ಬೆಂಗಳೂರು: ‘ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ನರೇಗಾ ಯೋಜನೆ ಮಾರ್ಚ್ 31ರಂದು ಕೊನೆಗೊಳ್ಳಲಿದೆ. ಆದರೆ, ಏಪ್ರಿಲ್ 1ರಿಂದ ‘ವಿಬಿ ಜಿ ರಾಮ್ ಜಿ’ ಯೋಜನೆ ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣಿಸುತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ವಿಬಿ ಜಿ ರಾಮ್ ಜಿ ಯೋಜನೆಯನ್ನು ಗ್ರಾಮೀಣ ಕಾರ್ಮಿಕರಿಗೆ, ಗ್ರಾಮಗಳಿಗೆ ತಲುಪಿಸಲು ಬೇಕಾದ ಅಗತ್ಯ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಸಿದ್ಧಪಡಿಸಬೇಕಿತ್ತು, ಆದರೆ, ಇನ್ನೂ ಯಾವುದೇ ನಿಯಮಗಳು ರೂಪುಗೊಂಡಿಲ್ಲ. ನಿಧಿ ಹಂಚಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಗ್ರಾಮ ಪಂಚಾಯಿತಿಗಳನ್ನು ವರ್ಗೀಕರಿಸಲು ಯಾವುದೇ ಅಂತಿಮ ನಿಯತಾಂಕಗಳು ತಯಾರಾಗಿಲ್ಲ. ಸಾಮಾಜಿಕ ಲೆಕ್ಕಪರಿಶೋಧನೆಯಂತಹ ಪ್ರಮುಖ ಪ್ರಕ್ರಿಯೆಗಳು ಕೂಡಾ ವ್ಯಾಖ್ಯಾನಿಸಲ್ಪಟ್ಟಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ.

‘ಬೇಸಿಗೆ ಸಮಯವು ಗ್ರಾಮೀಣ ಜನರಿಗೆ ಉದ್ಯೋಗದ ಗರಿಷ್ಠ ಬೇಡಿಕೆಯ ತಿಂಗಳುಗಳಾಗಿವೆ. ಉದ್ಯೋಗ ಖಾತರಿಗೆ ಹೆಚ್ಚು ಅವಲಂಬನೆ ವ್ಯಕ್ತಗೊಳ್ಳುವ ಸಮಯ. ಇಂತಹ ಸಮಯದಲ್ಲೇ ಉದ್ಯೋಗ ಒದಗಿಸುವ ಯೋಜನೆ ಸ್ಥಗಿತಗೊಂಡಿದೆ. ಅನುಮೋದನೆಗಳು ವಿಳಂಬವಾಗುತ್ತಿವೆ. ಅಲ್ಲದೆ, ಬೇಡಿಕೆಯ ಹೊರತಾಗಿಯೂ ಕುಟುಂಬಗಳು ಉದ್ಯೋಗ ಪಡೆಯಲಾಗುತ್ತಿಲ್ಲ ಎಂಬ ವರದಿಗಳು ಬಂದಿವೆ. ಕೇಂದ್ರ ಸರ್ಕಾರವು ಕಾನೂನಾತ್ಮಕ ಉದ್ಯೋಗದ ಖಾತರಿಯನ್ನು ತೆಗೆದು, ನಿಯಮ ಆಧಾರಿತ ಹಂಚಿಕೆಯಾಗಿ ಬದಲಾವಣೆ ಮಾಡಿರುವುದು ನಕಾರಾತ್ಮಕ ಪರಿಣಾಮ ತೋರಿಸಲು ಆರಂಭಿಸಿದೆ’ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರದ ಬಿಜೆಪಿ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆಯು ಗ್ರಾಮೀಣ ಭಾರತವನ್ನು ಪರಿವರ್ತಿಸುತ್ತದೆ ಎಂದು ಹೇಳಿಕೊಂಡಿತ್ತು. ಆದರೆ, ಅದು ಹೀಗೆ ಜನರ ಜೀವನೋಪಾಯಕ್ಕೆ ಮಾರಕವಾಗಿ ಮತ್ತು ನಕಾರಾತ್ಮಕ ಪರಿವರ್ತನೆ ಎನ್ನುವುದು ವಾಸ್ತವವಾಗಿ ಕಂಡುಬರುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.