ಬೆಂಗಳೂರು: ಇಲ್ಲಿಯವರೆಗೆ ‘ಗ್ಯಾರಂಟಿ’ ಎಂದು ಡೊಳ್ಳು ಬಾರಿಸಿದ್ದ ರಾಜ್ಯ ಸರ್ಕಾರ, ಈಗ ಏಕಾಏಕಿ ಫಲಾನುಭವಿಗಳ ಮರುಪರಿಶೀಲನೆ, ಮರುನೋಂದಣಿ, ವಿಶೇಷ ಅಭಿಯಾನ ಎಂಬ ಹೊಸ ನಾಟಕ ಶುರು ಆರಂಭಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ರಾಜಕೀಯ ಗಿಮಿಕ್ ಮಾತ್ರವೇ ಹೊರತು, ಬಡವರ ಬದುಕಿನ ಬಗ್ಗೆ ಇರುವ ನಿಜವಾದ ಕಾಳಜಿ ಅಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದರು.

ಈ ಕುರಿತು ಅಶೋಕ ಅವರು ಸರ್ಕಾರ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ:

*ಸತ್ತವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವುದು ಸರ್ಕಾರದ ದೈನಂದಿನ ನಿರಂತರ ಆಡಳಿತಾತ್ಮಕ ಪ್ರಕ್ರಿಯೆ. ಅದಕ್ಕಾಗಿ ವಿಶೇಷ ಅಭಿಯಾನ ಅಗತ್ಯವಿದೆಯೇ?

*ಬಡವರು ಮತ್ತೆ ಅರ್ಜಿ ಹಿಡಿದು ಸರತಿ ಸಾಲಿನಲ್ಲಿ ನಿಲ್ಲವಂತೆ ಮಾಡಲು ಹೊರಟಿರುವುದರ ಹಿಂದಿನ ರಹಸ್ಯವೇನು?

* ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ನಿಲ್ಲಿಸಲು ಪೀಠಿಕೆ ಸಿದ್ಧವಾಗುತ್ತಿದೆಯೇ ಅಥವಾ ಸ್ಥಳೀಯ ಸಂಸ್ಥೆ ಮತ್ತು ಜಿಬಿಎ ಚುನಾವಣೆಯವರೆಗೆ ಮಾತ್ರ ಹಣ ಕೊಟ್ಟು ಚುನಾವಣೆ ಮುಗಿದ ನಂತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಕೈತೊಳೆಯುವ ರಹಸ್ಯ ಯೋಜನೆ ಏನಾದರೂ ಇದೆಯಾ?

*ಮರುಪರಿಶೀಲನೆ ಪ್ರಕ್ರಿಯೆ ಮುಗಿಯುವವರೆಗೆ ಯೋಜನೆಗಳ ಹಣವನ್ನು ತಡೆ ಹಿಡಿಯಲಾಗುತ್ತದೆಯೇ? ಲಕ್ಷಾಂತರ ತಾಯಂದಿರಿಗೆ ಬರುತ್ತಿರುವ ಗೃಹಲಕ್ಷ್ಮೀ ಹಣ ನಿಲ್ಲುತ್ತದೆಯೇ? ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಫಲಾನುಭವಿಗಳನ್ನು ಕಡಿತಗೊಳಿಸುವ ಗುಪ್ತ ಕಾರ್ಯಾಚರಣೆ ನಡೆಯುತ್ತಿದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.