ಬೆಂಗಳೂರು: ‘ವಿಧಾನಸಭೆಗೆ 2023ರಲ್ಲಿ ನಡೆದಿದ್ದ ಚುನಾವಣೆ ವೇಳೆ ಮಾನ್ಯವಾಗಿದ್ದ ಅಂಚೆ ಮತಪತ್ರಗಳು ಈಗ ದಿಢೀರ್ ಅಮಾನ್ಯವಾಗಿರುವುದರ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ. 201 ಮತಗಳ ಅಂತರದಿಂದ ಗೆಲುವು ಕಂಡಿದ್ದ ನನಗೇ ಇಂತಹ ಅನ್ಯಾಯವಾದರೆ, ಒಂದು ಮತಗಳ ಅಂತರದಿಂದ ಗೆದ್ದವರ ಸ್ಥಿತಿ ಏನು? ಅಂಚೆ ಮತಪತ್ರ ತಿದ್ದಿರುವ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಟಿ.ಡಿ.ರಾಜೇಗೌಡ ಒತ್ತಾಯಿಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿಯನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರ ಅವರು ಜತೆ ಮಾತನಾಡಿದರು.

‘ನನಗೆ ಬಿದ್ದಿದ್ದ ಅಂಚೆ ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಮೋಸದಿಂದ ಸೋಲಿಸುವ ಕೆಲಸ ಮಾಡಿದ್ದಾರೆ. ಹೈಕೋರ್ಟ್ ಆದೇಶದ ಮೇಲೆ ಮೇಲ್ಮನವಿ ಹೋಗಬಹುದಿತ್ತು. ಆದರೆ, ಅಂಚೆ ಮತಪತ್ರಗಳನ್ನು ತಿದ್ದಿರುವ ಸುಳಿವು, ಅನುಮಾನ ಇರಲಿಲ್ಲ. ಮರುಎಣಿಕೆ ಮೇಲೆ ನಂಬಿಕೆ ಇತ್ತು. ಅಮಾನ್ಯವಾಗಿರುವ ಎಲ್ಲ ಅಂಚೆ ಮತಪತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಕೆಲವರು ಈ ರೀತಿಯ ಕೃತ್ಯ ಮಾಡಿದ್ದಾರೆ. ಕೆಲವು ಅಧಿಕಾರಿಗಳು, ಪಕ್ಷದವರು ಕೆಲವರು ಇರಬಹುದು ಎನ್ನುವ ಅನುಮಾನ ಇದೆ. ಇದು ಸಂವಿಧಾನ ಬಾಹಿರ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ’ ಎಂದರು.

‘ಹೈಕೋರ್ಟ್ 279 ಅಮಾನ್ಯ ಮತಗಳನ್ನು ಮರು ಎಣಿಕೆ ಮಾಡಲು ಹೇಳಿತ್ತು. ಮರು ಎಣಿಕೆ ವೇಳೆ ಇಡೀ ಅಂಚೆ ಮತದ ಕಟ್ಟು ಅಮಾನ್ಯವಾಗಿದೆ. ಈ ಕುರಿತು ನ್ಯಾಯಯುತ ತನಿಖೆ ಆಗಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಭಾರತ ಚುನಾವಣಾ ಆಯೋಗಕ್ಕೆ ಮನವಿಯನ್ನು ಕಳುಹಿಸುವುದಾಗಿ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ಯಾವ ಪಕ್ಷದವರಿಗೂ ಈ ರೀತಿಯ ಅನ್ಯಾಯ ಆಗಬಾರದು’ ಎಂದರು.

- ‘ಮತ ಅಮಾನ್ಯ: ವ್ಯವಸ್ಥಿತ ಸಂಚು’

‘ನನಗೆ ಬಂದಿರುವ ಸಿಂಧು ಮತಗಳಿಗೆ ಪೆನ್ನಿಂದ ಗುರುತು ಮಾಡಿ ಅಮಾನ್ಯಗೊಳಿಸಲಾಗಿದೆ. ಇದರ ಹಿಂದೆ ವ್ಯವಸ್ಥಿತವಾಗಿ ಸಂಚು ನಡೆದಿದೆ’ ಎಂದು ರಾಜೇಗೌಡ ದೂರಿದರು. ‘2023ರ ಚುನಾವಣೆ ಮತ ಎಣಿಕೆಯ ವೇಳೆ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್ಗಳು ಇದ್ದರು. ಪಾರದರ್ಶಕವಾಗಿ ಮತ ಎಣಿಕೆ ಆಗಿತ್ತು. ಮತ ಎಣಿಕೆ ಬಳಿಕ ಫಲಿತಾಂಶ ಘೋಷಣೆ ಮಾಡಿದ್ದರು. ಮಾನ್ಯ ಯಾವುದು? ಅಮಾನ್ಯ ಯಾವುದು? ಎಂದು ಎಲ್ಲರಿಗೂ ತೋರಿಸಿದ್ದರು. ಯಾರಿಗೆ ಎಷ್ಟು ಮತ ಬಿದ್ದಿದೆ ಎಂಬ ಲೆಕ್ಕವುಳ್ಳ ದಾಖಲೆಗೆ ಎಲ್ಲರೂ ಸಹಿ ಹಾಕಿದ್ದರು. ಆಮೇಲೆ ನನ್ನ ವಿರುದ್ಧ ದೂರು ಸಲ್ಲಿಸಿ ಹಲವು ಆರೋಪ ಮಾಡಿದರು. ಈ ಕಾರಣದಿಂದ ಮರು ಎಣಿಕೆಗೆ ಹೈಕೋರ್ಟ್ ಆದೇಶ ಮಾಡಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.