ರಾಯಚೂರು: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಯನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಆದರೆ, ಸರ್ಕಾರಗಳು ಇಂದಿಗೂ ನಾಗರಿಕರಿಗೆ ಸಮಾನತೆ ನೀಡುವಲ್ಲಿ ವಿಫಲವಾಗಿವೆ’ ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಶ್ರೀಪಾದ ಭಟ್ ವಿಷಾದ ವ್ಯಕ್ತಪಡಿಸಿದರು.

ಇಲ್ಲಿಯ ಕನ್ನಡ ಭವನದಲ್ಲಿ ‘ಸಮುದಾಯ ರಾಯಚೂರು ಸಾಂಸ್ಕೃತಿಕ’ ಸಂಘಟನೆ ಹಮ್ಮಿಕೊಂಡಿದ್ದ ‘ರಾಜಕೀಯ ಆರ್ಥಿಕತೆ ಮತ್ತು ಉದ್ಯೋಗ ನೀತಿ’ ಕುರಿತು ಉಪನ್ಯಾಸ ನೀಡಿದರು.

‘ರಾಜಕೀಯ ಪಕ್ಷಗಳು ಬಡವರ ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿವೆ. ರಾಜಕೀಯ ಸ್ಥಾನಮಾನ ನೀಡುತ್ತಿಲ್ಲ. ಅಧಿಕಾರ ಕೆಲವರ ಸ್ವತ್ತಾಗಿದೆ. ರಾಜಕೀಯ ಸಮಾನತೆ ಸಿಗದಿದ್ದರೆ ಆರ್ಥಿಕ, ಸಾಮಾಜಿಕ ಸಮಾನತೆ ಸಿಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸಂಪತ್ತನ್ನು ದೇಶದ ನಾಗರಿಕರಲ್ಲಿ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ದೇಶದ ಸಂಪತ್ತು ಕೆಲವೇ ಉದ್ಯಮಿಗಳ ಕೈಯಲ್ಲಿರುವುದು ದುರದೃಷ್ಟಕರ ಸಂಗತಿ. ಎಲ್ಲರಿಗೂ ಗೌರವಯುತವಾದ ಬದುಕುವ ಹಕ್ಕು, ಉದ್ಯೋಗದ ಹಕ್ಕು, ಸಮಾನ ಕೆಲಸಕ್ಕೆ, ಸಮಾನ ವೇತನ ಹಕ್ಕು ನೀಡಬೇಕಿದೆ. ಆದರೆ, ಸರ್ಕಾರಗಳು ಎಲ್ಲಾ ವಲಯದಲ್ಲಿ ಗುತ್ತಿಗೆ ಪದ್ಧತಿ ಜಾರಿ ಮಾಡಿ ವಂಚಿಸುತ್ತಿವೆ’ ಎಂದು ದೂರಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ,‘ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಡೆಗಣಿಸುತ್ತಿವೆ. ಒಕ್ಕಲುತನ ಈಗ ಲಾಭದಾಯಕವಾಗಿಲ್ಲ ಎಂದು ಅನೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ರೈತರು ಮನೆಗಳಲ್ಲಿ 20-30 ಎತ್ತುಗಳು ಸಾಕುತ್ತಿದ್ದರು. ಈಗ ಒಂದು ಎತ್ತನ್ನೂ ಸಾಕಲಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

‘ಕೃಷಿ ಕ್ಷೇತ್ರವನ್ನು ಬಿಟ್ಟು ರೈತರು ಬೆಂಗಳೂರು, ಹೈದರಾಬಾದ್, ಪುಣೆ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ರೈತರ ಪರ ಕಾಯ್ದೆ ಜಾರಿಗೆ ತಂದು ಕೃಷಿ ಕ್ಷೇತ್ರವನ್ನು ರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ಆರ್.ಇಂದಿರಾ ಮಾತನಾಡಿದರು.

ಚಿಂತಕ ಆರ್.ಕೆ.ಹುಡಗಿ, ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಸಮುದಾಯದ ಅಧ್ಯಕ್ಷ ಪ್ರವೀಣ ಕುಮಾರ ಗುಂಜಳ್ಳಿ, ಗೌರವಾಧ್ಯಕ್ಷ ಶರಣು ಮಾಲಿಪಾಟೀಲ, ವಿ.ಎನ್.ಅಕ್ಕಿ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ಎಸ್.ಮಾರೆಪ್ಪ ವಕೀಲ, ಕೆ.ಜಿ.ವೀರೇಶ ಹಾಗೂ ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-32-744798986

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.