ಬೆಂಗಳೂರು: ಬಿಡದಿ ಮತ್ತು ಕಂಚಗಾನಹಳ್ಳಿಯಲ್ಲಿ 9,600 ಎಕರೆ ಜಾಗವನ್ನು ಲೂಟಿ ಮಾಡಲು ಸರ್ಕಾರ ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವೆಂದರೆ ಕಾಂಚಾಣದ ಸರ್ಕಾರ ಎಂದರು.

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಈ ಪ್ರದೇಶದಲ್ಲಿ ತೆಂಗು, ಅಡಿಕೆ, ರೇಷ್ಮೆ ಬೆಳೆಯಲಾಗುತ್ತಿದೆ. ಖಾಸಗಿ, ಸರ್ಕಾರಿ ಸೇರಿದಂತೆ ಸುಮಾರು 7 ಲಕ್ಷ ಫ್ಲ್ಯಾಟ್ಗಳು ಇನ್ನೂ ಖಾಲಿ ಇವೆ. ಈ ಪೈಕಿ 3,000 ಎಕರೆ ಸರ್ಕಾರಿ ಜಮೀನಾಗಿರುವುದರಿಂದ ಆ ಹಣವನ್ನು ಲೂಟಿ ಮಾಡಲು ಯೋಜನೆ ರೂಪಿಸಲಾಗಿದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆ ಸ್ಥಗಿತಗೊಳಿಸಿದ್ದರು. ಈಗ ಅದನ್ನೇ ಜಾರಿ ಮಾಡಲಾಗಿದೆ. ಕೃಷಿ ಜಮೀನನ್ನು ವಸತಿಗೆ ಬಳಸಿದರೆ ಆಹಾರ ಕೊರತೆ ಆಗಲಿದೆ ಎಂದು ಹೇಳಿದರು.

ಜಿಬಿಎಗೆ ಕಸ ಮಾಫಿಯಾದಿಂದ ವಾರ್ಷಿಕ ₹700 ಕೋಟಿ ಹೊರೆ ಯಾಗಲಿದೆ. ಟೆಂಡರ್ ಮೊತ್ತ ಏರಿಕೆ ಯಿಂದಾಗಿ ಜನರಿಗೆ ಹೊರೆಯಾಗಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮೊದಲು ಕಸ ತೆಗೆಯುವ ಗ್ಯಾರಂಟಿ ನೀಡಿದರೆ ಸಾಕು ಎಂದು ಅವರು ಕುಟುಕಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-14-1426534567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.