‘ಗೋಪ್ಯ ಶಾಖೆಯ ನೌಕರರ ವರ್ಗಾವಣೆ ಅಗತ್ಯ’

ಕೆಪಿಎಸ್ಸಿ ಅಧಿಕಾರಿ ವರ್ಗದಿಂದ ಸಂಭವಿಸುವ ಎಡವಟ್ಟುಗಳಿಂದ, ಮರುಪರೀಕ್ಷೆಗಳಿಂದ ಉಂಟಾಗುವ ಮಾನಸಿಕ ಒತ್ತಡಗಳು ಅಭ್ಯರ್ಥಿಗಳನ್ನು ಮತ್ತಷ್ಟು ಕಠಿಣ ಪರಿಸ್ಥಿತಿಗೆ ದೂಡುತ್ತಿವೆ. ಹೀಗಾಗಿ ಉತ್ತಮ ಗುಣಮಟ್ಟದ ಹಾಗೂ ಸ್ಪಷ್ಟವಾಗಿ ತರ್ಜುಮೆ ಮಾಡಿದಂತಹ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಕ್ಷಮತೆ ಇರುವಂತಹ ಅಧಿಕಾರಿಗಳನ್ನು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ ಸ್ಥಾನಕ್ಕೆ ನಿಯೋಜಿಸಲು ಸರ್ಕಾರ ಮುತುವರ್ಜಿ ವಹಿಸಬೇಕಾಗಿದೆ. ಕೆಪಿಎಸ್ಸಿಯ ಗೋಪ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುವ ನೌಕರರೇ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಸಂಚುಕೋರರು ಎಂಬುದು ರಹಸ್ಯ ಸಂಗತಿ ಏನಲ್ಲ. ಒಎಂಆರ್ ಶೀಟ್ ತಿದ್ದುಪಡಿಗಳಂತಹ ಕಾರ್ಯಗಳಲ್ಲೂ ಈ ನೌಕರರ ಕೈವಾಡವನ್ನು ಅಲ್ಲಗಳೆಯಲಾಗದು. ಈ ಜಾಲವನ್ನು ಸಂಪೂರ್ಣವಾಗಿ ಭೇದಿಸಿ, ಯುವಜನರಲ್ಲಿ ಪಾರದರ್ಶಕ ನೇಮಕಾತಿಯ ಭರವಸೆ ಮೂಡಿಸಬೇಕಾದರೆ ಹಲವು ವರ್ಷಗಳಿಂದ ಲೋಕಸೇವಾ ಆಯೋಗದಲ್ಲೇ ನೆಲೆಯೂರಿರುವ ನೌಕರರ ವರ್ಗಾವಣೆ ಮತ್ತು ಅವರ ಒಟ್ಟು ಆಸ್ತಿ ವಿವರಗಳ ಪರಿಶೀಲನೆ ಅತ್ಯಗತ್ಯ. ಪ್ರತಿ ಎರಡು ವರ್ಷಗಳಿಗೊಮ್ಮೆ ಗೋಪ್ಯ ಶಾಖೆಯ ನೌಕರರನ್ನು ವರ್ಗಾವಣೆ ಮಾಡಲೇಬೇಕು ಎಂಬುದು ಹೋಟಾ ಸಮಿತಿಯ ಪ್ರಮುಖ ಶಿಫಾರಸುಗಳಲ್ಲೊಂದು. ಹಾಗಿದ್ದರೂ, ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿರುವುದು ಸರ್ಕಾರದ ಮೇಲೆಯೇ ಅನುಮಾನ ಮೂಡಲು ಕಾರಣವಾಗುತ್ತಿದೆ. ಧರೆಯೇ ಹತ್ತಿ ಉರಿದೊಡೆ ನಿಲಬಹುದೇ ಎಂಬ ಬಸವವಾಣಿಯನ್ನು ಇದು ನೆನಪಿಸುತ್ತದೆ.

– ಹರಿಣಿ, ವಿಜಯನಗರ ಜಿಲ್ಲೆ

ಇದು ‘ಉದ್ಯೋಗ ಸೌಧ’ವಲ್ಲ ‘ನಿರುದ್ಯೋಗ ಸೌಧ’

ಕೆಪಿಎಸ್ಸಿ ಪ್ರತಿ ಬಾರಿ ನಡೆಸುವ ಕೆಎಎಸ್ ಹಾಗೂ ವಿವಿಧ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಅಕ್ರಮದ ಆರೋಪ ಬಂದಾಗ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಎಲ್ಲ ನಾಯಕರು ಸದನದಲ್ಲಿ ಧ್ವನಿ ಎತ್ತುತ್ತಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರ ದೊಡ್ಡ ಮಟ್ಟದಲ್ಲಿ ಬದಲಾವಣೆ ತಂದು ಆಯೋಗವನ್ನು ಸುಧಾರಣೆ ಮಾಡುತ್ತೇವೆಂದು ಹೇಳಿಕೆ ನೀಡಿ ಕೈ ತೊಳೆದುಕೊಂಡು ಬಿಡುತ್ತದೆ. ಕಳೆದ ವರ್ಷದ ಬಜೆಟ್ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ 384 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿನ ಲೋಪದೋಷದ ಬಗ್ಗೆ ಸುದೀರ್ಘ ಚರ್ಚೆ ಆಯಿತು. ಅದಕ್ಕೆ ಸರ್ಕಾರ ಹೇಳಿಕೆ ನೀಡಿ ವರ್ಷ ಕಳೆದರೂ ಇದುವರೆಗೂ ಯಾವುದೇ ಬದಲಾವಣೆ ಆಗದಿರುವುದು ದುರಂತ. ಯಾವುದೇ ಸರ್ಕಾರ ಬಂದರೂ ಕೆಪಿಎಸ್ಸಿಯ ಸುಧಾರಣೆ ಮರೀಚಿಕೆಯಾಗಿದೆ. ಆದ್ದರಿಂದ, ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಇನ್ನು ಮುಂದೆ ರಾಜ್ಯ ಸರ್ಕಾರದ ಎಲ್ಲ ಗ್ರೂಪ್ ‘ಬಿ' ಮತ್ತು ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಿ (ಕೆಇಎ) ಹಾಗೂ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಹೊಣೆಯನ್ನು ಕೇರಳ ಲೋಕ ಸೇವಾ ಆಯೋಗದಂಥ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇರುವ ಆಯೋಗಕ್ಕೆ ಅಥವಾ ಕೇಂದ್ರ ಲೋಕ ಸೇವಾ ಆಯೋಗಕ್ಕೆ ನೀಡಿ ‘ಉದ್ಯೋಗ ಸೌಧ’ವಾದ ಕೆಪಿಎಸ್ಸಿಯನ್ನು ‘ನಿರುದ್ಯೋಗ’ಸೌಧವನ್ನಾಗಿ ಮಾಡಿ ಶಾಶ್ವತವಾಗಿ ಮುಚ್ಚುವುದು ಒಳ್ಳೆಯದು.

– ಎಚ್.ರಾಧಾ, ಬೆಂಗಳೂರು, ಕೆಎಎಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.