ಸೇಡಂ: ‘ಮನುಕುಲದ ಏಳಿಗೆಗೆ ವಚನ ಗಳಿಂದ ವೈಚಾರಿಕತೆಯ ಸಂದೇಶ ನೀಡಿದ ಬಸವಣ್ಣನವರ ವಚನಗಳು ಜೀವನದಲ್ಲಿ ಅಳವಡಿಕೆಯಾಗಲಿ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ನಗರದ ಮಾತೃಛಾಯಾ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ಬಸವ ಜಯಂತಿ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ಹೆಣ್ಣು, ಆಸ್ತಿ, ಸಂಪತ್ತು, ಸಾಮ್ರಾಜ್ಯಕ್ಕಾಗಿ ಕ್ರಾಂತಿ - ಹೋರಾಟಗಳು ನಡೆದಿವೆ. ಆದರೆ, ಸಮಾನತೆಗಾಗಿ ನಡೆದ ಕ್ರಾಂತಿ ಎಂದರೆ ಅದು ಬಸವಣ್ಣನವರ ವಚನ ಕ್ರಾಂತಿ. 800 ವರ್ಷಗಳ ಹಿಂದೆ ಪ್ರಜಾಪ್ರಭುತ್ವ ಕಲ್ಪನೆ ತಂದು ಕೊಟ್ಟಿದ್ದೆ ಕಲ್ಯಾಣದ ಅನುಭವ ಮಂಟಪ. ಹೀಗಾಗಿ ಕುಲಕ್ಕೊಬ್ಬ ಶರಣರ ಕಲ್ಪನೆ, ಮಹಿಳೆಯರಿಗೆ ಸಮಾನತೆಯ ಚಿಂತನೆ ಹಾಗೂ ಸಮ ಸಮಾಜದ ಕೊಡುಗೆ ಹಿರಿದಾಗಿದೆ’ ಎಂದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘12ನೇ ಶತಮಾನದ ವೈಚಾರಿಕ ಕ್ರಾಂತಿ ಸಾಮಾನ್ಯವಾದುದಲ್ಲ. ಮಾನವ ಕುಲ ಹೇಗೆ ಬದುಕಬೇಕು ಎಂಬ ದಾರಿತೋರಿಸಿದ್ದಾರೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದವರು ಬಸವಣ್ಣ. ಇಷ್ಟಲಿಂಗ ಪೂಜೆಯ ಮೂಲಕ ಸಂದೇಶ ನೀಡಿದರು. ಇಷ್ಟಲಿಂಗ ಪೂಜೆಯ ಹಿಂದೆ ವೈಜ್ಞಾನಿಕ ಸತ್ಯವಿದೆ’ ಎಂದು ಹೇಳಿದರು.

ಮುಂದಿನ ಬಸವ ಜಯಂತಿಗೆ ಕಲ್ಯಾಣದ ಅನುಭವ ಮಂಟಪ ಉದ್ಘಾಟನೆ: ‘ಬಸವ ಕಲ್ಯಾಣದಲ್ಲಿ ಸುಮಾರು ₹ 742 ಕೋಟಿ ಅನುದಾನದಲ್ಲಿ ಅನುಭವ ಮಂಟಪ ನಿರ್ಮಿಸಲಾಗುತ್ತಿದ್ದು, ಮುಂದಿನ ಬಸವ ಜಯಂತಿ ಒಳಗಾಗಿ ಅನುಭವ ಮಂಟಪ ಉದ್ಘಾಟಿಸಲಾಗುತ್ತದೆ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ‘ಅನುಭವ ಮಂಟಪವು ಧಾರ್ಮಿಕ, ಆಧ್ಯಾತ್ಮಿಕ, ಅಂತರರಾಷ್ಟ್ರೀಯ ಮಟ್ಟದ ಕೇಂದ್ರವಾಗಬೇಕು. 770 ಶರಣರ ಹೆಸರನ್ನು ಪ್ರತಿಯೊಂದು ಕಂಬದ ಮೇಲೆ ಇಡಲಾಗುತ್ತಿದೆ. ಅಲ್ಲದೆ ಇಷ್ಟಲಿಂಗ ಪೂಜೆ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿದರು. ಶಿವಶಂಕರೇಶ್ವರ ಶಿವಾಚಾರ್ಯ, ಸಿದ್ದವೀರ ಶಿವಾಚಾರ್ಯ, ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶಾಂತಸೋಮನಾಥ ಶಿವಾಚಾರ್ಯ, ಪಂಚಾಕ್ಷರಿ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಅಭಿನವ ಗವಿ ಸಿದ್ದಲಿಂಗ ಶಿವಾಚಾರ್ಯ, ಶಿವಸಿದ್ದಸೋಮೇಶ್ವರ ಶಿವಾಚಾರ್ಯ, ಕೇದಾರಲಿಂಗ ದೇವರು, ಶಂಭುಲಿಂಗೇಶ್ವರ ಸ್ವಾಮೀಜಿ, ಕರುಣೇಶ್ವರ ಶಿವಾಚಾರ್ಯ, ಮಾಜಿ ಉಪ ಸಭಾಪತಿ ಚಂದ್ರಶೇಖರೆಡ್ಡಿ ದೇಶಮುಖ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಶರಣಕುಮಾರ ಮೋದಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ, ರಾಜಶೇಖರ ನೀಲಂಗಿ, ಶಿವಕುಮಾರ ಪಾಟೀಲ ತೆಲ್ಕೂರ, ಸಿದ್ದಣ್ಣಶೆಟ್ಟಿ, ನಾಗರಾಜ ಪಾಟೀಲ ತೊಟ್ನಳ್ಳಿ, ಸಂತೋಷಿರಾಣಿ ಪಾಟೀಲ, ಡಾ.ಭಾಗ್ಯಶ್ರೀ ಪಾಟೀಲ ಇದ್ದರು. ಸಂಗಣ್ಣ ಅಲ್ದಿ ಸ್ವಾಗತಿಸಿದರು. ವೀರೇಶ ಹೂಗಾರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-31-99226512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.