ಹುಬ್ಬಳ್ಳಿ: ಹುಬ್ಬಳ್ಳಿ ನಗರ, ಸೇರಿದಂತೆ ಬಾಗಲಕೋಟೆ, ಹಾವೇರಿ ಹಾಗೂ ಹೊಸಪೇಟೆ (ವಿಜಯನಗರ) ಜಿಲ್ಲೆಯ ಕೆಲವೆಡೆ ಬುಧವಾರ ಬೆಳಿಗ್ಗೆ ಕೆಲ ಸಮಯ ಮಳೆ ಸುರಿಯಿತು.

ಹುಬ್ಬಳ್ಳಿ ನಗರದಲ್ಲಿ ಮುಂಜಾನೆ ಜೋರು ಮಳೆ ಆದರೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಸಿಡಿಲಿನ ಆರ್ಭಟವು ತುಸು ಜೋರಾಗಿಯೇ ಇತ್ತು. ಮಧ್ಯಾಹ್ನ ಮತ್ತೆ ಬಿಸಿಲಿನ ವಾತಾವರಣವಿತ್ತು.

ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಧಗೆಯಿಂದ ಬೇಸತ್ತಿದ್ದ ಜನರಿಗೆ ತಂಪಿನ ಅನುಭವ ಆಯಿತು. ವಿಜಯನಗರ ಜಿಲ್ಲೆಯ ಕೆಲವೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ತನಕ ಮಳೆ ಸುರಿಯಿತು.

ಮಧ್ಯರಾತ್ರಿ ಗುಡುಗು ಸಿಡಿಲು ಹಾಗೂ ಜೋರು ಗಾಳಿ ಸಹಿತ ಮಳೆ ಸುರಿಯಲು ಆರಂಭಿಸಿತು. ಬೆಳಿಗ್ಗೆ ತನಕವೂ ಜಿಟಿಜಿಟಿ ಮಳೆಯಾಯಿತು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರ, ತಂಬ್ರಹಳ್ಳಿ ಹೋಬಳಿ ಭಾಗದಲ್ಲಿ ಹಾಗೂ ಕೂಡ್ಲಿಗಿ ತಾಲ್ಲೂಕಿನ ಕೆಲವಡೆ ಸಹ ಮಳೆಯಾಗಿದೆ.

ಚಿಕ್ಕಮಗಳೂರಿನಲ್ಲಿ ತಂಪೆರೆದ ಮಳೆ: ಚಿಕ್ಕಮಗಳೂರು ನಗರದಲ್ಲಿ ಬುಧವಾರ ಸಂಜೆ ಭರ್ಜರಿಯಾಗಿ ಸುರಿದ ಮಳೆ ತಂಪೆರೆಯಿತು. ಸಂಜೆ 4.30ರ ಸುಮಾರಿಗೆ ಆರಂಭವಾದ ಮಳೆ 20 ನಿಮಿಷ ಗುಡುಗಿನ ಜತೆ ಆರ್ಭಟಿಸಿತು.

ರಸ್ತೆಗಳಲ್ಲಿ ಹರಿದ ನೀರಿನಲ್ಲಿ ಜನ ಸಂಭ್ರಮದಿಂದಲೇ ವಾಹನ ಚಲಾಯಿಸಿದರು. ಸೋಮವಾರ ಮತ್ತು ಮಂಗಳವಾರ ಸಂಜೆ ಕೂಡಾ ಮಳೆಯಾಗಿ ಇಳೆ ತಂಪಾಗಿತ್ತು.

ಕಲಬುರಗಿ: ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ತಾಲ್ಲೂಕಿನ ಗುರುಗುಂಟಾ ಹೋಬಳಿ ವ್ಯಾಪ್ತಿಯ ಯರಜಂತಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ಹನುಮಂತಿ ಬಸಯ್ಯ ಅವರಿಗೆ ಸೇರಿದ ಮನೆಯ ತಗಡಿನ ಟಿನ್ ಶೀಟ್ಗಳು ಗಾಳಿಗೆ ಹಾರಿ ಹೋಗಿವೆ. ಇದರಿಂದ ಮನೆಯಲ್ಲಿ ಇದ್ದ ಜೋಳ, ಸಜ್ಜೆ ಮಳೆಗೆ ಸಿಲುಕಿ ₹ 75 ಸಾವಿರ ಮೌಲ್ಯದ ದವಸ ಧಾನ್ಯಗಳು ಹಾಳಾಗಿವೆ.

ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಮುದನೂರು ಗ್ರಾಮದ ಕೋರಿ ಸಿದ್ದೇಶ್ವರ ಶಾಖಾ ಮಠಕ್ಕೆ ಮಂಗಳವಾರ ತಡರಾತ್ರಿ ಸಿಡಿಲು ಬಡಿದಿದೆ. ದೇವರ ಮೂರ್ತಿಗಳು, ಪೀಠೋಪಕರಣ ಸುಟ್ಟು ಕರಕಲಾಗಿವೆ. ಸಿಡಿಲು ಅಪ್ಪಳಿಸಿದ ಶಬ್ದದ ಹಿಂದೆಯೇ ಮಠದ ಆವರಣದಲ್ಲಿದ್ದ ಭಕ್ತರು ಸ್ಥಳದಿಂದ ಓಡಿ ಹೋಗಿದ್ದರಿಂದ ಅನಾಹುತ ತಪ್ಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.