ಬೆಂಗಳೂರು: ‘ಟಿ.ನರಸೀಪುರದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು (ಕೆಎಸ್ಐಸಿ) ಹಂತ–ಹಂತವಾಗಿ ಮುಚ್ಚಲು ಸರ್ಕಾರ ಒಂದು ‘ಚಕ್ರವ್ಯೂಹ’ ರಚಿಸಿದಂತೆ ಕಾಣುತ್ತಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ದೂರಿದ್ದಾರೆ.

‘ಸಂಸ್ಥೆಗೆ ಸೇರಿದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಕೈಬಿಡಲಾಗುವುದು ಎಂದು ರೇಷ್ಮೆ ಸಚಿವರು ವಿಧಾನಸಭೆಯಲ್ಲಿ ಘೋಷಿಸಿದ್ದರು. ಆದರೆ, ಈ ಘೋಷಣೆ ಬೆನ್ನಲ್ಲೇ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಸಚಿವರು ಸದನದಲ್ಲಿ ಭರವಸೆ ನೀಡಿದ ಮರುದಿನವೇ ವರುಣಾ ಕ್ಷೇತ್ರದ ಪ್ರಭಾವಿ ನಾಯಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿ, ಕೆಎಸ್ಐಸಿ ಘಟಕವು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಕ್ರೀಡಾಂಗಣ ಯೋಜನೆ ಕೈಬಿಡುವುದಾಗಿ ಸದನದಲ್ಲಿ ಹೇಳಿದ್ದರೂ, ಆ ಭೂಮಿಯನ್ನು ಕ್ರೀಡಾ ಇಲಾಖೆಯಿಂದ ಮತ್ತೆ ಕೆಎಸ್ಐಸಿಗೆ ವಾಪಸ್ ನೀಡುವ ಅಧಿಕೃತ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ’ ಎಂದು ಹೇಳಿದ್ದಾರೆ.

‘ಇನ್ನೊಂದೆಡೆ, ತ್ಯಾಜ್ಯ ಸಂಸ್ಕರಣಾ ಘಟಕ (ಇಟಿಪಿ) ಇಲ್ಲ ಎಂಬ ಕಾರಣ ನೀಡಿ ಕಾರ್ಖಾನೆಯನ್ನು ಮುಚ್ಚುವಂತೆ ನೋಟಿಸ್ ಕೊಡಿಸಲಾಗುತ್ತಿದೆ. ಮೊದಲು ಜಾಗ ಕಿತ್ತುಕೊಳ್ಳುವುದು, ನಂತರ ಆ ಜಾಗ ಸಿಗದ ಕಾರಣಕ್ಕೆ ನಿಯಮ ಉಲ್ಲಂಘನೆ ನೆಪ ಹೂಡಿ ಕಾರ್ಖಾನೆ ಬೀಗ ಜಡಿಯುವುದು. ಇದು ಆಡಳಿತವೋ ಅಥವಾ ಭೂಮಾಫಿಯಾದ ಪರವಾದ ಸಂಚೋ’ ಎಂದು ಅಶೋಕ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.