ರಾಮನಗರ: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹೆಸರು ಅಧಿಕೃತ ಘೋಷಣೆ ಮತ್ತು ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ, ಇತ್ತ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವರು ಸಚಿವ ಸ್ಥಾನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆ ಸಾಲಿನಲ್ಲಿ ಶಿವಕುಮಾರ್ ಆಪ್ತ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಕೂಡ ಒಬ್ಬರು.

ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಮೂರೂ ಪಕ್ಷಗಳ ಅಂಗಳದಲ್ಲಿ ಬಾಲಕೃಷ್ಣ ರಾಜಕಾರಣ ಮಾಡಿರುವವರು. ಹ್ಯಾಟ್ರಿಕ್ ಗೆಲುವಿನೊಂದಿಗೆ 5 ಸಲ ಕ್ಷೇತ್ರವನ್ನು ಪ್ರತಿನಿಧಿಸಿರುವ ಅನುಭವಿ ಶಾಸಕ. 1994ರಲ್ಲೇ ವಿಧಾನಸೌಧ ಪ್ರವೇಶಿಸಿದರೂ ಇದುವರೆಗೆ ಸಚಿವನಾಗುವ ಅದೃಷ್ಟ ಮಾತ್ರ ಕೂಡಿ ಬಂದಿಲ್ಲ.

ಒಮ್ಮೆ ಬಿಜೆಪಿ ಹಾಗೂ ಜೆಡಿಎಸ್ನಿಂದ ಮೂರು ಸಲ ಗೆದ್ದಿದ್ದ ಬಾಲಕೃಷ್ಣ, 2018ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿಯಾಗಿ ಸೋತರು. ಇದು ಅವರ ರಾಜಕೀಯ ಜೀವನದ ಎರಡನೇ ಸೋಲಾಗಿತ್ತು.

ಡಿಕೆಶಿ ಪರ ದನಿ:

ಶಿವಕುಮಾರ್ ಆಪ್ತ ವಲಯದಲ್ಲಿರುವ ಬಾಲಕೃಷ್ಣ 2023ರಲ್ಲಿ ಮತ್ತೆ ಕಣಕ್ಕಿಳಿದು ಗೆದ್ದರು. ಆಗ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆದಾಗ ಡಿಕೆಶಿ ಬೆನ್ನಿಗಿದ್ದರು. ಅಂದಿನಿಂದಲೂ ತಮ್ಮ ನಾಯಕನಿಗೆ ನಿಷ್ಠೆ ತೋರುತ್ತಾ ಬಂದಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ, ‘2028ರಲ್ಲೂ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ನಾಯಕತ್ವದ ವಿಷಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡುತ್ತಾ ಬಂದಿದ್ದಾರೆ. ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಪಾಳದ ಟೀಕೆಗಳಿಗೂ ತಿರುಗೇಟು ನೀಡುತ್ತಾ ಬಂದವರು.

ಪ್ರಬಲ ಆಕಾಂಕ್ಷಿ: ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಷಯ ಚರ್ಚೆ ಯಾದಾ ಗಲೆಲ್ಲಾ ಬಾಲಕೃಷ್ಣ ಅವರು, ತಮ್ಮ ಆಕಾಂಕ್ಷೆ ತೋಡಿಕೊಳ್ಳುತ್ತಾ ಬಂದಿದ್ದಾರೆ. ಮಾಗಡಿಯಲ್ಲಿ ನಡೆದಿದ್ದ ಮುಖ್ಯ ಮಂತ್ರಿ ಸಿದ್ದರಾ ಮಯ್ಯ ಕಾರ್ಯ ಕ್ರಮದಲ್ಲಿ ಬಾಲಕೃಷ್ಣಗೆ ಸಚಿವ ಸ್ಥಾನ ನಿಡುವ ಕುರಿತು ಪ್ರಸ್ತಾಪಿಸಿದ್ದರು. ಆಗ ಸಿದ್ದರಾಮಯ್ಯ, ‘ಸಚಿವರಾಗುವ ಎಲ್ಲಾ ಅರ್ಹತೆಗಳು ಬಾಲಕೃಷ್ಣ ಅವರಿಗಿದೆ. ಆದರೆ, 32 ಮಂದಿಗಷ್ಟೇ ಸಚಿವರಾಗುವ ಅವಕಾಶವಿದೆ’ ಎಂದಿದ್ದರು.

ಸಚಿವ ಸ್ಥಾನದ ಕುರಿತು ಬಾಲಕೃಷ್ಣ, ‘ನಾನೇನು ಸನ್ಯಾಸಿಯಲ್ಲ. ಐದು ಸಲ ಗೆದ್ದಿದ್ದೇನೆ. ಆದರೆ, ಮೂರು ಪಕ್ಷದಲ್ಲಿ ಗೆದ್ದಿರುವುದೇ ದುರಂತ. 3 ಸಲ ಜೆಡಿಎಸ್, ಉಳಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ತಲಾ ಒಂದೊಂದು ಸಲ ಗೆದ್ದಿರುವೆ. ಒಂದೇ ಪಕ್ಷದಲ್ಲಾಗಿದ್ದರೆ ಇಷ್ಟೊತ್ತಿಗೆ ಸಚಿವನಾಗಿರುತ್ತಿದ್ದೆ’ ಎಂದು ಮಾಧ್ಯಮದವರ ಬಳಿ ಬೇಸರ ತೋಡಿಕೊಂಡಿದ್ದುಂಟು.

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಬಾಲಕೃಷ್ಣ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆ ಮೂಲಕ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರನ್ನು ಸಮಾಧಾನಪಡಿಸುವ ಕೆಲಸವನ್ನು ಶಿವಕುಮಾರ್ ಮಾಡಿದ್ದರು.

ಕೈ ಹಿಡಿಯುವರೇ ಡಿಕೆಶಿ

ನಾಲ್ಕು ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ನಾಲ್ಕೂ ಕಡೆ ಕಾಂಗ್ರೆಸ್ ಶಾಸಕರೇ ಇದ್ದಾರೆ. ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಮೊದಲ ಸಲ ಗೆದ್ದಿದ್ದರೆ, ಚನ್ನಪಟ್ಟಣದಲ್ಲಿರುವ ಸಿ.ಪಿ. ಯೋಗೇಶ್ವರ್ ಉಪ ಚುನಾವಣೆಯಲ್ಲಿ ಬಿಜೆಪಿ ತೊರೆದು ‘ಕೈ’ ಹಿಡಿದಿದ್ದಾರೆ. ಮಾಗಡಿಯಿಂದ ಐದು ಬಾರಿ ಶಾಸಕರಾಗಿರುವ ಬಾಲಕೃಷ್ಣ ಅವರಿಗೆ ರಾಜಕೀಯ ಹಿರಿತನಕ್ಕಾಗಿ ಸಚಿವ ಸ್ಥಾನದ ಮಣೆ ಹಾಕಲಿದ್ದಾರೆಂಬ ನಿರೀಕ್ಷೆಯಲ್ಲಿದ್ದಾರೆ ಬೆಂಬಲಿಗರು. ಶಿವಕುಮಾರ್ ಕೈ ಬಿಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದಾರೆ ಬಾಲಕೃಷ್ಣ.

ಸಚಿವರಾಗಿದ್ದ ಬಾಲಕೃಷ್ಣ ತಂದೆ

ಪ್ರಭಾವಿ ರಾಜಕೀಯ ನಾಯಕರಾಗಿದ್ದ ಬಾಲಕೃಷ್ಣ ಅವರ ತಂದೆ ಎಚ್.ಜಿ. ಚನ್ನಪ್ಪ ಅವರು ಕ್ಷೇತ್ರವನ್ನು 3 ಸಲ ಪ್ರತಿನಿಧಿಸಿದವರು. ಪಕ್ಷೇತರ, ಕಾಂಗ್ರೆಸ್ ಹಾಗೂ ಜನತಾ ದಳದಿಂದ ಗೆದ್ದಿದ್ದ ಅವರು ಎಸ್.ಆರ್. ಬೊಮ್ಮಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಕೆಲವೇ ದಿನ ಮುಜರಾಯಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ತಂದೆ ಹಾದಿಯಲ್ಲಿ ರಾಜಕೀಯ ಹಾದಿ ಹಿಡಿದ ಬಾಲಕೃಷ್ಣ, ಜೆಡಿಎಸ್ನಲ್ಲಿ ಹೆಚ್ಚಿನ ರಾಜಕೀಯ ಬದುಕು ಕಳೆದಿದ್ದರೂ ಅಲ್ಲಿ ಸಚಿವರಾಗುವ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-14-1365347848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.