ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಳ್ಳಬೇಕೆಂಬ ಅರ್ಜಿದಾರರ ಪೂರ್ವಾನುಮತಿ ಕೋರಿಕೆಯನ್ನು ನಿರಾಕರಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಆದೇಶವನ್ನು ರದ್ದುಗೊಳಿಸಿದೆ.

‘ಈ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ 4 ವಾರಗಳಲ್ಲಿ ನ್ಯಾಯದ ಹಿತದೃಷ್ಟಿಯಿಂದ ತನಿಖೆಗೆ ಆದೇಶ ನೀಡಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.

‘ಭ್ರಷ್ಟಾಚಾರದಂತಹ ಗಂಭೀರ ಆರೋಪಗಳನ್ನು ಆರಂಭದಲ್ಲೇ ನಂದಿಸುವುದು ಸಾಧುವಲ್ಲ. ತನಿಖೆಯ ಮೂಲಕ ನಿಜಾಂಶ ಬಯಲು ಮಾಡಲು ಅವಕಾಶ ನೀಡಬೇಕು. ಆಗ ಮಾತ್ರ ಜನರಿಗೆ ಸತ್ಯ ಅರ್ಥವಾಗುತ್ತದೆ. ಹಾಲಿ ಪ್ರಕರಣದ ಆರೋಪಗಳು ಸಾರ್ವಜನಿಕ ಪ್ರಾಮಾಣಿಕತೆಯ ಹೃದಯವನ್ನೇ ಜಖಂಗೊಳಿಸುವಂತಿವೆ. ರೋಹಿಣಿ ಸಿಂಧೂರಿ ಕೇವಲ ಆಡಳಿತಾತ್ಮಕ ಲೋಪ ಎಸಗಿದ್ದಾರೆ ಎಂಬುದಲ್ಲ. ಇವರ ನಿರ್ಧಾರದಿಂದ ಸಾರ್ವಜನಿಕ ಬೊಕ್ಕಸಕ್ಕೆ ಗಂಭೀರವಾದ ನಷ್ಟ ಉಂಟಾಗಿರುವುದು ಗಮನಾರ್ಹ’ ಎಂದು ನ್ಯಾಯಪೀಠ ವಿವರಿಸಿದೆ.

‘ತನಿಖೆಗೆ ಪೂರ್ವಾನುಮತಿ ನೀಡಲು ನಿರಾಕರಿಸಿರುವ ನಿರ್ಧಾರ ವಸ್ತುನಿಷ್ಠ ಮತ್ತು ತರ್ಕಬದ್ಧವಾಗಿಲ್ಲ. ಆರೋಪಗಳ ಗಂಭೀರತೆಯನ್ನು ಗಮನವಿಟ್ಟು ಪರಿಶೀಲಿಸಿ ನ್ಯಾಯೋಚಿತ ನಿರ್ಧಾರ ಕೈಗೊಳ್ಳಲು ಇಲಾಖೆ ವಿಫಲವಾಗಿದೆ. ಅಷ್ಟೇ ಅಲ್ಲ, ಇದು ಅಧಿಕಾರಿ ವರ್ಗದ ಯಾಂತ್ರಿಕ ಕಸರತ್ತಿನಂತೆ ಕಾಟಾಚಾರದ ಪ್ರತಿಬಿಂಬವಾಗಿದೆ’ ಎಂದು ಡಿಪಿಎಆರ್ ನಿರ್ಧಾರವನ್ನು ನ್ಯಾಯಪೀಠ ಟೀಕಿಸಿದೆ.

‘ಇಲಾಖಾ ವಿಚಾರಣೆಗಳು ಮತ್ತು ಕ್ರಿಮಿನಲ್ ವಿಚಾರಣೆಗಳು ವಿಭಿನ್ನ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಪರಿಗಣಿಸಲಾಗುವ ಪುರಾವೆ ಮತ್ತು ಉದ್ದೇಶದ ಮಾನದಂಡಗಳನ್ನು ಪ್ರತ್ಯೇಕ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. ಇಲಾಖಾ ವಿಚಾರಣೆಯಲ್ಲಿ ಅಧಿಕಾರಿಯನ್ನು ದೋಷಮುಕ್ತಗೊಳಿಸಿದ ಮಾತ್ರಕ್ಕೆ ಕ್ರಿಮಿನಲ್ ತನಿಖೆಯನ್ನು ತಡೆಯಲಾಗದು ಎಂಬುದು ನ್ಯಾಯಾಂಗ ಪರಾಮರ್ಶೆಯಲ್ಲಿ ಇತ್ಯರ್ಥವಾಗಿರುವ ಅಂಶ’ ಎಂಬುದನ್ನು ಮೆಲುಕುಹಾಕಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಬಿಪಿನ್ ಹೆಗಡೆ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-51-1587654740

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.