ಮೈಸೂರು: ‘ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾನೂ ಅಪೇಕ್ಷಿತ. ನಾನು ಸಕ್ರೀಯ ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದೇನೆ. ಹೀಗಾಗಿ ಪಕ್ಷದ ಹಿರಿಯರು ರಾಜ್ಯಸಭೆ ಅಥವಾ ಬೇರೆ ಯಾವುದೇ ಸ್ಥಾನಮಾನ ನೀಡಿದರೆ ನಿಭಾಯಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಇಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ‘ಎನ್ಡಿಎ ಮಿತ್ರ ಪಕ್ಷದ ಸ್ಥಾನ ಖಾಲಿಯಾಗುವ ಕಾರಣ ಈ ಬಗ್ಗೆ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ. ನಾನು ರಾಜ್ಯಸಭಾ ಸ್ಥಾನದ ಅಪೇಕ್ಷಿತ ಎಂಬುದನ್ನು ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ‘ನಮ್ಮಲ್ಲಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪ ಇಲ್ಲ. ಈಗ ಅವರು ಎರಡು ವರ್ಷ ಮುಗಿಸಿದ್ದು, ಇನ್ನೊಂದು ವರ್ಷದಲ್ಲಿ ಅವಧಿಯೇ ಮುಗಿಯುತ್ತದೆ. ಬಿಜೆಪಿ ಎಲ್ಲಾ ಕಡೆ ಜಯಭೇರಿ ಭಾರಿಸುತ್ತಿದ್ದು, ರಾಜ್ಯದಲ್ಲಿ ಹಿಂದೆ ಜನಸೇವೆ ಮಾಡಿದ ಬಿಜೆಪಿಯನ್ನು ಹೇಗೆ ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವ ಮೂಲ ವಿಚಾರ ತಿಳಿಸುವ ಕೆಲಸವಾಗುತ್ತಿದೆ’ ಎಂದರು.

ಕಾಂಗ್ರೆಸ್ ಎಸ್ಐಆರ್ಗೆ ವಿರೋಧ ವ್ಯಕ್ತಪಡಿಸುವ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ರಾಜ್ಯದ ಜನ ತನಗೆ ಕೊಟ್ಟ ಜವಬ್ದಾರಿ ನಿರ್ವಹಿಸಲಾಗದೆ. ಜನ ನಮ್ಮ ಮೇಲೆ ಮುಗಿ ಬಿದ್ದಾಗ ಅವರ ದಿಕ್ಕು ತಪ್ಪಿಸಲು ಎಸ್ಐಆರ್ ಬಗ್ಗೆ ಸುಳ್ಳು ಹರಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯಿಂದ ಜನ ರೋಸಿ ಹೋಗಿದ್ದಾರೆ. ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಐವತ್ತು ಸ್ಥಾನಕ್ಕಿಂತ ಕೆಳಗಿಳಿಯಲಿದೆ’ ಎಂದರು.

ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ ಬಗ್ಗೆ ಮಾತನಾಡಿ, ‘ಜಾಗತಿಕ ಮಟ್ಟದಲ್ಲಿ ಸಮಸ್ಯೆ ಬಂದರೂ ಅದನ್ನು ಹತೋಟಿಯಲ್ಲಿಡುವ ಕೆಲಸ ಆಗಿದೆ. ಹೀಗಾಗಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿದೆ. ಆದರೂ ಯಾರಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.