ಭಟ್ಕಳ: 'ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಬಿಟ್ಟು ಕೊಟ್ಟಿದ್ದಲ್ಲ, ಡಿ.ಕೆ.ಶಿವಕುಮಾರ್ ಅದನ್ನು ಒದ್ದು ಕಿತ್ತುಕೊಂಡಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು.

'ಸಿದ್ದರಾಮಯ್ಯ ಇನ್ನೂ ಸ್ವಲ್ಪ ಕಾಲಾವಕಾಶ ಕೋರುತ್ತಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕಾಲಾವಕಾಶ ನೀಡದೆ ರಾಜೀನಾಮೆ ಪಡೆದಿದೆ. ಅದರ ಹಿಂದೆ ಪದೇ ಪದೇ ಡಿ.ಕೆ.ಶಿವಕುಮಾರ ಹೇರುತ್ತಿದ್ದ ಒತ್ತಡವಿದೆ' ಎಂದು ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುವಾಗ ಹೇಳಿದರು.

'ಮುಂದಿನ ಎರಡು ವರ್ಷ ರಾಜ್ಯದಲ್ಲಿ ಲೂಟಿ ಹೆಚ್ಚಲಿದೆ. ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿಲಿ ಎನ್ನುವಂತ ಸ್ಥಿತಿ ಆಗಿದೆ. ಸಿದ್ದರಾಮಯ್ಯ ಅವಧಿಯಲ್ಲೂ ಭ್ರಷ್ಟಾಚಾರವಿತ್ತು. ಈಗ ಇನ್ನಷ್ಟು ಹೆಚ್ಚಲಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಆಗಿರಲಿದೆ. ಡಿ.ಕೆ.ಶಿವಕುಮಾರ ಎಟಿಎಂ ಮುಖ್ಯಸ್ಥರಾಗಿದ್ದಾರೆ' ಎಂದು ಆರೋಪಿಸಿದರು.

'ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಯತ್ನಿಸಿದ್ದ ಉಗ್ರನನ್ನು ಬ್ರದರ್ ಎಂದು ಕರೆದಿದ್ದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಗುಣವೂ ಒಂದೇ. ಇಬ್ಬರೂ ಭ್ರಷ್ಟಾಚಾರಿಗಳು' ಎಂದು ಭಟ್ಕಳದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

'ಮುರಿನಕಟ್ಟೆ ತೆರವುಗೊಂಡ ಜಾಗದಲ್ಲೇ ಮರುನಿರ್ಮಾಣ ಆಗಬೇಕು. ಸರ್ಕಾರವೇ ಕಟ್ಟೆ ನಿರ್ಮಿಸಲು ಸೂಚಿಸಿದ್ದೇನೆ. ಅವರು ನಿರ್ಮಿಸದಿದ್ದರೆ ನಾನೇ ಮುರಿನಕಟ್ಟೆ ನಿರ್ಮಿಸುವೆ' ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ಸುನೀಲ ಹೆಗಡೆ, ಶಿವಾನಂದ ನಾಯ್ಕ, ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.