ಬೆಂಗಳೂರು: ‘ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯ ಅಂಚಿಗೆ ಹೋಗಿದ್ದು, ಮುಖ್ಯಮಂತ್ರಿ ಹೇಳುವ ಆರ್ಥಿಕ ಶಿಸ್ತು ಕೇವಲ ಪುಸಕ್ತದ ಬದನೇಕಾಯಿ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹರಿಹಾಯ್ದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆಯನ್ನು ಆರಂಭಿಸಿದ ಅವರು, ‘ಈ ಬಜೆಟ್ ಬಡ ಮತ್ತು ಮಧ್ಯಮ ವರ್ಗದವರಿಗೆ ಅನ್ಯಾಯ ಮಾಡಿದೆ. ವಿತ್ತೀಯ ಕೊರತೆಯ ಜತೆಗೆ ಕೆಟ್ಟ ಆರ್ಥಿಕ ನೀತಿಗಳ ಪರಿಣಾಮ ರಾಜ್ಯದ ಬೆಳವಣಿಗೆ ದರವೂ ಕುಸಿದಿದೆ. ಅವೈಜ್ಞಾನಿಕ ಗ್ಯಾರಂಟಿಗಳಿಂದಾಗಿ ಆರ್ಥಿಕ ವ್ಯವಸ್ಥೆಯೂ ಹಳಿ ತಪ್ಪಿದೆ. ಹೀಗಾಗಿ ಸಾಲದ ಪ್ರಮಾಣ ಹೆಚ್ಚಾಗಿದೆ’ ಎಂದರು.

‘ಸಿದ್ದರಾಮಯ್ಯ ಆಡಳಿತದಲ್ಲಿ ಸ್ಮಶಾನಗಳಲ್ಲಿ ಗುಂಡಿ ತೋಡುವವರಿಗೆ 8 ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಚಾಮರಾಜನಗರದಲ್ಲಿ ನೀರುಗಂಟಿಗಳಿಗೆ 21 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಇದರ ಪರಿಣಾಮ ನೀರುಗಂಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಬೆಂಗಳೂರಿನ ವ್ಯಕ್ತಿಯೊಬ್ಬರು ಮೃತ ಮಗಳ ನೇತ್ರದಾನ ಮಾಡಲು ಆಂಬುಲೆನ್ಸ್ಗೆ ₹3,000 ಲಂಚ ನೀಡಬೇಕಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 130 ಸಿಬ್ಬಂದಿಗೆ ಮೂರು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಕೋವಿಡ್ ವೇಳೆ ತಂದೆ–ತಾಯಿ ಕಳೆದುಕೊಂಡು ಅನಾಥರಾದ 26 ಸಾವಿರ ಮಕ್ಕಳಿಗೆ ಏಳು ತಿಂಗಳಿನಿಂದ ₹73 ಕೋಟಿ ಹಣ ಪಾವತಿಸಿಲ್ಲ. ಇವರೆಲ್ಲ ಅನ್ನಕ್ಕೆ ಪರದಾಡುವ ಸ್ಥಿತಿ ಇದೆ’ ಎಂದು ಹೇಳಿದರು.

ಸಾಲದ ಸುಳಿಗೆ ರಾಜ್ಯ: ಬಿಜೆಪಿ ಸರ್ಕಾರ ಇದ್ದಾಗ 2019 ರಲ್ಲಿ ₹48,500 ಕೋಟಿ, 2020 ರಲ್ಲಿ ₹69,000 ಕೋಟಿ, 2021 ರಲ್ಲಿ ₹59,000 ಕೋಟಿ ಹಾಗೂ 2022 ರಲ್ಲಿ ₹36,000 ಕೋಟಿ ಸಾಲ ಮಾಡಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 2023 ರಲ್ಲಿ ₹81,000 ಕೋಟಿ, 2024 ರಲ್ಲಿ ₹92,025 ಕೋಟಿ, 2025 ರಲ್ಲಿ ₹1.16 ಲಕ್ಷ ಕೋಟಿ ಸಾಲ ಮಾಡಿದೆ. ಮೂರು ವರ್ಷಗಳಲ್ಲಿ ಸರ್ಕಾರ ₹2,89,025 ಕೋಟಿ ಸಾಲ ಮಾಡಿದೆ ಎಂದು ಅಶೋಕ ಹೇಳಿದರು.

ಕಳೆದ ಮೂರು ವರ್ಷದಲ್ಲಿ ವಿತ್ತೀಯ ಕೊರತೆ ₹54,660 ಕೋಟಿ ಆಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಹೊಣೆಗಾರಿಕೆ ದಯನೀಯ ಸ್ಥಿತಿಗೆ ಬಂದಿದೆ ಎಂದರು.

ಸಿದ್ದರಾಮಯ್ಯ ‘ಸಾಲದ ರಾಮಯ್ಯ’ ಆಗಿದ್ದಾರೆ. ಹಿಂದೆ ಮ್ಯಾಜಿಕ್ ಮಾಡುತ್ತಿದ್ದವರು ಈಗ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಅಂಕಿ ಅಂಶಗಳನ್ನು ತಮ್ಮದೇ ರೀತಿಯಲ್ಲಿ ತೋರಿಸುತ್ತಿದ್ದಾರೆ
ಆರ್.ಅಶೋಕ ವಿರೋಧ ಪಕ್ಷದ ನಾಯಕ

ಎಸ್ಸಿಎಸ್ಪಿ–ಟಿಎಸ್ಪಿ: ₹53 ಸಾವಿರ ಕೋಟಿ ವರ್ಗಾವಣೆ

ಎಸ್ಸಿಎಸ್ಪಿ– ಟಿಎಸ್ಪಿ ಹಣದಲ್ಲಿ 2026–27 ನೇ ಸಾಲಿನಲ್ಲಿ ಗೃಹಲಕ್ಷ್ಮಿಗೆ ₹8296 ಕೋಟಿ ಶಕ್ತಿಗೆ ₹1537 ಕೋಟಿ ಅನ್ನಭಾಗ್ಯಕ್ಕೆ ₹1612 ಕೋಟಿ ಗೃಹಜ್ಯೋತಿಗೆ ₹2591 ಕೋಟಿ ಯುವನಿಧಿಗೆ ₹1062 ಕೋಟಿ ಸೇರಿ ಒಟ್ಟು ₹14198 ಕೋಟಿ ವರ್ಗಾವಣೆ ಮಾಡಲಾಗಿದೆ. ಇದೇ ರೀತಿ 2023ರಲ್ಲಿ ₹11144 ಕೋಟಿ 2024 ರಲ್ಲಿ ₹14282 ಕೋಟಿ 2025 ರಲ್ಲಿ ₹13433 ಕೋಟಿ ವರ್ಗಾವಣೆ ಮಾಡಿದ್ದು ಒಟ್ಟಾರೆ ₹53059.45 ಕೋಟಿ ಗ್ಯಾರಂಟಿಗೆ ವರ್ಗಾಯಿಸಲಾಗಿದೆ ಎಂದು ಅಶೋಕ ದೂರಿದರು.

ಪ್ರತಿ ಕನ್ನಡಿಗನ ಮೇಲೆ ₹1.12 ಲಕ್ಷ ಸಾಲದ ಹೊರೆ

ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಸಾಲ ಮಾಡಿದ್ದರೂ ನೀರಾವರಿಗೆ ಹೊಸ ಯೋಜನೆ ಸಿಕ್ಕಿಲ್ಲ. ಬ್ರ್ಯಾಂಡ್ ಬೆಂಗಳೂರಿಗೆ ಅನುದಾನ ಸಿಕ್ಕಿಲ್ಲ. ಕಳೆದ ಮೂರು ವರ್ಷಗಳಲ್ಲಿ ₹82000 ಕೋಟಿ ಸಾಲ ಪಡೆಯಲಾಗಿದೆ. ಪ್ರತಿ ತಿಂಗಳಿಗೆ ₹6833 ಕೋಟಿ ದಿನಕ್ಕೆ ₹277 ಕೋಟಿ ಗಂಟೆಗೆ ₹9.5 ಕೋಟಿ ಸಾಲವಾಗುತ್ತದೆ. ಪ್ರತಿ ದಿನ ₹125 ಕೋಟಿ ಗಂಟೆಗೆ ₹ 5.2 ಕೋಟಿ ಬಡ್ಡಿ ಪಾವತಿಸಲಾಗುತ್ತಿದೆ. 2013 ರಲ್ಲಿ ಪ್ರತಿ ಕನ್ನಡಿಗನ ಮೇಲೆ ₹19000 ಸಾಲವಿದ್ದು 2026 ಮಾರ್ಚ್ ವೇಳೆಗೆ ಆ ಮೊತ್ತ ₹112400 ಕ್ಕೆ ಏರಿದೆ ಎಂದು ಅಶೋಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.