ಬೆಂಗಳೂರು: ಕರ್ನಾಟಕವನ್ನು ಶುದ್ಧ ಇಂಧನ ಸಂಚಾರ (ಕ್ಲೀನ್ ಮೊಬಿಲಿಟಿ) ಮತ್ತು ವಿದ್ಯುತ್ ಚಾಲಿತ ವಾಹನಗಳ (ಇವಿ) ತಯಾರಿಕೆಯ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಹೂಡಿಕೆದಾರರನ್ನು ಆಕರ್ಷಿಸಲು ಸ್ವೀಡನ್ನ ಗೋಥೆನ್ಬರ್ಗ್ನಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ರೋಡ್ ಶೋ ನಡೆಸಿತು.

ಕಳೆದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2025’ ರಲ್ಲಿ ಆಗಿರುವ ಹೂಡಿಕೆ ಒಪ್ಪಂದಗಳನ್ನು ತ್ವರಿತವಾಗಿ ಜಾರಿಗೊಳಿಸಲು ಮತ್ತು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು 10 ದಿನಗಳ ಅಂತರರಾಷ್ಟ್ರೀಯ ರೋಡ್ ಶೋ ನಡೆಯಲಿದೆ ಎಂದು ಕೈಗಾರಿಕಾ ಇಲಾಖೆ ಪ್ರಕಟಣೆ ತಿಳಿಸಿದೆ.

ಇಲ್ಲಿ ನಡೆಯುತ್ತಿರುವ ಇವಿಎಸ್ 38 ಶೃಂಗಸಭೆಯು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಬಳಕೆ ಹೆಚ್ಚಳ ಮತ್ತು ಅತ್ಯಾಧುನಿಕ ವಾಹನ ತಯಾರಿಕೆಯ ತಂತ್ರಜ್ಞಾನಗಳ ಕುರಿತ ಪ್ರಮುಖ ಜಾಗತಿಕ ಸಮ್ಮೇಳನವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಸದೃಢ ಇ.ವಿ ನೀತಿ, ತಯಾರಿಕಾ ಸಾಮರ್ಥ್ಯ ಮತ್ತು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿರುವ ನವೋದ್ಯಮಗಳ ಸಾಧನೆಯನ್ನು ಜಾಗತಿಕ ಹೂಡಿಕೆದಾರರಿಗೆ, ಉದ್ಯಮ ದಿಗ್ಗಜರಿಗೆ ಮನವರಿಕೆ ಮಾಡಿಕೊಟ್ಟು, ಹೂಡಿಕೆಗೆ ಆಹ್ವಾನ ನೀಡಿದರು.

ಪಾಟೀಲ ಅವರು ವೋಲ್ವೊ ಗ್ರೂಪ್ ಅಧ್ಯಕ್ಷ ಮತ್ತು ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಕರ್ನಾಟಕದಲ್ಲಿ ತನ್ನ ವಾಹನಗಳ ತಯಾರಿಕಾ ಸಾಮರ್ಥ್ಯ ವಿಸ್ತರಿಸಲು ಬದ್ಧರಿರುವುದಾಗಿ ಮಾರ್ಟಿನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.