ರಾಮನಗರ: ‘ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಅವರ ಕುರಿತು ಜೆಡಿಎಸ್ ಮುಖಂಡರು ಹಗುರ ಮಾತು ಗಳನ್ನಾಡುವುದನ್ನು ನಿಲ್ಲಸಬೇಕು. ಜೆಡಿಎಸ್ನಲ್ಲಿದ್ದಾಗ ಪಕ್ಷಕ್ಕಾಗಿ ಮಾಡಿರುವ ತಮ್ಮ ತನು, ಮನ ಹಾಗೂ ಧನವನ್ನು ತ್ಯಾಗ ಮಾಡಿರುವ ಅವರು, ಯಾರದ್ದೊ ಮರ್ಜಿಯಲ್ಲಿ ಬೆಳೆದವರಲ್ಲ’ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್ ಹೇಳಿದರು.

‘ಬಿಡದಿ ಟೌನ್ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ರಾಜು ಅವರ ವಿರುದ್ದ ನರಸಿಂಹಮೂರ್ತಿ ಸೇರಿದಂತೆ ಕೆಲವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೋತಿದ್ದ ರಾಜು ಅವರಿಗೆ ಕುಮಾರಸ್ವಾಮಿ ಅವರೇ ಕರೆದು ಟಿಕೆಟ್ ಕೊಟ್ಟಿದ್ದರೇ ಹೊರತು, ರಾಜು ಅವರು ಕೇಳಿರಲಿಲ್ಲ’ ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜು ಅವರು 1987ರಲ್ಲಿ ಕೈಲಾಂಚ ಮಂಡಲ ಪಂಚಾಯಿತಿ ಪ್ರಧಾನರಾಗಿ ಸೇವೆ ಸಲ್ಲಿಸಿದ್ದಾರೆ. 1995ರಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, 1997ರಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪಕ್ಷ ಕಟ್ಟಲು ಮನೆ ಒಡವೆ ಅಡಮಾನ ಇಟ್ಟಿದ್ದಾರೆ. ಬಡ್ಡಿಗೆ ಸಾಲ ತಂದು ಪಕ್ಷ ಕಟ್ಟಿದ್ದರು. ಅದನ್ನು ನಾವು ಕಣ್ಣಾರೆ ಕಂಡಿದ್ದೇವೆ’ ಎಂದು ಹೇಳಿದರು.

‘1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ಎದುರು ಕುಮಾರಸ್ವಾಮಿ ಅವರು ಹೀನಾಯವಾಗಿ ಸೋತಾಗ, ಅವರನ್ನು ರಾಮನಗರಕ್ಕೆ ಕರೆತಂದವರು ರಾಜು. ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಬೇಕೆಂದು ನಿರ್ಧಾರ ತೆಗೆದುಕೊಂಡವರಲ್ಲಿ ಕೆ. ರಾಜು ಪ್ರಮುಖರು’ ಎಂದರು.

ಕಾಂಗ್ರೆಸ್ ಮುಖಂಡ ಎಸ್. ಮಹೇಶ್ ಮಾತನಾಡಿ, ‘ಆದರೆ, ಇದೇ ಕುಮಾರಸ್ವಾಮಿ ಅವರು ರಾಜು ಅವರನ್ನು ಸೋಲಿಸಿ ಎಂದು ಹೇಳಿರುವುದಕ್ಕೆ ನಾವೆಲ್ಲರೂ ಸಾಕ್ಷಿ ಇದ್ದೇವೆ. ಚನ್ನೇನಹಳ್ಳಿ ನಾಗಣ್ಣ, ಅಕ್ಕೂರು ಸುಮಿತ್ರಮ್ಮ, ಅಂಜನಾಪುರ ಭದ್ರಯ್ಯ, ಹುಣಸನಹಳ್ಳಿ ಲಕ್ಷ್ಮೀಕಾಂತ್, ರಾಮನಗರದ ಶೇಷಾದ್ರಿ, ಶಾಸಕ ಎಚ್.ಸಿ. ಬಾಲಕೃಷ್ಣ ಸಹೋದರ ಅಶೋಕ್ ತಮ್ಮಾಜಿ ಅವರನ್ನು ಸೋಲಿಸಿ ಎಂದು ನಮ್ಮೆದುರಿಗೇ ಹೇಳಿದ್ದರು. ಈ ಕುರಿತು, ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರಮಾಣ ಮಾಡಲು ನಾವು ಸಿದ್ದ’ ಎಂದರು.

ಸುದ್ಧಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್, ಭದ್ರಯ್ಯ, ಜಗದೀಶ್, ಕೆಂಪೇಗೌಡನದೊಡ್ಡಿ ಮಂಚೇಗೌಡ, ದೇವರದೊಡ್ಡಿ ಚಂದ್ರಗಿರಿ, ಆಲೇಮರದದೊಡ್ಡಿ ಕರಿಯಪ್ಪ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-14-1694763934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.