ಬೆಂಗಳೂರು: ಇಟಲಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟಾಫಿ ಚಾಕೊಲೆಟ್ ಪೊಟ್ಟಣವನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದೀಗ, ಇದೇ ವಿಷಯವನ್ನು ಇಟ್ಟುಕೊಂಡು ವಿಪಕ್ಷಗಳು ಮೋದಿಯವರನ್ನು ವ್ಯಂಗ್ಯ ಮಾಡುತ್ತಿವೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನರೇಂದ್ರ ಮೋದಿಯವರು ಚಾಕೊಲೆಟ್ ನೀಡುತ್ತಿರುವುದು ವಿದೇಶಿ ನಾಯಕರಿಗೆ ಮಾತ್ರವಲ್ಲ, ಕಳೆದ 13 ವರ್ಷಗಳಿಂದ ಭಾರತೀಯರಿಗೂ ಬಗೆಬಗೆಯ, ಬಣ್ಣಬಣ್ಣದ ಚಾಕೊಲೆಟ್ ನೀಡಿದ್ದಾರೆ. ನೀಡುತ್ತಲೇ ಇದ್ದಾರೆ! ಎಂದು ಕುಟುಕಿದ್ದಾರೆ.

ಮಕ್ಕಳು ಅಳುವಾಗ ಹೇಗೆ ಚಾಕೊಲೆಟ್ ನೀಡಿ ಸಮಾಧಾನಪಡಿಸುತ್ತಾರೋ ಹಾಗೆಯೇ, ದೇಶದ ಜನ ಸಮಸ್ಯೆಗಳಲ್ಲಿರುವಾಗ ಘೋಷಣೆಗಳೆಂಬ ಚಾಕೊಲೆಟ್ ನೀಡಿ ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಭಾರತೀಯರು ಈ ಕನಸೆನ್ನುವ ಚಾಕೊಲೆಟ್ಗಳನ್ನು ಸವಿಯುತ್ತಾ, ಸಮಾಧಾನಗೊಳ್ಳಬೇಕು! ಎಂದು ವ್ಯಂಗ್ಯ ಮಾಡಿದ್ದಾರೆ.

ಪ್ರತಿ ಚುನಾವಣೆಗೊಂದು ಘೋಷಣೆ, ಪ್ರತಿ ವರ್ಷಕ್ಕೊಂದು ಘೋಷಣೆ, ಪ್ರತಿ ವೈಫಲ್ಯಕ್ಕೊಂದು ಘೋಷಣೆ, ಇವುಗಳು ವಾಸ್ತವವಾಗಿದ್ದು ಮಾತ್ರ ಶೂನ್ಯ ಎಂದು ಕಿಡಿಕಾರಿದ್ದಾರೆ.

ಭಾರತೀಯರಿಗೆ ಹುಸಿ ಸಂತೋಷವನ್ನು ನೀಡುವ ಈ ಚಾಕೊಲೆಟ್ ಗಳು ಈಗ ಸಲಹೆಗಳೆಂಬ ಹೊಸ ರೂಪಕ್ಕೆ ತಿರುಗಿವೆ..

ಅಡುಗೆಗೆ ಎಣ್ಣೆ ಬಳಸಬೇಡಿ, ಪೆಟ್ರೋಲ್ ಬಳಕೆ ಕಡಿಮೆಗೊಳಿಸಿ, ಗ್ಯಾಸ್ ಬದಲು ಗಟರ್ ಗ್ಯಾಸ್ ಬಳಸಿ, ವರ್ಕ್ ಫ್ರಮ್ ಹೋಮ್ ಮಾಡಿ, ಬ್ಯೂಟಿ ಪಾರ್ಲರ್ ಗೆ ಹೋಗಬೇಡಿ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಮಾಡಿ, ಇತ್ಯಾದಿ.... ಸಿಹಿ ಚಾಕೊಲೆಟ್ ನೀಡುತ್ತಿದ್ದ ಮೋದಿಯವರು ಈಗ ಭಾರತೀಯರಿಗೆ ಕಹಿ ಚಾಕೊಲೆಟ್ ನೀಡಲು ಶುರು ಮಾಡಿದ್ದಾರೆಂದರೆ, ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದೇ ಅರ್ಥ ಎಂಬುದಾಗಿ ಬರೆದುಕೊಂಡಿದ್ದಾರೆ.

ಗುಜರಾತ್ ಮಾಡೆಲ್, ಅಚ್ಚೇದಿನ್, ವಿಶ್ವಗುರು, ಮೇಕ್ ಇನ್ ಇಂಡಿಯಾ, ಖೇಲೊ ಇಂಡಿಯಾ, ಅಮೃತ್ ಕಾಲ್, ವಿಕಸಿತ್ ಭಾರತ್, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ

ಆತ್ಮ ನಿರ್ಭರ ಭಾರತ್, ಬೇಟಿ ಬಚಾವೋ, ಬೇಟಿ ಪಡಾವೋ, ಖೇಲೋ ಇಂಡಿಯಾ, 20 ಲಕ್ಷ ಕೋಟಿ ಪ್ಯಾಕೇಜ್.. ಹೀಗೆ, ಮೋದಿಯವರು ಭಾರತೀಯರಿಗೆ ಕೊಟ್ಟಿರುವ ಘೋಷಣೆಗಳೆಂಬ ಚಾಕೊಲೆಟ್ ಹಲವಾರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.