ಹುನಗುಂದ: 'ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವ ಪ್ರಯತ್ನ ಮುಂದುವರೆದಿದೆ. ನಾವು ಯಾವುದೇ ಮಾತು ಕೊಟ್ಟಿಲ್ಲ' ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಅವರು ಹುನಗುಂದ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಆರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಾಗಿ ಸದನದಲ್ಲಿಯೇ ಬೊಮ್ಮಾಯಿ, ಯಡಿಯೂರಪ್ಪ ಮಾತು ಕೊಟ್ಟಿದ್ದರು. ತಾಯಿ ಆಣೆ ಮಾಡಿದ್ದರು. ಆದರೆ ಮೀಸಲಾತಿ ನೀಡದೇ ಮೋಸ ಮಾಡಿದರು. ಮೋಸ ಮಾಡಿದವರನ್ನು ಸಮಾಜದವರು ಮನೆಯಲ್ಲಿ ಕೂಡ್ರಿಸಿದರು. ನಾವು ಅವರಂತೆ ಮೋಸ ಮಾಡಿಲ್ಲ' ಎಂದರು.

12 ಜಿಲ್ಲೆಗಳ ಸಮೀಕ್ಷೆ ವರದಿ ಬರುವ ಮುಂಚೆಯೇ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲ್ಪಸಂಖ್ಯಾತರ 2ಬಿ ಮೀಸಲಾತಿ ಕಿತ್ತು, ಪಂಚಮಸಾಲಿ ಸಮಾಜಕ್ಕೆ 2ಡಿ ಅಂತ ಕೊಟ್ಟು ಮೂಗಿಗೆ ತುಪ್ಪ ಹಚ್ವಿದರು. ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲ್ಪಟ್ಟಾಗ ಸಾಲಿಸಿಟರ್ ಜನರಲ್ ಮೂಲಕ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಪ್ರಮಾಣ ಪತ್ರ ಸಲ್ಲಿಸಿ, ಬಿಜೆಪಿಯವರು ಮೋಸ ಮಾಡಿದರು.

'ನಮ್ಮ ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್ನಿಂದ ಮುಖ್ಯಮಂತ್ರಿ ಅವರನ್ನು ಕಂಡು ಉಳಿದ 12 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ಮಾಡಿಸಲು ಮನವಿ ಮಾಡಿದ್ದೇವೆ. ಅವರು ಸಮೀಕ್ಷೆಗೆ ಆದೇಶ ಮಾಡಿದ್ದು, ವರದಿ ಬಂದ ನಂತರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವ ನಮ್ಮ ಪ್ರಯತ್ನ ಮುಂದುವರಿದಿದೆ' ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-19-352040012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.