ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ ಶಿಕ್ಷಣದಲ್ಲೂ ಮೀಸಲಾತಿ: ಎಸ್‌ಇಪಿ ಆಯೋಗ ಚಿಂತನೆ

Published : 11 ಸೆಪ್ಟೆಂಬರ್ 2024, 19:23 IST
Last Updated : 11 ಸೆಪ್ಟೆಂಬರ್ 2024, 19:23 IST
ಫಾಲೋ ಮಾಡಿ
Comments

ಬೆಂಗಳೂರು: ಶಾಲಾ ಶಿಕ್ಷಣದಲ್ಲೂ ಮೀಸಲಾತಿ ಪರಿಚಯಿಸುವ ಸಾಧ್ಯತೆ ಕುರಿತು ರಾಜ್ಯ ಶಿಕ್ಷಣ ನೀತಿ ಆಯೋಗದ (ಎಸ್‌ಇಪಿ) ಅಡಿಯಲ್ಲಿ ರಚಿಸಲಾದ ಕಾರ್ಯಪಡೆ ಚರ್ಚೆ ನಡೆಸಿದೆ.

ಈಗಾಗಲೇ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳಿಗೆ ಮೀಸಲಾತಿ ದೊರೆಯುತ್ತಿದೆ. ಉನ್ನತ ಶಿಕ್ಷಣದ ಮಾದರಿಯಲ್ಲಿ ಶಾಲಾ ಶಿಕ್ಷಣದಲ್ಲೂ ಮೀಸಲಾತಿ ನೀಡುವ ಕುರಿತು ಹಲವು ಸಂಘಟನೆಗಳು ಮನವಿ ಸಲ್ಲಿಸಿವೆ. ಇಂತಹ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಇಪಿ ಆಯೋಗದ ಮೂಲಗಳು ಹೇಳಿವೆ.

ಆರ್ಥಿಕ ದುರ್ಬಲ ವರ್ಗಗಳ ಶೇ 25ರಷ್ಟು ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯಲು ಹಿಂದೆ ರೂಪಿಸಲಾಗಿದ್ದ ನಿಯಮಗಳನ್ನು ಮರು ಜಾರಿಗೊಳಿಸಲು ಚಿಂತನೆ ನಡೆದಿದೆ. ಅದಕ್ಕಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ಟಿಇ) ಕಾಯ್ದೆಯ ಸೆಕ್ಷನ್ 12 (1) (ಸಿ)ಗೆ ಮಾಡಲಾಗಿದ್ದ ತಿದ್ದುಪಡಿಗಳನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಆಯೋಗ ಚಿಂತನೆ ನಡೆಸಿದೆ.

ಆರ್‌ಟಿಇ ಅಡಿ ಮಕ್ಕಳಿಗೆ ನೀಡುತ್ತಿರುವ ಪ್ರವೇಶವನ್ನು 12ನೇ ತರಗತಿ ಅಥವಾ 18 ವರ್ಷದವರೆಗೆ ವಿಸ್ತರಿಸಲು ಶಿಫಾರಸು ಮಾಡಬೇಕು ಎಂದು ಆರ್‌ಟಿಇ ವಿದ್ಯಾರ್ಥಿಗಳ ಪೋಷಕರ ಸಂಘ ಸಲ್ಲಿಸಿದ ಮನವಿ ಕುರಿತು ಆಯೋಗ ಚರ್ಚೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT