ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ‘ಎಡ್ಯುವರ್ಸ್’ ಶೈಕ್ಷಣಿಕ ಮೇಳವನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೂ ಅನುಕೂಲವಾಗುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ‘ಎಡ್ಯುವರ್ಸ್’ನ ಪ್ರೋಮೊವನ್ನು ಮಧು ಬಂಗಾರಪ್ಪ ಅವರು ಅನಾವರಣ ಮಾಡಿದರು. ‘ನಗರ ಪ್ರದೇಶದಲ್ಲಿ ಇಂತಹ ಶೈಕ್ಷಣಿಕ ಮೇಳ ನಡೆಸುವುದರಿಂದ ಆ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಇಂತಹ ಮೇಳ ನಡೆಸಿದರೆ ಇನ್ನಷ್ಟು ಸಹಾಯವಾಗಲಿದೆ’ ಎಂದರು.

16ನೇ ಆವೃತ್ತಿಯ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳವು ಏಪ್ರಿಲ್ 4–5ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ಯಾಂಡ್ನಲ್ಲಿ ಮತ್ತು ಏಪ್ರಿಲ್ 11–12ರಂದು ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ನಡೆಯುವ ಮೇಳದಲ್ಲಿ 90ಕ್ಕೂ ಹೆಚ್ಚು, ಹುಬ್ಬಳ್ಳಿಯಲ್ಲಿ 60ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗಿಯಾಗಲಿವೆ. ಎಂಜಿನಿಯರಿಂಗ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ಮಾಧ್ಯಮ, ಆರೋಗ್ಯ ವಿಜ್ಞಾನ ಮತ್ತು ಕಾನೂನು ಪದವಿ ಕ್ಷೇತ್ರಗಳಲ್ಲಿ ಇರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಸಿಇಟಿ, ಕೆಸಿಇಟಿ, ಕಾಮೆಡ್–ಕೆ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಜತೆಗೆ ವಿದ್ಯಾರ್ಥಿಗಳು ನೇರವಾಗಿ ಚರ್ಚೆ ನಡೆಸಬಹುದಾಗಿದೆ. ಅಣಕು ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನವನ್ನೂ ನೀಡಲಾಗುತ್ತದೆ.

ಈ ಹಿಂದಿನ 15 ಆವೃತ್ತಿಗಳ ‘ಎಡ್ಯುವರ್ಸ್’ನಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾರ್ಗದರ್ಶನ ಪಡೆದಿದ್ದಾರೆ. 16ನೇ ಆವೃತ್ತಿಯಲ್ಲಿ 10,000 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.