ಕಡೂರು: ಸಖರಾಯಪಟ್ಟಣದ ಐತಿಹಾಸಿಕ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಎರಡು ದಿನ ಹಮ್ಮಿಕೊಂಡಿದ್ದ ಅಷ್ಟಾಕ್ಷರ ಮಹಾಯಾಗದ ಪೂರ್ಣಾಹುತಿ ಗುರುವಾರ ನೆರವೇರಿತು.

ಈ ವೇಳೆ ಮಾತನಾಡಿದ ಆಗಮ ವಿದ್ವಾನ್ ಶ್ರೀನಿವಾಸ ರಾಘವನ್, ‘ಮನುಷ್ಯರಾಗಿ ಹುಟ್ಟುವುದು ಪುಣ್ಯ ವಿಶೇಷವಾಗಿದ್ದು ಬದುಕಿರುವಷ್ಟು ದಿನ ನಾವು ಸಮಾಜಕ್ಕೆ, ಜನರಿಗೆ ಒಳ್ಳೆಯದನ್ನು ಮಾಡುತ್ತ ಮೋಕ್ಷ ಸಾಧನೆ ಮಾಡಬೇಕು’ ಎಂದು ಹೇಳಿದರು.

ಅಷ್ಟಾಕ್ಷರ ಮಹಾಯಾಗ ಮಾಡುವುದು ಸ್ಥಳದ ಮತ್ತು ದೇಶದ ಒಳಿತಿಗಾಗಿ. ಇದರಿಂದ ಮಳೆ, ಬೆಳೆ ಸಮೃದ್ಧವಾಗಿ ಜನರ ಆರೋಗ್ಯ ಸುಧಾರಿಸುವುದಲ್ಲದೆ ಸಂತೃಪ್ತಿಯಿಂದ ಬಾಳುವಂತಾಗುತ್ತದೆ ಎಂದರು.

ಯಾಗದ ನೇತೃತ್ವ ವಹಿಸಿದ್ದ ಪ್ರಧಾನ ಅರ್ಚಕ ಸುದರ್ಶನ್ ಭಾರದ್ವಾಜ್, ಶ್ರೀವತ್ಸ ಭಾರದ್ವಾಜ್ ಮಾತನಾಡಿ, ಅಷ್ಟಾಕ್ಷರ ಮಹಾಯಾಗವು ಮೂಲಮಂತ್ರದ ಮುಖೇನ ಜಗತ್ತಿನ ಪಾಲಕ ವಿಷ್ಣುವಿಗೆ ಅರ್ಪಿತವಾದ ಪವಿತ್ರವಾದ ಯಾಗವಾಗಿದೆ. ಇದರಿಂದ ಮೋಕ್ಷ ಪ್ರಾಪ್ತಿ, ಸಕಲ ಇಷ್ಟಾರ್ಥ ಸಿದ್ಧಿ, ಪಾಪ ನಿವಾರಣೆ, ಆರೋಗ್ಯ ಮತ್ತು ಆಯುಷ್ಯ ಲಭಿಸಲಿದೆ ಎಂದರು.

ದೇವಾಲಯ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿದರು.

ಧಾರ್ಮಿಕ ಕಾರ್ಯದಲ್ಲಿ ಕೇಶವ ರಂಗದ ಯುವ ಪಡೆ, ದಾನಿಗಳು, ಭಕ್ತರು ಭಾಗವಹಿಸಿದ್ದರು. ಎರಡೂ ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-126-2001125884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.