ಬೆಂಗಳೂರು: ನಗರದಲ್ಲಿ ಭಾನುವಾರ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿ ಆಗಲಿದ್ದು, ಪೊಲೀಸರು ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಅಲ್ಲದೇ, ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಿದ್ದಾರೆ.

ಎಚ್.ಎ.ಎಲ್ ಬಳಿ ಬಿಜೆಪಿ ರಾಜ್ಯ ಘಟಕ ಆಯೋಜಿಸಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳುವರು. ‘ದಿ ಆರ್ಟ್ ಆಫ್ ಲಿವಿಂಗ್’ನ 45ನೇ ವಾರ್ಷಿಕೋತ್ಸವ ಮತ್ತು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನ ಕಾರ್ಯಕ್ರಮದಲ್ಲೂ ಭಾಗಿ ಆಗಲಿದ್ದಾರೆ. ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ವಾಹನ ಸಂಚಾರ ನಿರ್ಬಂಧ: ಕಾರ್ಯಕ್ರಮ ನಡೆಯುವ ಎಚ್ಎಎಲ್ ಗೇಟ್ ನಂ. 30ರ ಸುತ್ತಮುತ್ತ ಭಾನುವಾರ ಬೆಳಿಗ್ಗೆ 5ರಿಂದ ಮಧ್ಯಾಹ್ನ 3ರ ವರೆಗೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು:

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್.ಡಿ ರಸ್ತೆ ಜಂಕ್ಷನ್ನಿಂದ ಟ್ರಿನಿಟಿ ಜಂಕ್ಷನ್ ವರೆಗೆ

ಎಚ್ಎಎಲ್ ವಿಮಾನ ನಿಲ್ದಾಣದ ಅಂಬ್ರೆಲಾ ಜಂಕ್ಷನ್ನಿಂದ ಗೇಟ್ 30ರ ವರೆಗೆ

ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನಿಲುಗಡೆ ವ್ಯವಸ್ಥೆ

ಎಚ್ಎಎಲ್ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ಪಾರ್ಕಿಂಗ್, ಎಸ್.ಡಿ ರಸ್ತೆಯ ಜಂಕ್ಷನ್, ಹಳೇ ವಿಮಾನ ನಿಲ್ದಾಣ

ಸರ್ ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನ, ಹಳೆ ವಿಮಾನ ನಿಲ್ದಾಣ ರಸ್ತೆ, ಮುರುಗೇಶ್ ಪಾಳ್ಯ

ಎಚ್ಎಎಲ್ ಬಸ್ ಯಾರ್ಡ್, ಪಿಎನ್ಬಿ ಬ್ಯಾಂಕ್ ಹತ್ತಿರ, ಸುರಂಜನ್ ದಾಸ್ ರಸ್ತೆ

ನೈಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ನೈಸ್ ರಸ್ತೆಯಲ್ಲಿ ಸಂಚರಿಸುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಪರ್ಯಾಯ ಮಾರ್ಗ

ತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ಕನಕಪುರ ರಸ್ತೆ ಕಡೆಗೆ ತೆರಳುವ ವಾಹನ ಸವಾರರು/ಚಾಲಕರು ಸಿಎಂಟಿಐ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು ರಾಜ್ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬಹುದು

ತುಮಕೂರು ರಸ್ತೆಯಲ್ಲಿ ನಗರದ ಒಳಭಾಗದಿಂದ ನೈಸ್ ರಸ್ತೆಯ ಮೂಲಕ ಕನಕಪುರ ರಸ್ತೆಯ ಕಡೆಗೆ ತೆರಳುವ ವಾಹನ ಸವಾರರು/ಚಾಲಕರು ಸಿಎಂಟಿಐ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು ರಾಜ್ಕುಮಾರ್ ಪುಣ್ಯಭೂಮಿ ರಸ್ತೆಯ ಮೂಲಕ ತೆರಳಬಹುದು

ಮಾಗಡಿ ರಸ್ತೆಯ ಮೂಲಕ ಬಂದು, ನೈಸ್ ರಸ್ತೆಯ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ವಾಹನ ಸವಾರರು/ ಚಾಲಕರು ಸುಮ್ಮನಹಳ್ಳಿ ಜಂಕ್ಷನ್ನಲ್ಲಿ ಬಳಿ ಬಲಕ್ಕೆ ತಿರುವು ಪಡೆದು ಮುಂದಕ್ಕೆ ಸಾಗಬೇಕು

ಮೈಸೂರು ರಸ್ತೆಯಲ್ಲಿ ಬಂದು, ನೈಸ್ ರಸ್ತೆಯ ಮೂಲಕ ಕನಕಪುರ ರಸ್ತೆ ಕಡೆಗೆ ಸಾಗುವ ವಾಹನ ಸವಾರರು/ ಚಾಲಕರು ನಾಯಂಡಹಳ್ಳಿ ಜಂಕ್ಷನ್ ಬಳಿ, ಬಲ ಹಾಗೂ ಎಡಕ್ಕೆ ತಿರುವು ಪಡೆದು ಮುಂದಕ್ಕೆ ಸಾಗಬಹುದು

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನ ಸವಾರರು ಮೈಸೂರು ರಸ್ತೆಯ ಕೆಂಗೇರಿ ವಿಷ್ಣುವರ್ಧನ್ ರಸ್ತೆಯ ಮೂಲಕ ಉತ್ತರಹಳ್ಳಿ ವಸಂತಪುರ ಕ್ರಾಸ್ ಕನಕಪುರ ರಸ್ತೆಗೆ ಸೇರಿ, ಕೋಣನಕುಂಟೆ ಕ್ರಾಸ್ನಲ್ಲಿ ಎಡಕ್ಕೆ ತಿರುವು ಪಡೆದು ಹರಿನಗರ ಕ್ರಾಸ್ ಜಂಬು ಸವಾರಿ ದಿಣ್ಣೆ ಮೂಲಕ ಬನ್ನೇರುಘಟ್ಟ ರಸ್ತೆಯತ್ತ ಸಾಗಬಹುದು

ಬೆಂಗಳೂರಿನಿಂದ ಕನಕಪುರಕ್ಕೆ ಚಲಿಸುವ ವಾಹನ ಸವಾರರು ಕೋಣನಕುಂಟೆ ಕ್ರಾಸ್ನಲ್ಲಿ ಬಲಕ್ಕೆ ತಿರುವು ಪಡೆದು ಕೋಣನಕುಂಟೆ ವಸಂತಪುರ ಉತ್ತರಹಳ್ಳಿ ಮೂಲಕ ರಸ್ತೆಯಲ್ಲಿ ಅಗರ ಕಡೆಗೆ ಹೋಗುವ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು ಅಗರ, ಬಂಜಾರಪಾಳ್ಯ, ಉತ್ತರಿ ಗ್ರಾಮದ ರಸ್ತೆಯ ಮೂಲಕ ಕಗ್ಗಲೀಪುರದಲ್ಲಿ ಬಲಕ್ಕೆ ತಿರುವು ಪಡೆದು ಕನಕಪುರಕ್ಕೆ ಸಂಚರಿಸಬಹುದು

ಬೆಂಗಳೂರಿನಿಂದ ಕನಕಪುರಕ್ಕೆ ಚಲಿಸುವ ವಾಹನ ಸವಾರರು ಕನಕಪುರ ಮುಖ್ಯರಸ್ತೆಯ ಎ2ಬಿ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು ನಾರಾಯಣ ನಗರ ಜೋಡಿ ರಸ್ತೆ, ಅಂಜನಾಪುರ 80 ಅಡಿ ರಸ್ತೆ ನಂತರ ಬಲಕ್ಕೆ ತಿರುವು ಪಡೆದು ಬನ್ನೇರುಘಟ್ಟ ಮುಖ್ಯರಸ್ತೆಯ ಮೂಲಕ ಕಗ್ಗಲೀಪುರಕ್ಕೆ ಚಲಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.