ಹೆಸರು:ರಾಮಲಿಂಗಾರೆಡ್ಡಿ

ವಿದ್ಯಾರ್ಹತೆ: ಬಿಎಸ್ಸಿ

ವಯಸ್ಸು: 73 ವರ್ಷ

ಜಾತಿ: ರೆಡ್ಡಿ

ಕ್ಷೇತ್ರ: ಬಿಟಿಎಂ ಲೇಔಟ್( ಬೆಂಗಳೂರು), ಹಿಂದೆ ಜಯನಗರ

ಎಷ್ಟನೇ ಬಾರಿ ಶಾಸಕ: 8ನೇ ಬಾರಿ ಶಾಸಕ

ಹಿಂದೆ ನಿರ್ವಹಿಸಿದ ಖಾತೆ: ಗೃಹ, ಸಾರಿಗೆ, ಮುಜರಾಯಿ, ಪ್ರಾಥಮಿಕ ಶಿಕ್ಷಣ

ಆಸ್ತಿ: ₹110 ಕೋಟಿ

ಹಿರಿಯ ನಾಯಕ ರಾಮಲಿಂಗಾರೆಡ್ಡಿಗೆ ಮತ್ತೆ ಮಣೆ

ಬೆಂಗಳೂರಿನಲ್ಲಿಯೇ ಐದು ದಶಕದಿಂದಲೂ ರಾಜಕೀಯದಲ್ಲಿರುವ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ನ ಹಿರಿಯ ನಾಯಕ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಎಲ್ಲಾ ಸಂಪುಟಗಳಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

1983ರಲ್ಲಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ರಾಮಲಿಂಗಾರೆಡ್ಡಿ ಅವರು 1989ರಲ್ಲಿ ಜಯನಗರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. ಜಯನಗರದಿಂದ ನಾಲ್ಕು ಬಾರಿ ಆಯ್ಕೆಯಾದ ಅವರು 2008ರಲ್ಲಿ ರಚನೆಯಾದ ಬಿಟಿಎಂ ಲೇಔಟ್ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ.

ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಹಿರಿಮೆ ಅವರದ್ದು. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರಭಾವ ಸಚಿವರಾಗಿದ್ದವರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.

ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಜಯನಗರ ಕ್ಷೇತ್ರದ ಶಾಸಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.