ರಾಮನಗರ: ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಮಾರ್ಗಮಧ್ಯದ ವಡೇರಹಳ್ಳಿ ಬಳಿ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಪ್ರಕರಣದ ಸಂಬಂಧ ಅಂದು ಸ್ಥಳದಲ್ಲಿ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪಿಎಸ್ಐ ಸೇರಿದಂತೆ ಏಳು ಪೊಲೀಸರನ್ನು ಕರ್ತವ್ಯಲೋಪದ ಮೇಲೆ ಅಮಾನತು ಮಾಡಲಾಗಿದೆ.

ಸಾತನೂರು ಠಾಣೆ ಪಿಎಸ್ಐ ದುರ್ಗೆಗೌಡ, ಕಗ್ಗಲೀಪುರ ಠಾಣೆ ಎಎಸ್ಐ ಶಂಕರ, ರಾಮನಗರ ಟೌನ್ ಠಾಣೆ ಹೆಡ್ ಕಾನ್ಸ್ಟೆಬಲ್ಗಳಾದ ಡಿ.ವಿ.ಪ್ರಕಾಶ್, ಶರತ್ ಕುಮಾರ್, ರವಿ ಟಿ., ಗೋವಿಂದರಾಜು ಹಾಗೂ ಹಾಸನದ ಎಎಸ್ಸಿ ತಂಡದ ಸುರೇಶ್ ಬಾಬು ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ಅಮಾನತುಗೊಳಿಸಿದ್ದಾರೆ.

ಪ್ರಧಾನಿ ಮೋದಿ ಭೇಟಿ ವೇಳೆ ಮೇ 10ರಂದು ಅವರ ವಾಹನ ಸಾಗುವ ವಡೇರಹಳ್ಳಿ ಬಳಿ ಚೆಕ್ ಪೋಸ್ಟ್ನ ರಸ್ತೆ ಬದಿ ಬಾಕ್ಸ್ನಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಈ ಘಟನೆಯು ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಭದ್ರತೆ ಮತ್ತು ಬಂದೋಬಸ್ತ್ ಕುರಿತು ಚರ್ಚೆ ಹುಟ್ಟು ಹಾಕಿತ್ತು. ಬೆಂಗಳೂರು ನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರ ಜಂಟಿ ತನಿಖೆ ಜತೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪ್ರಕರಣದ ತನಿಖೆ ಕೈಗೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-1725834727

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.