೆಎಣ್ಣೆ ಕೊರತೆ ಕುರಿತು ದೂರುಗಳು ಬಂದಿಲ್ಲ. ಜನರು ಧಾವಂತದಿಂದ ಮುಂಚಿತವಾಗಿಯೇ ಸಿಲಿಂಡರ್ ಬುಕ್ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕೆಲ ನಿಬಂಧನೆ ವಿಧಿಸಲಾಗಿದೆ’ ಎಂದು ತಿಳಿಸಿದರು.

‘ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿ’ ಎಂದು ಜನರನ್ನು ಎತ್ತಿಕಟ್ಟುತ್ತಿರುವುದು
ಅವರ ನೈತಿಕ ಅಧಃಪತನವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

‘ದೇಶದಲ್ಲಿ ಹಿಂದೆ ಸಮಸ್ಯೆ ಉಂಟಾದಾಗ ವಿರೋಧಪಕ್ಷದಲ್ಲಿದ್ದನಾವು ಜವಾಬ್ದಾರಿಯಿಂದ ವರ್ತಿಸಿದ್ದೆವು.ಆದರೀಗ ವಿಪಕ್ಷ ಕಾಂಗ್ರೆಸ್ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದಲ್ಲಿ ಈಗಾಗಲೇ ಶೇ 30ರಷ್ಟು ಎಲ್ಪಿಜಿ ಸಿಲಿಂಡರ್ ಉತ್ಪಾದನೆ ಹೆಚ್ಚಿಸಲಾಗಿದೆ. ರಷ್ಯಾ, ಆಫ್ರಿಕಾ, ಅಮೆರಿಕ ಹಾಗೂ ಕೆನಡಾದಿಂದಲೂ ಆಮದು ಮಾಡಿಕೊಳ್ಳಲಾಗುವುದು. ಆ ಸಾಮರ್ಥ್ಯ ಭಾರತಕ್ಕೆ ಇದೆ. ಯಾವುದೇ ಕಾರಣಕ್ಕೂ ಜನರು ಆತಂಕಕ್ಕೆ ಒಳಗಾಗಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.