ಬೆಂಗಳೂರು: ಮದ್ಯದ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ ನೀತಿಯಲ್ಲಿ ಭಾರಿ ಬದಲಾವಣೆಗೆ ರಾಜ್ಯ ಸರ್ಕಾರವು ಮುಂದಾಗಿದ್ದು, ಮಧ್ಯಮ ಮತ್ತು ಪ್ರೀಮಿಯಂ ದರದ ಮದ್ಯದ ಮೇಲಿನ ಸುಂಕ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಅಗ್ಗದ ಮದ್ಯದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

ಅಬಕಾರಿ ಸುಂಕ ನೀತಿಯನ್ನು ಸಮಗ್ರವಾಗಿ ಬದಲಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರೂ ವಿಧಾನ ಮಂಡಲದ ಉಭಯ ಸದನಗಳಲ್ಲಿ, ಮದ್ಯದ ಮೇಲಿನ ತೆರಿಗೆ ಸ್ಲ್ಯಾಬ್ಗಳನ್ನು ಬದಲಾವಣೆ ಮಾಡುವುದಾಗಿ ಹೇಳಿದ್ದರು.

ಈಗ ಬ್ರ್ಯಾಂಡಿ, ವಿಸ್ಕಿ, ಜಿನ್, ರಮ್ನಂತಹ ಐಎಂಎಲ್ ಮೇಲಿನ 16 ತೆರಿಗೆ ದರದ ಸ್ಲ್ಯಾಬ್ಗಳು ಜಾರಿಯಲ್ಲಿವೆ. ಇದನ್ನು 8ಕ್ಕೆ ಇಳಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಈ ಸಲುವಾಗಿ ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (ಎರಡನೇ ತಿದ್ದುಪಡಿ) ನಿಯಮಗಳು–2026’ರ ಕರಡನ್ನು ಹೊರಡಿಸಿದೆ.

ಆರಂಭಿಕ ಘೋಷಿತ ದರದ ಮೊದಲ ಸ್ಲ್ಯಾಬ್ ಅನ್ನು ಈ ಮೊದಲಿನಂತೆಯೇ ₹0ಯಿಂದ ₹470ರಷ್ಟೇ ಉಳಿಸಿಕೊಳ್ಳಲಾಗಿದೆ. ಈಗ ಇದಕ್ಕೆ ₹297 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತಿದ್ದು, ಪ್ರಸ್ತಾಪಿತ ಕರಡು ಮಸೂದೆಯಲ್ಲಿ ಈ ದರವನ್ನು ₹50ಕ್ಕೆ ಇಳಿಸಲಾಗಿದೆ. ₹471–₹520ರ ಎರಡನೇ ಸ್ಲ್ಯಾಬ್ ಅನ್ನೂ ಉಳಿಸಿಕೊಂಡು, ಅದಕ್ಕೆ ವಿಧಿಸುತ್ತಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು ₹367ರಿಂದ ₹220ಕ್ಕೆ ಇಳಿಸಲಾಗುತ್ತದೆ. ಈ ಎರಡೂ ಸ್ಲ್ಯಾಬ್ಗಳ ಅಡಿಯಲ್ಲಿ ಬರುವ ಮದ್ಯದ ಮಾರಾಟ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಆದರೆ, ನಂತರದ ಆರು ತೆರಿಗೆ ಸ್ಲ್ಯಾಬ್ಗಳನ್ನು ಸಮಗ್ರವಾಗಿ ಬದಲಾವಣೆ ಮಾಡಲಾಗಿದೆ. ಈಗ ಜಾರಿಯಲ್ಲಿರುವ ಸುಂಕಕ್ಕಿಂತ ಹೆಚ್ಚು ಸುಂಕ ವಿಧಿಸಲು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈಗ 16ನೇ ತೆರಿಗೆ ಸ್ಲ್ಯಾಬ್ನಲ್ಲಿ (₹20,001 ಮತ್ತು ಮೇಲ್ಪಟ್ಟು ಘೋಷಿತ ದರ) ₹3,000 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಇದು ಈಗ ಇರುವ ಅತ್ಯಂತ ಕಡೆಯ ತೆರಿಗೆ ಸ್ಲ್ಯಾಬ್. ಕರಡು ಮಸೂದೆಯಲ್ಲಿ ಕಡೆಯ ತೆರಿಗೆ ಸ್ಲ್ಯಾಬ್ನ ಘೋಷಿತ ದರವನ್ನು ₹5,001 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಿತಿಗೊಳಿಸಲಾಗಿದೆ. ಈ ಸ್ಲ್ಯಾಬ್ಗೆ ₹3,700 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುತ್ತದೆ.

ಈಗ ಜಾರಿಯಲ್ಲಿರುವ ಸುಂಕ ನೀತಿಯ ಪ್ರಕಾರ ₹5,001ರ ಘೋಷಿತ ದರದ ಮದ್ಯಕ್ಕೆ ₹1,600ರಷ್ಟು ಹೆಚ್ಚುವರಿ ಅಬಕಾರಿ ಸುಂಕವಷ್ಟೇ ಅನ್ವಯವಾಗುತ್ತಿತ್ತು. ಕರಡು ಮಸೂದೆ ಜಾರಿಯಾದರೆ ಅಷ್ಟೇ ಘೋಷಿತ ದರದ ಮದ್ಯಕ್ಕೆ ಹೆಚ್ಚುವರಿಯಾಗಿ ₹2,100ರಷ್ಟು ಸುಂಕ ತೆರಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.