ಬೆಂಗಳೂರು: ‘ಮೈಸೂರು ಸಿಲ್ಕ್ಸ್ಗೆ ಸೇರಿದ ಭೂಮಿಯ ಮೇಲೆ ಕಾಂಗ್ರೆಸ್ ಭೂಗಳ್ಳರ ವಕ್ರ ದೃಷ್ಟಿ ಬಿದ್ದಿದೆ. ಕ್ರೀಡಾಂಗಣ ನಿರ್ಮಿಸುವ ಹೆಸರಿನಲ್ಲಿ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.

‘ಎಕ್ಸ್’ ನಲ್ಲಿ ಈ ವಿಷಯ ಪೋಸ್ಟ್ ಮಾಡಿರುವ ಅವರು, ‘ಟಿ. ನರಸೀಪುರದ ಕೆಎಸ್ಐಸಿ ಘಟಕದ ಮುಂದಿನ ಅಭಿವೃದ್ಧಿಗೆ, ಮಾಲಿನ್ಯ ನಿಯಂತ್ರಣ ಘಟಕ ಸ್ಥಾಪನೆಗೆ ಮತ್ತು ಹೆಚ್ಚುವರಿ ಉತ್ಪಾದನೆಗೆ ಐದು ಎಕರೆ ಜಾಗ ಅತ್ಯಗತ್ಯ ಎಂದು ಸ್ವತಃ ವ್ಯವಸ್ಥಾಪಕ ನಿರ್ದೇಶಕರೇ ವರದಿ ನೀಡಿದ್ದಾರೆ. ಆದರೆ, ಸರ್ಕಾರ ಅದನ್ನು ಕಡೆಗಣಿಸಿದೆ’ ಎಂದು ದೂರಿದ್ದಾರೆ.

‘ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಮೈಸೂರು ಸಿಲ್ಕ್ಸ್ ಎಂಬ ನಾಡಿನ ಹೆಮ್ಮೆಯ ಬ್ರ್ಯಾಂಡ್ ಅನ್ನು ಉಳಿಸಿ, ಬೆಳೆಸುವ ಬದಲು, ಅದಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದು ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯ ಪರಮಾವಧಿ’ ಎಂದಿದ್ದಾರೆ.

‘ಮೈಸೂರು ಸಿಲ್ಕ್ಸ್ ಉದ್ಯಮವನ್ನು ನಾಶ ಮಾಡಲು ಹೊರಟಿರುವ ನಿಮ್ಮ ಧೋರಣೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಕೂಡಲೇ ಆದೇಶ ಹಿಂದಕ್ಕೆ ಪಡೆದು ರೇಷ್ಮೆ ಘಟಕದ ಅಸ್ತಿತ್ವವನ್ನು ಉಳಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.