ಬೆಂಗಳೂರು: ‘ಸಿದ್ದರಾಮಯ್ಯ ವಿರುದ್ಧ ಸಹಿ ಸಂಗ್ರಹ ಎಂಬುದೆಲ್ಲಾ ಸುಳ್ಳು. ಯಾರೋ ಹಾಕಿರುವ ಪೋಸ್ಟ್ಗೆ ಮಹತ್ವ ಕೊಡುವ ಅಗತ್ಯವಿಲ್ಲ. ಯಾವ ಸಹಿಯೂ ಹಾಕಿಲ್ಲ’ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯ ಆಪ್ತರೇ ಚೂರಿ ಹಾಕಿದರು ಎಂಬ ವಿಚಾರಕ್ಕೆ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಅವರು, ‘37 ಜನರು ಸಿದ್ದರಾಮಯ್ಯ ವಿರುದ್ದ ಸಹಿ ಹಾಕಿದ್ದರೆ, ಉಳಿದ 100 ಮಂದಿ ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದರು.

‘ಒಪ್ಪಂದದ ಪ್ರಕಾರ ಅವರು ಕೆಳಗೆ ಇಳಿದಿದ್ದಾರೆ. ಯಾವಾಗಲಾದರೂ ಕೆಳಗೆ ಇಳಿಯಲೇಬೇಕು, ಈಗ ಅಥವಾ ಎರಡು ವರ್ಷ ಆದ ಮೇಲೆ. ಹಿಂದೆ ಬಂಗಾರಪ್ಪ , ದೇವರಾಜ್ ಅರಸು ಎಲ್ಲರೂ ಇಳಿದಿದ್ದರು’ ಎಂದು ಹೇಳಿದರು.

‘ಸಿದ್ದರಾಮಯ್ಯ ಕೆಳಗಿಳಿಯಲೇಬೇಕಿತ್ತು. ನಾಯಕತ್ವ ವಿಚಾರ ದೆಹಲಿಯಲ್ಲಿ ಎಲ್ಲ ಮಾತುಕತೆ ಆಗಿರುವುದು. ಅವರು ಮಾತನಾಡುವಾಗ ಬೆಂಗಳೂರಲ್ಲಿ ಏನೂ ಆಗಿಲ್ಲ. ನಮ್ಮನ್ನು ಯಾರೂ ಆಗಲೂ ಕೇಳಿರಲಿಲ್ಲ. ಎಲ್ಲ ಅವರೇ ನಿರ್ಧಾರ ಮಾಡಿಕೊಂಡ ಪ್ರಕಾರ ಸಿದ್ದರಾಮಯ್ಯ ಕೆಳಗೆ ಇಳಿದಿದ್ದಾರೆ’ ಎಂದು ತಿಳಿಸಿದರು.

‘ಇನ್ನು ಎರಡು ವರ್ಷಗಳ ನಂತರವಾದರೂ ಸಿದ್ದರಾಮಯ್ಯ ಇಳಿಯಲೇಬೇಕಲ್ವಾ ? ಎಲ್ಲಾ ಸಂದರ್ಭಗಳಿಗೂ ನಾವು ಸಿದ್ದರಿರಬೇಕು’ ಎಂದರು.

‘ಅಹಿಂದ ಅಂದರೆ ಸುಮಾರು 500 ಜಾತಿಗಳಿವೆ. ನಾನು ಅಹಿಂದ ಧ್ವಜ ಕೊಂಡೊಯ್ತೇನೆ. ಯಾರಾದರೂ ಒಬ್ಬರು ಅಹಿಂದ ಧ್ವಜ ಒಯ್ಯಲೇಬೇಕಲ್ವಾ? ಹೊಸ ಅಹಿಂದ ನಾಯಕ ಉದಯ ಆಗಲೇಬೇಕು, ಆ ವ್ಯವಸ್ಥೆ ರಾಜ್ಯದಲ್ಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.