ರಾಯಚೂರು: ‘ಜಗತ್ತಿನಾದ್ಯಂತ ಇಂದು ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ. ಇದರಿಂದ ಹೊರಬರಲು ಸಾಮ್ರಾಜ್ಯಶಾಹಿ ದೇಶಗಳು ತಮ್ಮ ಲಾಭಕ್ಕಾಗಿ ಯುದ್ಧದ ಮೊರೆ ಹೋಗುತ್ತಿವೆ. ಅದರ ಮೂಲಕ ಜನಸಾಮಾನ್ಯರ ಜೀವನವನ್ನು ಕಗ್ಗೊಲೆ ಮಾಡುತ್ತಿವೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಮಾರ್ಕ್ಸ್ವಾದಿ ತತ್ವಶಾಸ್ತ್ರ ಪರಿಹಾರವನ್ನು ನೀಡುತ್ತದೆ' ಎಂದು ಎಸ್ಯುಸಿಐ (ಸಿ) ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ. ಶಶಿಧರ ತಿಳಿಸಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದಿಂದ ಹಮ್ಮಿಕೊಂಡಿದ್ದ ಎಸ್ಯುಸಿಐ ಪಕ್ಷದ 79ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಸಾಂಸ್ಕೃತಿಕವಾಗಿ ನೈತಿಕವಾಗಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಅದು ಬೋಧಿಸುತ್ತದೆ. ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಅವರು ಜಗತ್ತನ್ನು ಬದಲಾಯಿಸುವ ಮೊದಲು ನಿಮ್ಮನ್ನು ಬದಲಾಯಿಸಿಕೊಳ್ಳಿ ಎಂದು ಕರೆ ನೀಡಿದ್ದರು’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರ ಗಿರೀಶ್ ಮಾತನಾಡಿ, ‘1948 ಏಪ್ರಿಲ್ 24ರಂದು ಸ್ವಾತಂತ್ರ್ಯ ಹೋರಾಟದ ರಾಜಿರಹಿತ ಪಂಥದ ಕ್ರಾಂತಿಕಾರಿ ಹೋರಾಟಗಾರ ಶಿವದಾಸ್ ಘೋಷ್ ಅವರು ಭಾರತದ ನೆಲದಲ್ಲಿ ಏಕೈಕ ನೈಜ ಕಮ್ಯುನಿಸ್ಟ್ ಪಕ್ಷವಾಗಿ ಎಸ್ಯುಸಿಐ (ಸಿ) ಅನ್ನು ಸ್ಥಾಪಿಸಿದರು. ಅಂದಿನ ಕಾಲಘಟ್ಟದಲ್ಲಿ ಇದ್ದ ಸಿಪಿಐ ಸರಿಯಾದ ಕಮ್ಯುನಿಸ್ಟ್ ಹೋರಾಟದ ಹಾದಿಯನ್ನು ಅನುಸರಿಸಲು ವಿಫಲವಾಗಿ ಮುಗ್ಗರಿಸಿತು. ನಂತರ ಸಿಪಿಐ, ಸಿಪಿಎಂ ಆಗಿ ವಿಭಜನೆ ಆಯಿತು. ಈಗ ಹಲವಾರು ಗುಂಪುಗಳಾಗಿ ಒಡೆದು ಹೋಗಿದೆ’ ಎಂದರು.

ವೀರೇಶ ಎನ್. ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ರಾಮಣ್ಣ ಎಂ, ಅಣ್ಣಪ್ಪ ಎಸ್. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-32-620102780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.