ಬೆಂಗಳೂರು: ಕಂದಾಯ ಇಲಾಖೆ ವರ್ಷದ ಅಂತ್ಯದೊಳಗೆ ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದ್ದು, ಪ್ರತಿಯೊಂದು ದಾಖಲೆಯ ಪ್ರತಿಯೂ ಡಿಜಿಟಲ್ ರೂಪದಲ್ಲಿ ಸಿಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ‘ರೋವರ್ ಮೂಲಕ ಸರ್ವೇ ಪೂರ್ಣಗೊಳಿಸಿದರೆ ಸ್ಕೆಚ್, ಟಿಪ್ಪಣಿ, ಆಕಾರ್ ಬಂದ್, ಕೈಬರಹ ಸೇರಿ ಪ್ರತಿಯೊಂದರ ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ. ಹತ್ತಾರು ವರ್ಷಗಳಿಂದ ಆಗದ ಕೆಲಸಗಳು ಸಾವಿರ ದಿನಗಳಲ್ಲಿ ಆಗಿವೆ’ ಎಂದರು.

2,05,757 ರೈತರ ಜಮೀನುಗಳ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮೂರು ತಿಂಗಳುಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಸರ್ವೆ ಪೂರ್ಣಗೊಳಿಸಲಾಗುವುದು. 1,07,217 ರೈತರ ಕಡತಗಳನ್ನು ಕಾಣೆಯಾದ ಕಡತಗಳ ಸಮಿತಿಗೆ ಕಳುಹಿಸಲಾಗಿದೆ. 3,662 ರೈತರಿಗೆ ದಾಖಲೆ ನೀಡಲಾಗಿದೆ. 50,000 ಕಡತಗಳನ್ನು ಮೂರು ತಿಂಗಳಲ್ಲಿ ವಿಲೇಗೊಳಿಸಲು ಗಡುವು ನೀಡಲಾಗಿದೆ ಎಂದು ಹೇಳಿದರು.

‘1.06 ಲಕ್ಷ ರೈತರ ದಾಖಲೆಗಳು ಮಂಜೂರು ವಿಸ್ತೀರ್ಣಕ್ಕಿಂತ ಹೆಚ್ಚು ಇದ್ದು, ವಾಸ್ತವ ಅನುಭವವನ್ನು ಸ್ಥಳದಲ್ಲಿಯೇ ಸರ್ವೆ ಮಾಡಿ ಇತ್ಯರ್ಥ ಮಾಡಬೇಕು. 3.50 ಲಕ್ಷ ರೈತರ ಮಂಜೂರು ಕಡತಗಳನ್ನು ಒಂದು ತಿಂಗಳೊಳಗೆ ತಯಾರಿಸಬೇಕು. 11,74,226 ರೈತರ ದಾಖಲೆಗಳನ್ನು ಒದಗಿಸುವ ಅಭಿಯಾನಕ್ಕೆ ವೇಗ ನೀಡಬೇಕೆಂದು ಸೂಚಿಸಲಾಗಿದೆ’ ಎಂದರು.

ಫೌತಿ ಖಾತೆ ಅಭಿಯಾನ

ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ. ಅವರ ವಾರಸುದಾರರು ಕ್ರಯ, ಸಾಲ, ವಿಭಾಗ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಭೂದಾಖಲೆಗಳು ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ. ಈಗಾಗಲೇ ವಾರಸುದಾರರ ಮನೆ ಬಾಗಿಲಿಗೆ ತೆರಳಿ 13 ಲಕ್ಷ ಜಮೀನುಗಳ ಪೌತಿ ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.