ನವದೆಹಲಿ: ಕೇಂದ್ರ ವಾರ್ತಾ ಶಾಖೆಯಲ್ಲಿ (ಪಿಐಬಿ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕದ ಡಾ.ಎಚ್.ಆರ್. ಕೇಶವಮೂರ್ತಿ (59) ಮೈಸೂರಿನಲ್ಲಿ ಬುಧವಾರ ನಿಧನರಾದರು.
1995ರ ಶ್ರೇಣಿಯ ಭಾರತೀಯ ಸಮಾಚಾರ ಸೇವಾ ಅಧಿಕಾರಿಯಾಗಿದ್ದ ಅವರು ಕೆಲವು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನಗರಾಭಿವೃದ್ಧಿ ಸಚಿವಾಲಯ, ಕೃಷಿ ಸಚಿವಾಲಯ, ದೂರ ಸಂಪರ್ಕ ಸಚಿವಾಲಯ ಹಾಗೂ ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.