ರಾಮನಗರ: ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಸಯ್ಯದ್ ಜಿಯಾವುಲ್ಲಾ (78) ಅವರು ಮಂಗಳವಾರ ನಿಧನರಾದರು.

ಅವರಿಗೆ ಪತ್ನಿ, ನಗರಸಭೆ ಸದಸ್ಯ ಸಯ್ಯದ್ ಅಕ್ಲಿಂ ಪಾಷ ಸೇರಿದಂತೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ನಗರದ ಎಪಿಎಂಸಿ ಬಳಿ ಇರುವ ಖಬರಸ್ತಾನ್ನಲ್ಲಿ ಅಂತ್ಯಕ್ರಿಯೆ ನೆರವೇರಿತು.

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಜಿಯಾವುಲ್ಲಾ ಅವರು, ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ರಾಮನಗರವು ಪುರಸಭೆಯಾಗಿದ್ದಾಗ ಅಧ್ಯಕ್ಷರಾಗಿದ್ದ ಅವರು, ನಗರದಲ್ಲಿ ಸುಸಜ್ಜಿತ ಸಾರ್ವಜನಿಕ ಸಭಾಂಗಣ ನಿರ್ಮಾಣಕ್ಕೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ರಸಸಂಜೆ ಕಾರ್ಯಕ್ರಮ ಆಯೋಜಿಸಿ, ಅದಕ್ಕೆ ನಟ ರಾಜಕುಮಾರ್ ಸೇರಿದಂತೆ ಅವರ ಇಡೀ ಕುಟುಂಬವನ್ನು ಕರೆಯಿಸಿದ್ದರು. ಕಾರ್ಯಕ್ರಮದ ಟಿಕೆಟ್ ಹಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

ಸ್ಥಳೀಯ ಆಡಳಿತ ಸಂಸ್ಥೆಗೆ ತನ್ನದೇ ಆದಾಯ ಮೂಲ ಸೃಷ್ಟಿಸುವ ದೂರದೃಷ್ಟಿಯಿಂದ ನಗರದ ಮುಖ್ಯರಸ್ತೆಯ ಅರ್ಕಾವತಿ ನದಿ ಸೇತುವೆ ಪಕ್ಕ ಕೇಂದ್ರ ಸರ್ಕಾರದ ಐಡಿಎಸ್ಎಂಟಿ ಅನುದಾನದಲ್ಲಿ ವಾಣಿಜ್ಯ ಸಂಕೀರ್ಣ (ಡಾ. ರಾಜಕುಮಾರ್ ಕಾಂಪ್ಲೆಕ್ಸ್) ನಿರ್ಮಾಣ ಮಾಡಿದ್ದರು. ಇವರ ಅವಧಿಯಲ್ಲಿನ ಜನಪರ ಆಡಳಿತಕ್ಕಾಗಿ ರಾಜ್ಯ ಸರ್ಕಾರ ರಾಮನಗರಕ್ಕೆ ‘ಉತ್ತಮ ಪುರಸಭೆ’ ಎಂಬ ಪ್ರಶಸ್ತಿ ನೀಡಿತ್ತು. ಅದರೊಂದಿಗೆ ಬಂದ ಬಹುಮಾನದ ಹಣದಲ್ಲಿ ಈಗಿನ ನಗರಸಭೆ ಕಚೇರಿ ಪಕ್ಕ ಪ್ರಶಸ್ತಿ ಭವನ ನಿರ್ಮಾಣಕ್ಕೆ ಜಿಯಾವುಲ್ಲಾ ಕಾರಣಕರ್ತರಾಗಿದ್ದರು.

ಕೆಎಸ್ಐಸಿ ಮಾಜಿ ಅಧ್ಯಕ್ಷರಾಗಿದ್ದ ಅವರು, ಮೈಸೂರು ರೇಷ್ಮೆ ಸೀರೆಗಳ ಪ್ರಚಾರಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಜೀವನಕ್ಕಾಗಿ ಸ್ವತಃ ರೇಷ್ಮೆ ರೀಲರ್ ವೃತ್ತಿ ಮಾಡುತ್ತಿದ್ದ ಜಿಯಾವುಲ್ಲಾ ಅವರು, ಬಹುಶಃ ಜಿಲ್ಲೆಯಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ರೇಷ್ಮೆ ರೀಲಿಂಗ್ ಯಂತ್ರವನ್ನು ಅಳವಡಿಸಿಕೊಂಡಿದ್ದರು. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರ ನಿಕಟವರ್ತಿಯಾಗಿದ್ದ ಜಿಯಾವುಲ್ಲಾ ಅವರು, ಸುಮಾರು 400 ಮನೆಗಳ ಬೀಡಿ ಕಾರ್ಮಿಕರ ಕಾಲೊನಿ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು.

ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಡಾ. ಎಚ್.ಡಿ. ರಂಗನಾಥ್, ವೀರೇಂದ್ರ ಪಪ್ಪಿ, ಮಾಜಿ ಸಂಸದ ಡಿ.ಕೆ. ಸುರೇಶ್, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಪಕ್ಷದ ನಾಯಕರು ಹಾಗೂ ಮುಖಂಡರು ಭೇಟಿ ನೀಡಿ ಜಿಯಾವುಲ್ಲಾ ಅವರ ಅಂತಿಮ ದರ್ಶನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-14-1857971290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.