ಓದೇಶ ಸಕಲೇಶಪುರ

ರಾಮನಗರ: ‘ನನಗೆ ಒಂದೇ ಒಂದು ಆಸೆ. ನಮ್ಮಣ್ಣ ಮುಖ್ಯಮಂತ್ರಿ ಆಗಬೇಕು...’

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹೋದರ, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸಂದರ್ಶನವೊಂದರಲ್ಲಿ ಭಾವುಕರಾಗಿ ನುಡಿದಿರುವ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶಿವಕುಮಾರ್ ‘ಕನಕಪುರದ ಬಂಡೆ’ಯಾದರೆ, ಸುರೇಶ್ ‘ಹೆಬ್ಬಂಡೆ’ ಎಂದು ಬೆಂಬಲಿಗರು ಹೇಳುತ್ತಾರೆ. ಅಣ್ಣನ ರಾಜಕೀಯದ ಪ್ರತಿ ಹೆಜ್ಜೆಗೆ ಬೆಂಬಲವಾಗಿ ನಿಲ್ಲುವ ಸುರೇಶ್, ಸಹೋದರನ ರಾಜಕೀಯ ಏಳಿಗೆಯ ಹಿಂದಿರುವ ದೊಡ್ಡ ಶಕ್ತಿ.

ಕೃಷಿ, ಬಿಸಿನೆಸ್ ಹಾಗೂ ಇತರ ವ್ಯವಹಾರ ನೋಡಿಕೊಂಡಿದ್ದ ಸುರೇಶ್, ಅಣ್ಣನ ಪ್ರತಿ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಗೆಲುವಿನ ದಡ ಸೇರಿಸುತ್ತಿದ್ದ ತಳಮಟ್ಟದ ಸಂಘಟಕ. ಹಳ್ಳಿ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ನಿಕಟ ಸಂಪರ್ಕ ಸುರೇಶ್ ಸಂಘಟನಾ ಚತುರತೆಗೆ ಸಾಕ್ಷಿ.

‘ರಾಜಕಾರಣ ಸೇರಿದಂತೆ ಅಧಿಕಾರಕ್ಕಾಗಿ ಸಹೋದರರು ಕಿತ್ತಾಡಿಕೊಂಡಿರುವ ಅನೇಕ ನಿದರ್ಶನಗಳಿವೆ. ಆದರೆ ರಾಜ್ಯ ರಾಜಕಾರಣದಲ್ಲಿ ‘ಅಪೂರ್ವ ಸಹೋದರರು’ ಎಂದೇ ಕರೆಯಲಾಗುವ ಡಿ.ಕೆ. ಸಹೋದರರ ನಡುವೆ ಅಂತಹ ಯಾವುದೇ ಸಣ್ಣ ವೈಮನಸ್ಸು ಕೂಡ ಇಲ್ಲ. ಅಷ್ಟೊಂದು ಅವಿನಾಭಾವ ಸಂಬಂಧ ಅವರದ್ದು’ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಪ್ರತಿ ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ವಿಶೇಷ. ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು ಬಿಟ್ಟರೆ, ಉಳಿದೆಡೆ ಸದಾ ಜೊತೆಗಿರುತ್ತಾರೆ. ಜಿಲ್ಲೆಯ ಆಡಳಿತದಲ್ಲೂ ಅವರದ್ದು ಪ್ರಮುಖ ಪಾತ್ರ’ ಎಂದು ಹೇಳಿದರು.

‘ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಶಿವಕುಮಾರ್ ತಿಹಾರ್ ಜೈಲು ಸೇರಿದ್ದಾಗ ಅಣ್ಣನಿಗೆ ಆತ್ಮವಿಶ್ವಾಸ ತುಂಬುತ್ತಾ 48 ದಿನ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ಸುರೇಶ್ ಹಾಕಿದ ಶ್ರಮ ದೊಡ್ಡದು’ ಎಂದರು.

ರಾಜಕಾರಣಕ್ಕೆ ಕರೆತಂದ ಅಣ್ಣ:2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆಗ ಎದುರಾದ ಉಪ ಚುನಾವಣೆಗೆ ಶಿವಕುಮಾರ್ ಅವರು ಸುರೇಶ್ ಅವರನ್ನು ನಿಲ್ಲಿಸಿದರು. ಇದರೊಂದಿಗೆ ಸುರೇಶ್ ರಾಜಕಾರಣ ಪ್ರವೇಶಿಸಿದರು.

ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಸುರೇಶ್ 1.37 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರು. ಅದುವರೆಗೆ ಕನಕಪುರಕ್ಕೆ ಸೀಮಿತವಾಗಿದ್ದ ಸುರೇಶ್, ಜಿಲ್ಲೆ ಜೊತೆಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಕ್ಷದೊಳಗೆ ಹಿಡಿತ ಸಾಧಿಸಿದರು. ಸ್ಥಳೀಯ ಆಡಳಿತ ಸಂಸ್ಥೆಗಳಿಂದಿಡಿದು ಸಹಕಾರ ಕ್ಷೇತ್ರದ ಚುನಾವಣೆಗಳಲ್ಲೂ ಸುರೇಶ್ ತಮ್ಮ ಬೆಂಬಲಿಗರಿಗೆ ಮಣೆ ಹಾಕುತ್ತಾ ಪಕ್ಷ ಸಂಘಟಿಸುತ್ತಿದ್ದಾರೆ. ಕಾರ್ಯಕರ್ತರ ಮನೆ ಕಾರ್ಯಕ್ರಮಗಳಿಗೆ ತಪ್ಪದೆ ಭೇಟಿ ನೀಡುವುದು ಅವರ ವಿಶೇಷತೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-18-1234838059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.