ನವದೆಹಲಿ: ‘ಕೇಂದ್ರದ 2026–27ನೇ ಸಾಲಿನ ಬಜೆಟ್ನಲ್ಲಿ ನರೇಗಾ ಯೋಜನೆಗೆ ₹30 ಸಾವಿರ ಕೋಟಿಯಷ್ಟೇ ಅನುದಾನ ನೀಡಲಾಗಿದೆ. ಈ ಅನುದಾನ ಹಂಚಿಕೆ ಅಸಮರ್ಪಕ ಹಾಗೂ ಒಪ್ಪಲು ಸಾಧ್ಯವೇ ಇಲ್ಲ’ ಎಂದು ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.

ಸಂಸದ ಸಪ್ತಗಿರಿ ಶಂಕರ್ ಉಲಾಕಾ ನೇತೃತ್ವದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸ್ಥಾಯಿ ಸಮಿತಿಯ 25ನೇ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯವೈಖರಿಯನ್ನು ಸಮಿತಿ ತರಾಟೆಗೆ ತೆಗೆದುಕೊಂಡಿದೆ.

2026–27ನೇ ಕೇಂದ್ರ ಬಜೆಟ್ನಲ್ಲಿ ನರೇಗಾ ಯೋಜನೆಗೆ ₹30 ಸಾವಿರ ಕೋಟಿ ಅನುದಾನ ನೀಡಲಾಗಿದೆ. ನರೇಗಾ ಯೋಜನೆಯ ಅನೇಕ ಕಾಮಗಾರಿಗಳು ಅಪೂರ್ಣವಾಗಿವೆ ಹಾಗೂ ರಾಜ್ಯಗಳ ಪಾಲು ಬಾಕಿ ಇದೆ. ಈ ಕಾರಣಕ್ಕೆ ಈ ಅನುದಾನ ಮೀಸಲಿಡಲಾಗಿದೆ.

‘2025–26ನೇ ಸಾಲಿನ ಬಜೆಟ್ನಲ್ಲಿ ಇಲಾಖೆಗೆ ₹1,86,995 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಇಲಾಖೆ ಈ ವರೆಗೆ ₹99,090 ಕೋಟಿ ಅನುದಾನವನ್ನಷ್ಟೇ ಖರ್ಚು ಮಾಡಲಾಗಿದೆ. ಮಾರ್ಚ್ ಅಂತ್ಯದೊಳಗೆ ಉಳಿದ ಅನುದಾನ ಖರ್ಚು ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿರುವ ಸಮಿತಿ, ‘ಇಲಾಖೆಯ ಈ ಧೋರಣೆಯಿಂದಾಗಿ ಗ್ರಾಮೀಣ ಜನರು ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಹೇಳಿದೆ.

‘2026–27ನೇ ಸಾಲಿನಲ್ಲಿ ಇಲಾಖೆಗೆ ₹2,28,768 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, ಇದರಲ್ಲಿ ವಿಬಿ–ಜಿರಾಮ್ಜಿ ಯೋಜನೆಗೇ ₹95,692 ಕೋಟಿ ಮೀಸಲಿಡಲಾಗಿದೆ. ಗ್ರಾಮೀಣಾಭಿವೃದ್ಧಿಯ ಯೋಜನೆಗಳಾದ ನರೇಗಾ, ಪಿಎಂ ಆವಾಸ್ ಯೋಜನೆ, ಗ್ರಾಮ್ ಸಡಕ್ ಮತ್ತಿತರ ಯೋಜನೆಗಳಿಗೆ ಕನಿಷ್ಠ ಅನುದಾನ ಹಂಚಿಕೆ ಮಾಡಲಾಗಿದೆ. ಹಣದುಬ್ಬರ ಹಾಗೂ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಈ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಇಂತಹ ಸಂದರ್ಭದಲ್ಲಿ ಅನುದಾನ ಕಡಿತ ಮಾಡಿರುವುದು ಸರಿಯಲ್ಲ’ ಎಂದು ಸಮಿತಿ ಪ್ರತಿಪಾದಿಸಿದೆ.

‘2025–26ನೇ ಸಾಲಿನಲ್ಲಿ ಕೇಂದ್ರವು ರಾಜ್ಯಗಳಿಗೆ ಕೂಲಿ ಮೊತ್ತ ₹5,940 ಕೋಟಿ ಹಾಗೂ ಸಾಮಗ್ರಿಗಳ ಮೊತ್ತ ₹10,921 ಕೋಟಿ ಬಾಕಿ ಉಳಿಸಿಕೊಂಡಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಬಾಕಿ ಮೊತ್ತ ₹25 ಸಾವಿರ ಕೋಟಿಗೆ ಹೆಚ್ಚುವ ಅಂದಾಜು ಇದೆ. ನರೇಗಾ ಯೋಜನೆಗೆ ಈ ವರ್ಷ ಮೀಸಲಿಟ್ಟಿರುವ ಮೊತ್ತದಲ್ಲಿ ಬಹುತೇಕ ಬಾಕಿ ಪಾವತಿಗೆ ಹೋಗಲಿದೆ. ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಣವೇ ಇರುವುದಿಲ್ಲ. ಹೀಗಾಗಿ, ನರೇಗಾದಂತಹ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಹಣಕಾಸು ಸಚಿವಾಲಯಕ್ಕೆ ಒತ್ತಡ ಹೇರಬೇಕು’ ಎಂದು ಸಮಿತಿ ಸಲಹೆ ನೀಡಿದೆ. ಕೇಂದ್ರದಿಂದ ಕರ್ನಾಟಕಕ್ಕೆ ಕೂಲಿ ಮೊತ್ತ ₹218 ಕೋಟಿ ಹಾಗೂ ಸಾಮಗ್ರಿ ಬಾಕಿ ₹699 ಕೋಟಿ ಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.