ಸವದತ್ತಿ: ‘ನಿಗಮ ಮಂಡಳಿ ಸೇರಿ 4.98 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿ ಲಕ್ಷಾಂತರ ಕುಟುಂಬಗಳನ್ನು ಬಡತನದಿಂದ ಮುಕ್ತರಾಗಿಸಿ. ಗ್ಯಾರಂಟಿ ಸ್ಥಗಿತಗೊಳಿಸಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ 891ನೇ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಹಾಗೂ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಧಾನಸಭೆಯಲ್ಲಿ ಹಣ, ವರ್ಗಾವಣೆ, ಆಡಳಿತ ಕುರಿತು ಮಾತ್ರ ಚರ್ಚೆ ನಡೆದಿವೆಯಾದರೂ ಚಿಕ್ಕ ಸಮುದಾಯಗಳಿಗಾಗಿ ಇಂದಿಗೂ ಚರ್ಚೆ ನಡೆಯುತ್ತಿಲ್ಲ. ರಾಜಕೀಯವಾಗಿ ಇವರಿಗೆ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಅವಕಾಶ ಸಿಕ್ಕಿಲ್ಲ. ಸಣ್ಣ ಸಮುದಾಯಗಳೆಲ್ಲವೂ ಒಗ್ಗೂಡಿ ರಾಜ್ಯದಲ್ಲಿ ಬದಲಾವಣೆ ತರಬೇಕಿದೆ’ ಎಂದರು.

ಬಿಡಿಸಿಸಿ ನಿರ್ದೇಶಕ ವಿ.ಕೆ. ಮಾಮನಿ ಮಾತನಾಡಿ, ‘ದಿ. ಚಂದ್ರಶೇಖರ ಮಾಮನಿ ಅವರು ಸಮುದಾಯಕ್ಕೆ ಜಾಗ ನೀಡಿದ್ದರು. ನಂತರ ದಿ. ಆನಂದ ಮಾಮನಿ ದೇವಸ್ಥಾನ ನಿರ್ಮಿಸಿ ಉದ್ಘಾಟಿಸಿದ್ದರು. ಇದೀಗ ಅವರ ಅಭಿವೃದ್ಧಿಗೆ ಸಹಕರಿಸುತ್ತೇನೆ’ ಎಂದರು.

ಬಿಡಿಸಿಸಿ ಮಾಜಿ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿದರು. ಚಿಕ್ಕುಂಬಿ ನಾಗಲಿಂಗ ಮಠದ ಅಭಿನವ ನಾಗಲಿಂಗ ಶ್ರೀ, ಉಗರಗೋಳ ನಿರ್ವಾಣೇಶ್ವರ ಮಠದ ಮಹಾಂತ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಗದೀಶ ಕೌಜಗೇರಿ, ವೈ.ವೈ. ಕಾಳಪ್ಪನವರ, ವಿರುಪಾಕ್ಷ ಹನಸಿ, ಅಲ್ಲಮಪ್ರಭು ಪ್ರಭುನವರ, ಕೆ.ಕೆ. ಪುಣೇದ, ಅಶೋಕ ಕೊಪ್ಪದ, ಈಶ್ವರ ಮೇಲಗೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-117871582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.