ಬೆಂಗಳೂರು: ಅರೆ ವೈದ್ಯಕೀಯ ಕೋರ್ಸ್ಗಳಿಗೆ (ಪ್ಯಾರಾ ಮೆಡಿಕಲ್) ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯು ಪೂರೈಸಿದ ವಿದ್ಯಾರ್ಥಿಗಳಿಗೇ ಪ್ರವೇಶ ನೀಡುವುದನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಅಲೈಡ್ ಮತ್ತು ಹೆಲ್ತ್ಕೇರ್ ರಾಷ್ಟ್ರೀಯ ಆಯೋಗಕ್ಕೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಇಲಾಖೆ ಮನವಿ ಮಾಡಿದೆ.

ಇದುವರೆಗೂ ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರೆ ವೈದ್ಯಕೀಯ (ಡಿಪ್ಲೊಮಾ) ಕೋರ್ಸ್ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಎಸ್ಎಸ್ಎಲ್ಸಿ ತೇರ್ಗಡೆಯಾದ ನಂತರ ಪ್ರಯೋಗಾಲಯ ತಂತ್ರಜ್ಞಾನ, ವೈದ್ಯಕೀಯ ಪ್ರತಿಫಲನ, ಶಸ್ತ್ರಚಿಕಿತ್ಸಾ ತಂತ್ರಜ್ಞಾನ, ಡಯಾಲಿಸಿಸ್, ಆರೋಗ್ಯ ಸಹಾಯಕರು, ಫಿಸಿಯೋಥೆರಪಿ, ಕಣ್ಣಿನ ತಂತ್ರಜ್ಞಾನ, ಶರೀರಶಾಸ್ತ್ರ, ಅಂಗರಚನಾ ಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಸಮುದಾಯ ಔಷಧ, ರೋಗಶಾಸ್ತ್ರ, ವಿಧಿವಿಜ್ಞಾನ ಔಷಧ, ಜೀವರಸಾಯನ ಶಾಸ್ತ್ರ ಸೇರಿದಂತೆ ವಿವಿಧ ಕೋರ್ಸ್ಗಳನ್ನು ಪೂರೈಸಿ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಪಡೆಯುತ್ತಿದ್ದರು. ಎರಡು ಅಥವಾ ಮೂರು ವರ್ಷಗಳ ಉದ್ಯೋಗಾಧಾರಿತ ಅರೆ ವೈದ್ಯಕೀಯ ಕೋರ್ಸ್ಗಳನ್ನು ಪೂರೈಸಿದ ನಂತರ ಕೆಲವರು ಎರಡನೇ ವರ್ಷದ ಪದವಿ ಕೋರ್ಸ್ಗಳಿಗೆ ನೇರ ಪ್ರವೇಶ ಪಡೆಯುತ್ತಿದ್ದರು.

‘ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ವಿಫಲ ಅವಕಾಶಗಳಿವೆ. ವೈದ್ಯಕೀಯ, ದಂತ ವೈದ್ಯಕೀಯ, ಪಶುವೈದ್ಯಕೀಯ, ಆಯುಷ್ ಕೋರ್ಸ್ಗಳು, ಡಿ.ಫಾರ್ಮಾ, ಎಂಜಿನಿಯರಿಂಗ್, ಬಿಎಸ್ಸಿ ಕೃಷಿ, ಬಿಎಸ್ಸಿ ನರ್ಸಿಂಗ್ ಸೇರುತ್ತಾರೆ. ಮೂರು ವರ್ಷಗಳ ವಿಜ್ಞಾನ ಪದವಿ ಓದಬಹುದು. ಆದರೆ, ಗ್ರಾಮೀಣ ಪ್ರದೇಶ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಚ್ಚಿನ ಸಂಖ್ಯೆಯ ಮಕ್ಕಳು ಎಸ್ಎಸ್ಎಲ್ಸಿ ತೇರ್ಗಡೆಯಾದ ನಂತರ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿ ಅರೆ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಅಲೈಡ್ ಮತ್ತು ಹೆಲ್ತ್ಕೇರ್ ರಾಷ್ಟ್ರೀಯ ಆಯೋಗದ ನಿರ್ಧಾರ ಇಂತಹ ಮಕ್ಕಳ ವೃತ್ತಿ ಶಿಕ್ಷಣದ ಅವಕಾಶ ಹಾಗೂ ಉದ್ಯೋದ ಭರವಸೆಯನ್ನೇ ಕಿತ್ತುಕೊಳ್ಳಲಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ 640 ಅರೆ ವೈದ್ಯಕೀಯ ಕಾಲೇಜು ಗಳಿವೆ. 2026–27ನೇ ಸಾಲಿನಿಂದಲೇ ಪಿಯು ಪೂರೈಸಿದ ವಿದ್ಯಾರ್ಥಿಗಳನ್ನೇ ಪ್ರವೇಶಕ್ಕೆ ಪರಿಗಣಿಸಬೇಕು ಎಂಬ ಆದೇಶ ವಾಪಸ್ ಪಡೆಯಬೇಕು ಎಂದು ಕಾಲೇಜು ಆಡಳಿತ ಮಂಡಳಿಗಳು ಒತ್ತಾಯಿಸಿವೆ.

ಅರೆ ವೈದ್ಯಕೀಯ ಪ್ರವೇಶಕ್ಕೆ ಪಿಯು ಕಡ್ಡಾಯ ನಿರ್ಧಾರ ಕಾಲೇಜುಗಳಿಗೆ ತೊಡಕಾಗಿದೆ. ನಿಯಮ ಎಲ್ಲ ರಾಜ್ಯ ಗಳಿಗೂ ಅನ್ವಯವಾಗುತ್ತದೆ. ತಿದ್ದುಪಡಿ ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ
ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ಹೊಸ ನೀತಿಯಿಂದ ಅರೆ ವೈದ್ಯಕೀಯ ಕೋರ್ಸ್ಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿ ಶೇ 90ರಷ್ಟು ಕಾಲೇಜುಗಳು ಬಾಗಿಲು ಮುಚ್ಚಲಿವೆ. ಉಪನ್ಯಾಸಕರು, ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ
ಅನಿಲ್ ಜಾನ್ ಕ್ರಿಸ್ಟೋಫರ್, ಮುಖ್ಯಸ್ಥ, ಸಿಎನ್ಕೆ ಶಿಕ್ಷಣ ಸಂಸ್ಥೆಗಳು

ಏಳು ವರ್ಷ ವ್ಯಯ

ಹಲವು ಅರೆ ವೈದ್ಯಕೀಯ ಕೋರ್ಸ್ಗಳನ್ನು (ಪ್ಯಾರಾ ಮೆಡಿಕಲ್) ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನ ಎಂದು ರಾಜ್ಯ ಸರ್ಕಾರ ಪರಿಗಣಿಸಿರಲಿಲ್ಲ.

ಎಲ್ಲ ಅರೆ ವೈದ್ಯಕೀಯ ಕೋರ್ಸ್ಗಳನ್ನು ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನ ಎಂದು ಪರಿಗಣಿಸಲು ಕೋರಿ ಕರ್ನಾಟಕ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.

ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನ ಎಂದು ಪರಿಗಣಿಸಿದರೆ ಸಾವಿರಾರು ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ನೆರವಾಗುತ್ತದೆ. ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೋರಲಾಗಿತ್ತು. ಈಗ ಪಿಯು ಪೂರೈಸಿದ ವಿದ್ಯಾರ್ಥಿಗಳಿಗಷ್ಟೇ ಪ್ರವೇಶ ನೀಡುವ ನಿರ್ಧಾರದಿಂದ ಎಸ್ಎಸ್ಎಲ್ಸಿ ನಂತರ ಪದವಿ ಪೂರೈಸಲು ಏಳು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.