ರಾಣೆಬೆನ್ನೂರು: ‘ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ನಿಜಲಿಂಗಪ್ಪ, ಬೊಮ್ಮಾಯಿ ಇವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಮಾಡಲಿಲ್ಲ. ನಾನು ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಂಬಿಕೆ ಇಟ್ಟಿದ್ದೇನೆ. ಬಸವಣ್ಣನವರ ಅನುಯಾಯಿ. ಅದಕ್ಕಾಗಿ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿದೆ. ಎಲ್ಲ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲಾಗಿದೆ. ಬಸವ ಜಯಂತಿ ದಿನವೇ ಪ್ರಮಾಣ ವಚನ ಸ್ವೀಕರಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಭಾನುವಾರ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಹೇಳಿದಂತೆ ನಮ್ಮ ಸರ್ಕಾರ ನಡೆಯುತ್ತದೆ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಾನವೀಯತೆ ಬಹಳ ಮುಖ್ಯ’ ಎಂದರು.

‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸಂವಿಧಾನದ ಅಡಿಪಾಯ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇಲ್ಲದೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗದು. ಬಸವಣ್ಣನವರು ಹೇಳಿದಂತೆ ಎಲ್ಲರೂ ಕಾಯಕದಲ್ಲಿ ತೊಡಗಬೇಕು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ನೀಡುವುದು. ಬಂದಿದ್ದನ್ನು ಸಮನಾಗಿ ಹಂಚಿಕೊಳ್ಳಬೇಕು. ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು. ಎಲ್ಲ ಧರ್ಮಗಳು ಪ್ರೀತಿಸು ಎಂದೇ ಹೇಳಿವೆ. ದ್ವೇಷ ಮಾಡಲು ಹೇಳಿಲ್ಲ’ ಎಂದರು.

‘ದೇವರನ್ನು ಪೂಜಿಸಿ ಆದರೆ ಮೂಢನಂಬಿಕೆಗಳಿಂದ ದೂರವಿರಿ. ಯಾವ ದೇವರೂ ಹಣೆಬರಹ ಬರೆಯಲ್ಲ. ಬಸವಣ್ಣ, ಕನಕದಾಸ, ಸರ್ವಜ್ಞ ಹೇಳಿದ್ದು ಒಂದೇ– ನೆರೆ ಹೊರೆಯವರು ನಮ್ಮ ವಿರೋಧಿಗಳಾದರೂ ಅವರನ್ನು ಪ್ರೀತಿಸಬೇಕು. ಈಗಿನ ವಿದ್ಯಾವಂತರು, ಪಧವೀದರರೂ ಜಾತಿ ತಾರತಮ್ಯ ಮಾಡುವುದು ದುರಂತ’ ಎಂದರು.

‘ನಿಟ್ಟೂರು ಗ್ರಾಮದ ಜನತೆ ಶಾಸಕ ಪ್ರಕಾಶ ಕೋಳಿವಾಡ ಅವರೊಂದಿಗೆ ವಿಧಾನಸೌಧಕ್ಕೆ ಬಂದು ಸುವರ್ಣಮಹೋತ್ಸವಕ್ಕೆ ಒತ್ತಾಯ ಮಾಡಿದ್ದರು. ನಿಟ್ಟೂರಲ್ಲಿ ಕೇವಲ 13 ಕುರುಬರ ಮನೆತನದವರು ಇದ್ದಾರೆ. ಆದರೆ ಇಲ್ಲಿನ ಎಲ್ಲ ವರ್ಗದವರು ಒಗ್ಗಟ್ಟಿನಿಂದ ಸೇರಿಕೊಂಡು ಈ ಬೀರಲಿಂಗೇಶ್ವರ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.

‘ಈ ವರ್ಷ ಹವಾಮಾನ ಮುನ್ಸೂಚನೆ ಪ್ರಕಾರ ಶೇ 5ರಷ್ಟು ಮಳೆ ಕಡಿಮೆ ಆಗುತ್ತದೆ. ರಾಣೆಬೆನ್ನೂರು ಶಾಸಕ ರಿಂಗ್ ರಸ್ತೆ ಮಾಡಲು ಮನವಿ ಮಾಡಿದ್ದಾರೆ. ಶೇ 30 ರಷ್ಟು ಮಾತ್ರ ರಿಂಗ್ ರೋಡ್ ಕಾಮಗಾರಿ ಉಳಿದಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು. ನಿಟ್ಟೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡಲಾಗುವುದು’ ಎಂದರು.

‘ಕೆ.ಬಿ. ಕೋಳಿವಾಡ ಸ್ಪೀಕರ್ ಆಗಿದ್ದಾಗ ಉತ್ತಮ ಕೆಲಸ ಮಾಡಿದ್ದರು. ಈಗ ಅವರ ಮಗ ಪ್ರಕಾಶ ಕೋಳಿವಾಡ ಅವರೂ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದರು.

ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು. ಶಾಸಕರಾದ ಯು.ಬಿ. ಬಣಕಾರ, ಯಾಶಿರ್ಖಾನ್ ಪಠಾಣ, ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಎಸ್.ರಾಮಪ್ಪ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಮಂಜುನಾಥ ಗೌಡಶಿವಣ್ಣನವರ, ಮಂಜನಗೌಡ ಪಾಟೀಲ, ಚೋಳಪ್ಪ ಕಸವಾಳ, ಶಿವಪ್ಪ ಹೇಮಪ್ಪ ನಂದೀಹಳ್ಳಿ, ಷಣ್ಮುಖಪ್ಪ ಕಂಬಳಿ, ಹನುಮಂತಪ್ಪ ದೇವರಗುಡ್ಡ, ಕುಬೇರಪ್ಪ ಕಂಬಳಿ ಹಾಗೂ ಬೀರಲಿಂಗೇಶ್ವರ ಸೇವಾ ಸಮಿತಿಯ ಎಸ್.ಕೆ. ಜೋಗಿ, ಎಚ್.ಪದ್ಮಪ್ಪ, ಚಂದ್ರಪ್ಪ ಪೂಜಾರ, ನಾಗಪ್ಪ ಜೋಗೇರ, ಹೊನ್ನಪ್ಪ ಪೂಜಾರ, ಬೀರಪ್ಪ ಪೂಜಾರ, ಬೀರಪ್ಪ ಕುಂಟನವರ, ಮಂಜಪ್ಪ ಪೂಜಾರ, ರಾಮಣ್ಣ ಗೂಳಪ್ಪರ, ಸುರೇಶಪ್ಪ ಬಾನುವಳ್ಳಿ, ಜಿಲ್ಲಾಧಿಕಾರಿ ವಿಜಯ ಮಹಾತೇಂಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಶಿರಕೋಳ, ಡಿವೈಎಸ್ಪಿ ಲೊಕೇಶ ಜೆ, ತಹಶೀಲ್ದಾರ್ ಆರ್.ಎಚ್.ಭಾಗವಾನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-22-1725127888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.