ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರ ಪಾತ್ರದ ಕುರಿತು ಅದೇ ಸಮುದಾಯದ ಶಾಸಕರ ಆಕ್ರೋಶ ಮತ್ತಷ್ಟು ಹುರಿಗೊಂಡಿದೆ.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಿಸಿದ್ದರಿಂದಾಗಿ ವಸತಿ ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಎಂಬುದು ಅದೇ ಸಮುದಾಯದ ನಾಯಕರ ಆರೋಪ.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಬ್ದುಲ್ ಜಬ್ಬಾರ್, ಶಾಸಕ ರಿಜ್ವಾನ್ ಅರ್ಷದ್ ಮತ್ತು ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ರಿಜ್ವಾನ್ ಅರ್ಷದ್, ‘ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್ ಗೇಮ್ ಆಡಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು’ ಎಂದು ಸಚಿವ ಜಮೀರ್ ಹೆಸರು ಹೇಳದೇ, ಗಂಭೀರ ಆರೋಪ ಮಾಡಿದರು.

‘ಅಲ್ಪಸಂಖ್ಯಾತರ ಚಾಂಪಿಯನ್ ಎನಿಸಿಕೊಂಡವರು ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು. ಮುಖ್ಯಮಂತ್ರಿಯ ಮುಂದೆಯೂ ಅದೇ ‘ಒಬ್ಬ ನಾಯಕರು’, ಕೊಟ್ಟರೆ ಜಬ್ಬಾರ್ಗೆ ಕೊಡಿ ಎಂದರು. ಜಬ್ಬಾರ್ ಬಿಟ್ಟರೆ ಬೇರೆ ಮುಸ್ಲಿಂ ಆಕಾಂಕ್ಷಿಗಳು ಇರಲಿಲ್ಲವೇ? ಒಬ್ಬ ವ್ಯಕ್ತಿಯ ಪರ ನಿಂತು ಸಮುದಾಯದ ಪರ ಎಂದು ಹೇಳಿಕೊಳ್ಳುವುದು ಸರಿಯೇ? ಟಿಕೆಟ್ ನೀಡದೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುವುದು ಸರಿಯೇ’ ಎಂದು ಕಿಡಿಕಾರಿದರು.

‘ಜಬ್ಬಾರ್ ಪರ ಪಟ್ಟು ಹಿಡಿದಿದ್ದು ಯಾರು’ ಎಂಬ ಪ್ರಶ್ನೆಗೆ, ‘ಅವರು ಯಾರು ಎಂಬುದನ್ನು ನೀವೇ ತಿಳಿದುಕೊಳ್ಳಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರಕ್ಕೆ ಬಾರದವರು ಮೂವರು. ಒಬ್ಬರ ಮೇಲೆ ಕ್ರಮ ಆಗಿದೆ. ಇನ್ನಿಬ್ಬರು ಇದ್ದಾರಲ್ಲ, ಅದರಲ್ಲಿ ಒಬ್ಬರು ಜಬ್ಬಾರ್ಗೆ ಟಿಕೆಟ್ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದರು’ ಎಂದು ಸೂಕ್ಷ್ಮವಾಗಿ ಜಮೀರ್ ವಿರುದ್ಧ ಆರೋಪಿಸಿದರು.

ಬಿಜೆಪಿ ಗೆಲ್ಲಿಸಲು ಯತ್ನ: ‘ಮತ ವಿಭಜಿಸಿ ಬಿಜೆಪಿ ಗೆಲ್ಲಿಸಬೇಕೆಂದು ಯಾರು ಪ್ರಯತ್ನಪಟ್ಟರು ಎಂಬುದು ಗೊತ್ತಿದೆ. ಅವರ ಪ್ರಯತ್ನ ಯಾವುದೇ ಫಲ ನೀಡಿಲ್ಲ. ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಇನ್ಬೊಬ್ಬ ನಾಯಕ ಇಲ್ಲ ಎನ್ನುವ ಭಾವನೆಯಲ್ಲಿದ್ದಾರೆ. ಇದರಿಂದಲೇ ಮುಸ್ಲಿಂ ನಾಯಕ ಪಟ್ಟಕ್ಕೆ ಧಕ್ಕೆ ಬಂದಿದೆ’ ಎಂದರು.

‘ಚುನಾವಣೆಯಲ್ಲಿ ಯಾವ ಮುಸ್ಲಿಂ ನಾಯಕರು, ಹೇಗೆ ಕೆಲಸ ಮಾಡಿದರು ಎಂಬ ಬಗ್ಗೆ ಹೈಕಮಾಂಡ್ಗೆ ಗೊತ್ತಿದೆ. ನಾವು ಬಿಜೆಪಿ ಸೋಲಿಸಲು ಹೋಗಿದ್ದೆವು. ಆದರೆ, ನಮ್ಮಲ್ಲಿ ಕೆಲವರು ಡಬಲ್ ಗೇಮ್ ಆಡಿದರು’ ಎಂದೂ ರಿಜ್ವಾನ್ ಆರೋಪಿಸಿದರು.

ಜಬ್ಬಾರ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಅವರ ಪತ್ರದಲ್ಲಿ ಏಪ್ರಿಲ್ 3 ಎಂದು ಇದೆ. ಬಹುಶಃ ಕಾಂಗ್ರೆಸ್ಗೆ ಹಿನ್ನಡೆ ಆಗಲಿ ಎಂದು ಆಗಲೇ ರಾಜೀನಾಮೆ ಬರೆದಿಟ್ಟುಕೊಂಡಿದ್ದರೋ ಏನೋ ಗೊತ್ತಿಲ್ಲ’ ಎಂದು ದೂರಿದರು.

‘ಜಬ್ಬಾರ್ ಹೆಸರು ಉಲ್ಲೇಖಿಸಿ ಆರೋಪ ಮಾಡಿಲ್ಲ’

‘ಅಬ್ದುಲ್ ಜಬ್ಬಾರ್ ಅವರ ಹೆಸರು ಹೇಳಿ ನಾನು ಆರೋಪ ಮಾಡಿಲ್ಲ. ನನ್ನ ವಿರುದ್ಧ ಜಬ್ಬಾರ್ ಮಾಡುತ್ತಿರುವ ಸುಳ್ಳು ಆರೋಪ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ’ ಎಂದು ಸಲೀಂ ಅಹಮದ್ ಹೇಳಿದರು. ‘ಕಾಣದ ಕೈಗಳು ಕೆಲಸ ಮಾಡಿವೆ ಎಂದು ಹೇಳಿದ್ದೇನೆ. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ ಅವರು ಹೈಕಮಾಂಡ್ಗೆ ವರದಿ ನೀಡಿದ್ದಾರೆ. ನಾವು ಆರೋಪ ಮಾಡಿರುವುದಕ್ಕೆ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ ಎಂಬುದು ಸುಳ್ಳು’ ಎಂದರು. ‘ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕರೆದಿಲ್ಲ ಎಂಬ ಕಾರಣಕ್ಕೆ ಅಬ್ದುಲ್ ಜಬ್ಬಾರ್ ಪ್ರಚಾರಕ್ಕೆ ಬಂದಿಲ್ಲ’ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಲೀಂ ‘ನನ್ನನ್ನು ಕೆಪಿಸಿಸಿಯಿಂದ ವೀಕ್ಷಕರನ್ನಾಗಿ ಮಾಡಿದ್ದರು. ನನ್ನನ್ನೇ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕರೆಯಲಿಲ್ಲ. ಕೆಪಿಸಿಸಿ ಅಧ್ಯಕ್ಷರು ಮುಖ್ಯಮಂತ್ರಿ ಸುರ್ಜೇವಾಲಾ ಹೇಳಿದರೆ ಸಾಕಲ್ಲವೇ? ಸಮರ್ಥ್ ಕೇವಲ ಹೆಸರಷ್ಟೇ ನಮ್ಮ ಕರ್ತವ್ಯ ನಾವು ನಿಭಾಯಿಸಬೇಕಲ್ಲವೇ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.