ಪುತ್ತೂರು: ಹಿಂದೂಗಳಾಗಿ ಹುಟ್ಟು ವುದು ನಮ್ಮ ಪೂರ್ವ ಜನ್ಮದ ಪುಣ್ಯ. ಹಿಂದೂಗಳಾದ ನಮ್ಮಲ್ಲಿ ಸನಾತನ ಧರ್ಮದ ಸದಸ್ಯರು ಎಂಬ ಆತ್ಮ ಗೌರವ ಇರಬೇಕು. ನಾವೆಲ್ಲರೂ ಒಂದೇ ಎನ್ನುವ ಭಾವನೆ ಇರಬೇಕು ಎಂದು ಕಂಚಿ ಕಾಮ ಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಶನಿವಾರ ನಡೆದ ಕೋಟಿ ಶ್ರೀರಾಮ ತಾರಕ ಮಹಾ ಯಜ್ಞದ ಪೂರ್ಣಾಹುತಿ ಕಾರ್ಯಕ್ರಮದ ಬಳಿಕ ಧರ್ಮ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿ ವ್ಯಕ್ತಿಗತ ವಿನಯ ಇರಬೇಕು. ಸಮಷ್ಟಿ ಚಿಂತನೆಯಲ್ಲಿ ಗರ್ವ ಇರಬೇಕು. ಸನಾತನ ಧರ್ಮದ ರಕ್ಷಣೆ ಮಾಡುವವರನ್ನು ಸದಾ ಬೆಂಬಲಿಸುವ ಮೂಲಕ ಧರ್ಮ ರಕ್ಷಣೆ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ನಾವು ಪ್ರತೀ ದಿನ ಭಗವಾನ್ನಾಮ ಜಪ ಮಾಡಿ ಪುಣ್ಯ, ಹಣ ಸಂಪಾದನೆ ಮಾಡಬೇಕು. ಇದಕ್ಕೆ ಸುಲಭ ಮತ್ತು ಶಾಸ್ತ್ರೀಯ ಮಾರ್ಗ ರಾಮ ತಾರಕ ಜಪ ಮಂತ್ರ. ರಾಮ ನಾಮವೇ ಜನ್ಮ ರಕ್ಷಕ ಮಂತ್ರ. ರಾಮ ನಾಮ ಸಂಕೀರ್ತನೆಗೆ ಉತ್ಕೃಷ್ಟ ಫಲವಿದೆ. ಲೋಕ ಕಲ್ಯಾಣ, ಸಮಾಜ ವಿಕಾಸಕ್ಕಾಗಿ ಹನುಮಗಿರಿಯಲ್ಲಿ ನಡೆಯುತ್ತಿರುವಂತಹ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಎಲ್ಲಡೆ ನಡೆಯುತ್ತಿರಬೇಕು ಎಂದರು.

ದೇಶದಲ್ಲಿ ಗೋವುಗಳ ಸಂರಕ್ಷಣೆ ಆಗಬೇಕು. ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ಯಾವುದೇ ಭಾಗದಿಂದ ಒಂದೇ ಒಂದು ಹಸು ಕೇರಳಕ್ಕೆ ವ್ಯಾಪಾರಕ್ಕೆ ಹೋಗಬಾರದು. ಹಿಂದೂ ಮತ, ಧರ್ಮ ಪ್ರಚಾರ ಆಗಬೇಕು. ಪ್ರತಿ ಮನೆಯಲ್ಲೂ ಜನ್ಮದಿನಾಚರಣೆ ಸೇರಿದಂತೆ ಕೆಲವು ಆಚರಣೆಗಳ ವೇಳೆ ಧಾರ್ಮಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಅನೇಕ ಮಹನೀಯರು ಜನಿಸಿದ್ದರೂ ರಾಮನಿಗೆ ಸಮಾನರಾದವರು ಯಾರೂ ಇಲ್ಲ. ರಾಮನದ್ದು ಸರ್ವೋಚ್ಚ ವ್ಯಕ್ತಿತ್ವ. ಸತ್ಪರಿವರ್ತನೆಯೇ ರಾಮ ತಾರಕ ಮಂತ್ರದ ವೈಶಿಷ್ಟ. ವ್ಯಕ್ತಿಯಲ್ಲಿ ಸಾತ್ವಿಕ ಪರಿವರ್ತನೆಯಾದಾಗ ಸಮಾಜದ ಪರಿವರ್ತನೆಯಾಗುತ್ತದೆ. ಇಲ್ಲಿ ಆರಂಭಿಸಿರುವ ರಾಮ ತಾರಕ ಮಂತ್ರವನ್ನು ಜೋಪಾನ ಮಾಡಿ ನಿತ್ಯ ನಿರಂತರ ಅನುಷ್ಠಾನ ಮಾಡಿದರೆ ಮುಕ್ತಿಗೆ ಸೋಪಾನವಾಗುತ್ತದೆ ಎಂದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತ ನಾಡಿ, ಹಿಂದೂ ಧರ್ಮದ ಶ್ರೇಯಸ್ಸಿ ಗಾಗಿ ಇಂಥ ಸತ್ಕಾರ್ಯಗಳು ಆಗಾಗ ನಡೆಯುತ್ತಿರಬೇಕು. ಋಷಿ ಮುನಿಗಳ, ಸಾಧು ಸಂತರ ನೈಪುಣ್ಯದಿಂದಾಗಿ ಭಾರತಕ್ಕೆ ತೇಜಸ್ಸು ಬಂದಿದೆ. ಹಿಂದೂ ಧರ್ಮ ಸುಖಕರವಾಗಿದ್ದರೆ ಮಾತ್ರ ಅದರ ಅಡಿಯಲ್ಲಿರುವ ಇತರ ಧರ್ಮಗಳೂ ಸುಖವಾಗಿರುತ್ತದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-29-954878408

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.