ರಾಮದುರ್ಗ: ಸಮಾಜದಲ್ಲಿ ಜಾತಿ ಪದ್ಧತಿ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜನಾಂಗದವರಿಗೆ ಬಾಡಿಗೆ ಮನೆ ಸಿಗದೇ ಇರುವುದಕ್ಕೆ ಇದು ಸಾಕ್ಷಿ ಎಂದು ಸಿ.ಎಸ್. ಬೆಂಬಳಗಿ ಕಾಲೇಜಿನ ಇಂಗ್ಲೀಷ ವಿಭಾಗದ ಮುಖ್ಯಸ್ಥ ಸಿದ್ಲಿಂಗಪ್ಪ ರಂಗಪ್ಪಗೋಳ ವಿಷಾದ ವ್ಯಕ್ತ ಪಡಿಸಿದರು.

ಇಲ್ಲಿನ ಗುರುಭವನದಲ್ಲಿ ತಾಲ್ಲೂಕು ಆಡಳಿತ ಮಂಗಳವಾರ ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಅಂಬೇಡ್ಕರ್ ಅವರು ಎದುರಿಸಿದ ಜಾತಿ ಪದ್ಧತಿ, ಇಂದಿನ ದಿನಗಳಲ್ಲಿಯೂ ಜೀವಂತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರರು ಕೇವಲ ಒಂದು ಜಾತಿಯ ಜನರಿಗಾಗಿ ಸಂವಿಧಾನ ರಚನೆ ಮಾಡಲಿಲ್ಲ. ಎಲ್ಲ ಜನಾಂಗವರ ಏಳಿಗೆ ಮುಂದಿಟ್ಟುಕೊಂಡು ಸಂವಿಧಾನ ರಚಿಸಿದ್ದರು. ಎಲ್ಲ ಸಮಾಜಗಳ ಕಣ್ಮಣಿಯಾದರು ಎಂದು ಹೇಳಿದರು.

ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಗೆ ಉಳಿದ ಜನಾಂಗದವರು ಗೈರು ಉಳಿಯುವುದು ಸಾಮಾನ್ಯ. ಕಳೆದ 15 ದಿನಗಳಿಂದ ಜನರನ್ನು ಸೇರಿಸಲು ತಾಲ್ಲೂಕು ಆಡಳಿತವೇ ಪ್ರಯತ್ನ ಪಟ್ಟರೂ ಅಂಬೇಡ್ಕರ್ ಜಯಂತಿಗೆ ಜನರನ್ನು ಸೇರಿಸಲು ನಾಯಕರು ವಿಫಲರಾಗಿರುವುದು ನೋವುಂಟು ಮಾಡಿದೆ ಎಂದು ವಿಷಾದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಡಿಎಸ್ಪಿ ಚಿದಂಬರ ಮಡಿವಾಳರ, ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹನಮಂತ ವಕ್ಕುಂದ ವೇದಿಕೆ ಮೇಲಿದ್ದರು.

ರಾಮದುರ್ಗ ಪಟ್ಟಣದ ಗಡದಗಲ್ಲಿ, ಗಾಂಧೀ ನಗರ ಮತ್ತು ಅಂಬೇಡ್ಕರ್ ನಗರದ ಪರಿಶಿಷ್ಟರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸರಳವಾಗಿ ಜಯಂತಿ ಆಚರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-21-165089289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.